ETV Bharat / sports

4ನೇ ಟಿ-20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​... ಕೊಹ್ಲಿ ಪಡೆಗೆ ಐಸಿಸಿ ದಂಡ! - ಕೊಹ್ಲಿ ಪಡೆಗೆ ದಂಡ

ನ್ಯೂಜಿಲೆಂಡ್​ ವಿರುದ್ಧ ನಡೆದ ನಾಲ್ಕನೇ ಟಿ-20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ಟೀಂ ಇಂಡಿಯಾಗೆ ದಂಡ ವಿಧಿಸಲಾಗಿದೆ.

Team india
ಟೀಂ ಇಂಡಿಯಾ
author img

By

Published : Feb 1, 2020, 4:54 PM IST

ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ ವಿರುದ್ಧ ನಡೆದ ನಾಲ್ಕನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೂಪರ್​ ಓವರ್​ ಮೂಲಕ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಸರಣಿಯಲ್ಲಿ 4-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ದಿಢೀರ್​ ಕುಸಿತದ ಹೊರತಾಗಿ ಕೂಡ 165 ರನ್ ​ಗಳಿಸಿದ್ದ ಟೀಂ ಇಂಡಿಯಾ, ಎದುರಾಳಿ ಪಡೆಯನ್ನು 165 ರನ್​ಗಳಿಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೊನೆಯ ಎರಡು ಓವರ್​ ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ಟೀಂ ಇಂಡಿಯಾ ಇದೀಗ ದಂಡ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಮ್ಯಾಚ್​ ರೆಫ್ರಿ ಕ್ರಿಸ್​ ಬೋರ್ಡ್​​ ಹಾಗೂ ಅಂಪೈರ್​ಗಳ ಸೂಚನೆ ಮೇರೆಗೆ ಈ ದಂಡ ವಿಧಿಸಲು ಐಸಿಸಿ ಸೂಚನೆ ನೀಡಿದೆ.

ಐಸಿಸಿ ನೀತಿ ಸಂಹಿತೆ 2.22 ಪ್ರಕಾರ ಇದೀಗ ಟೀಂ ಇಂಡಿಯಾ ತಂಡದ ಶೇ. 40ರಷ್ಟು ದಂಡ ಕಟ್ಟಬೇಕಾಗಿದ್ದು, ಪ್ರತಿ ಓವರ್​ಗೆ ಶೇ. 20ರಷ್ಟು ದಂಡ ವಿಧಿಸಲಾಗಿದೆ. ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ದಂಡಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.