ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಏರುತ್ತಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಇಂಡೋ-ಪಾಕ್ ಕ್ರಿಕೆಟ್ ಕದನದ ಬಗ್ಗೆ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಗಂಗೂಲಿ, ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕಾದರೆ ಅದಕ್ಕೆ ಎರಡು ದೇಶದ ಪ್ರಧಾನಿ ಮಂತ್ರಿಗಳ ಅನುಮತಿ ಅವಶ್ಯವಾಗಿ ಬೇಕಾಗುತ್ತದೆ. ಈ ವಿಷಯದ ಬಗ್ಗೆ ನೀವು ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಪಾಕಿಸ್ತಾನದ ಪ್ರಧಾನಮಂತ್ರಿಯನ್ನ ಕೇಳಬೇಕು ಎಂದಿದ್ದಾರೆ. ಇಂತಹ ಪ್ರಶ್ನೆಗಳಿಗೆ ಅವರಿಂದ ಅನುಮತಿ ಸಿಕ್ಕಾಗ ಮಾತ್ರ ಮುಂದಿನ ಕ್ರಮ ನಾವು ಕೈಗೊಳ್ಳಲು ಸಾಧ್ಯ. ಸದ್ಯದ ಸ್ಥಿತಿಯಲ್ಲಿ ಇಂತಹ ಪ್ರಶ್ನೆಗಳಿಗೆ ನಾವು ಉತ್ತರ ನೀಡುವುದಿಲ್ಲ ಎಂದಿದ್ದಾರೆ.
ಭಾರತ - ಪಾಕಿಸ್ತಾನ ಈ ಹಿಂದೆ 2012ರಲ್ಲಿ ಕೊನೆಯ ಕ್ರಿಕೆಟ್ ಪಂದ್ಯ ಆಡಿದ್ದು, ಇದಾದ ಬಳಿಕ ಉಭಯ ದೇಶದ ತಂಡಗಳ ನಡುವೆ ಯಾವುದೇ ರೀತಿಯ ಕ್ರಿಕೆಟ್ ಟೂರ್ನಿ ನಡೆದಿಲ್ಲ. ನಂತರ ವಿಶ್ವಕಪ್, ಏಶ್ಯಾಕಪ್ ಮತ್ತು ಚಾಂಪಿಯನ್ ಟ್ರೋಫಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗಿವೆ.