ETV Bharat / sports

ಭಾರತದ ಟೆಲಿವಿಷನ್​​​​​ ಇತಿಹಾಸದಲ್ಲೇ ದಾಖಲೆ ಬರೆದ ಇಂಡೋ-ಪಾಕ್​​ ಪಂದ್ಯ!

author img

By

Published : Jun 27, 2019, 9:44 PM IST

Updated : Jun 27, 2019, 10:42 PM IST

ಬಾರ್ಕ್​ (ಬ್ರಾಡ್​ಕಾಸ್ಟ್​ ಆಡಿಯನ್ಸ್​ ರೀಸರ್ಚ್​ ಕೌನ್ಸಿಲ್​) ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್​ನ 22ನೇ ಪಂದ್ಯ ಸ್ಟಾರ್​ಸ್ಪೋರ್ಟ್ಸ್​ ನೆಟ್​ವರ್ಕ್​ ಒಂದರಲ್ಲೇ 206 ಮಿಲಿಯನ್ಸ್​ ವೀಕ್ಷಣೆಯಾಗಿದೆ ಎಂದು ತಿಳಿದುಬಂದಿದೆ.

India-Pak World Cup

ಮುಂಬೈ: ​ಜೂನ್​ 16ರಂದು ಮ್ಯಾಂಚೆಸ್ಟರ್​ನಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ಭಾರತದ ಟೆಲಿವಿಷನ್​ ಇತಿಹಾಸದಲ್ಲಿಯೇ ಅತಿ ಹೆಚ್ಚು ವೀಕ್ಷಣೆಗೊಳದ ಕಾರ್ಯಕ್ರಮ ಎಂಬ ಖ್ಯಾತಿ ಪಡೆದುಕೊಂಡಿದೆ.

ಬಾರ್ಕ್​ (ಬ್ರಾಡ್​ಕಾಸ್ಟ್​ ಆಡಿಯನ್ಸ್​ ರೀಸರ್ಚ್​ ಕೌನ್ಸಿಲ್​) ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್​ನ 22ನೇ ಪಂದ್ಯ ಸ್ಟಾರ್​ಸ್ಪೋರ್ಟ್ಸ್​ ನೆಟ್​ವರ್ಕ್​ ಒಂದರಲ್ಲೇ 206 ಮಿಲಿಯನ್ಸ್​ ವೀಕ್ಷಣೆಯಾಗಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನದ ಚಾಂಪಿಯನ್​ ಟ್ರೋಫಿ ಫೈನಲ್​ ಪಂದ್ಯವನ್ನು 172 ಮಿಲಿಯನ್​ ವೀಕ್ಷಕರು ವೀಕ್ಷಣೆ ಮಾಡಿದ್ದು ಈ ಹಿಂದಿನ ದಾಖಲೆಯಾಗಿತ್ತು.

ಮೇ 30ರಿಂದ ಭಾರತದಾದ್ಯಂತ 367 ಮಿಲಿಯನ್ಸ್​ ವೀಕ್ಷಕರು ಸ್ಟಾರ್​ ನೆಟ್​ವರ್ಕ್​ಗೆ​ ಭೇಟಿ ನೀಡಿದ್ದು, ಇದರಲ್ಲಿ ಮೊದಲ ಮೂರು ವಾರಗಳಲ್ಲಿ 303 ಮಿಲಿಯನ್​ ವೀಕ್ಷಕರನ್ನು ವಿಶ್ವಕಪ್ ಆಕರ್ಷಿಸಿದೆ. ಇನ್ನು ಟ್ವಿಟರ್​ನಲ್ಲೂ ಭಾರತ-ಪಾಕಿಸ್ತಾನ ಪಂದ್ಯ ದಾಖಲೆ ಬರೆದಿದೆ. ಈ ಪಂದ್ಯ ಕುರಿತು ಸುಮಾರು 2.9 ಮಿಲಿಯನ್​ ಟ್ವೀಟ್​ ಮಾಡಲಾಗಿದೆ.

Intro:Body:Conclusion:
Last Updated : Jun 27, 2019, 10:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.