ETV Bharat / sports

ಸೆಹ್ವಾಗ್​ ಅಬ್ಬರದ ಬ್ಯಾಟಿಂಗ್​​: ವಿಂಡೀಸ್​​​​ ಮೇಲೆ ಸವಾರಿ ಮಾಡಿದ ಇಂಡಿಯಾ ಲೆಜೆಂಡ್ಸ್​ - ಭಾರತ ಲೆಜೆಂಡ್ಸ್​ಗೆ 7 ವಿಕೆಟ್​ಗಳ ಜಯ

ರಸ್ತೆ ಅಪಘಾತ ಕುರಿತು ಜಾಗೃತಿ ಮೂಡಿಸಲು ಭಾರತ, ಆಸ್ಟ್ರೇಲಿಯಾ, ವೆಸ್ಟ್​ ಇಂಡೀಸ್​, ದ. ಆಫ್ರಿಕಾ ಹಾಗೂ ಶ್ರೀಲಂಕಾ ತಂಡದ ಮಾಜಿ ಆಟಗಾರರು ಆಡುತ್ತಿರುವ ಈ ಟೂರ್ನಿಯಲ್ಲಿ ಸಚಿನ್​ ನೇತೃತ್ವದ ಭಾರತ ತಂಡ ಭರ್ಜರಿ ಜಯ ಗಳಿಸಿದೆ.

India Legends beat West Indies legends
ಸೆಹ್ವಾಗ್​ 74
author img

By

Published : Mar 7, 2020, 11:34 PM IST

ಮುಂಬೈ: ರೋಡ್ ​ಸೇಫ್ಟಿ ಟಿ-20 ಸರಣಿಯ ಮೊದಲ ಪಂದ್ಯದಲ್ಲೇ ಭಾರತ ಲೆಜೆಂಡ್ಸ್​​ ತಂಡ ವೆಸ್ಟ್​ ಇಂಡೀಸ್ ಲೆಜೆಂಡ್ಸ್​​ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ರೋಡ್ ​ಸೇಫ್ಟಿ ಕುರಿತು ಜಾಗೃತಿ ಮೂಡಿಸಲು ಭಾರತ, ಆಸ್ಟ್ರೇಲಿಯಾ, ವೆಸ್ಟ್​ ಇಂಡೀಸ್,​ ದ. ಆಫ್ರಿಕಾ ಹಾಗೂ ಶ್ರೀಲಂಕಾ ತಂಡದ ಮಾಜಿ ಆಟಗಾರರು ಆಡುತ್ತಿರುವ ಈ ಟೂರ್ನಿಯಲ್ಲಿ ಸಚಿನ್​ ನೇತೃತ್ವದ ಭಾರತ ತಂಡ ಭರ್ಜರಿ ಜಯ ಗಳಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ವಿಂಡೀಸ್​ ತಂಡ ಮೊದಲ ವಿಕೆಟ್​ಗೆ 40 ರನ್ ಪೇರಿಸಿತು. ಡರೇನ್​ ಗಂಗಾ 24 ಎಸೆತಗಳಲ್ಲಿ 31 ರನ್​ ಗಳಿಸಿ ಔಟಾದರೆ, ಮತ್ತೊಬ್ಬ ಆರಂಭಿಕ ಬ್ಯಾಟ್ಸ್​ಮನ್ ಚಂದ್ರಪಾಲ್​ ಯುವರು ನಾಚಿಸುವಂತೆ ಬ್ಯಾಟ್​ ಬೀಸಿ 61 ರನ್ ​ಗಳಿಸಿದರು. 41 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 6 ಬೌಂಡರಿ ಸಿಡಿಸಿದರು. ಇವರಿಬ್ಬರನ್ನು ಬಿಟ್ಟರೆ ಲಾರಾ 17, ಡೆಂಜಾ ಹ್ಯಾಟ್​ 12 ರನ್ ​ಗಳಿಸಿದರು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಹೀರ್​ ಖಾನ್​ 2, ಮುನಾಫ್​ ಪಟೇಲ್​ 2, ಪ್ರಗ್ಯಾನ್ ಓಜಾ 2 ಹಾಗೂ ಇರ್ಫಾನ್ ಪಠಾಣ್​ 1 ವಿಕೆಟ್​ ಪಡೆದು ಮಿಂಚಿದರು.

ಇನ್ನು 151 ರನ್​ಗಳ ಟಾರ್ಗೆಟ್ ಪಡೆದ ಭಾರತ ಲೆಜೆಂಡ್​ ತಂಡ ಸೆಹ್ವಾಗ್(74)​ ಅಬ್ಬರದ ಅರ್ಧಶತಕದ ನೆರವಿನಿಂದ 18.2 ಓವರ್​ಗಳಲ್ಲೇ ಗುರಿ ತಲುಪಿತು. ಸೆಹ್ವಾಗ್​ 57 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 74 ರನ್ ​ಗಳಿಸಿದರೆ, ಇವರಿಗೆ ಸಾಥ್​ ನೀಡಿದ ಸಚಿನ್​ 29 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 36 ರನ್ ​ಗಳಿಸಿದರು. ಕೈಫ್​ 14, ಯುವರಾಜ್ ಸಿಂಗ್​​ ಔಟಾಗದೆ 10 ರನ್ ​ಗಳಿಸಿ ಭಾರತಕ್ಕೆ ಮೊದಲ ಜಯ ತಂದು ಕೊಟ್ಟರು.

ವೆಸ್ಟ್​ ಇಂಡೀಸ್​ ತಂಡದ ಕಾರ್ಲ್​ ಹೂಪರ್​ 2 ವಿಕೆಟ್,​ ಸುಲೇಮನ್​ ಬೆನ್​ 1 ವಿಕೆಟ್​ ಪಡೆದರು. ಅಕರ್ಷಕ ಅರ್ಧಶತಕ ಸಿಡಿಸಿದ ವಿರೇಂದ್ರ ಸೆಹ್ವಾಗ್​ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.