ETV Bharat / sports

ಆಸೀಸ್‌ ಹೆಸರಿನಲ್ಲಿರುವ 25ವರ್ಷಗಳ ವಿಶ್ವದಾಖಲೆ ಬ್ರೇಕ್‌ ಮಾಡಲು ಕೊಹ್ಲಿ ಟೀಂಗೆ ಒಳ್ಳೇ ಚಾನ್ಸ್‌.. - ಕೊಹ್ಲಿ ಬಳಗ

ಭಾರತ ತಂಡ 2012-13ರಲ್ಲಿ ಇಂಗ್ಲೆಂಡ್​ ವಿರುದ್ಧ 2-1ರಲ್ಲಿ ಟೆಸ್ಟ್​ ಸರಣಿ ಕಳೆದುಕೊಂಡಿದ್ದು ಬಿಟ್ಟರೆ 7 ವರ್ಷಗಳಿಂದ ಭಾರತದಲ್ಲಿ ಯಾವುದೇ ವಿದೇಶಿ ತಂಡ ಟೆಸ್ಟ್​ ಸರಣಿ ಗೆಲ್ಲಲಾಗಿಲ್ಲ. ಅದರಲ್ಲೂ ಈ ಅವಧಿಯಲ್ಲಿ ಭಾರತ ತಂಡ ಸೋತಿರುವುದು ಕೇವಲ ಒಂದೇ ಟೆಸ್ಟ್​, ಅದು ಆಸ್ಟ್ರೇಲಿಯಾ ವಿರುದ್ಧ. ತವರಿನಲ್ಲಿ ಸತತ 10 ಸರಣಿ ಗೆದ್ದಿರುವ ಭಾರತ ತಂಡ ಇನ್ನೊಂದು ಸರಣಿ ಗೆದ್ದರೆ ಟೆಸ್ಟ್​ ಕ್ರಿಕೆಟ್​ ಇತಿಹಾಸ ನಿರ್ಮಿಸಲಿದೆ.

world record
author img

By

Published : Sep 30, 2019, 4:44 PM IST

Updated : Oct 1, 2019, 11:45 AM IST

ಮುಂಬೈ: ತವರಿನಲ್ಲಿ ಎದುರಾಳಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಕೊಹ್ಲಿ ಬಳಗ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ ಗೆದ್ದರೆ ಆಸ್ಟ್ರೇಲಿಯಾ ಹೆಸರಿನಲ್ಲಿರುವ ವಿಶ್ವ ದಾಖಲೆ ಪತನವಾಗಲಿದೆ.

ಭಾರತದಲ್ಲಿ ಭಾರತ ತಂಡವೇ ಬಲಿಷ್ಠ. ಇಲ್ಲಿ ಕಳೆದ 9 ವರ್ಷಗಳಿಂದ ಟೀಂ​ ಇಂಡಿಯಾ ಟೆಸ್ಟ್​ ಸರಣಿ ಸೋತಿಲ್ಲ. ಸತತ 10 ಟೆಸ್ಟ್​ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಆಸ್ಟ್ರೇಲಿಯಾದೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದೆ. ಇದೀಗ ಆ ಮಹತ್ವದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಳ್ಳಲು ಕೊಹ್ಲಿ ಬಳಗಕ್ಕೆ ಅದ್ಭುತ ಅವಕಾಶ ದೊರೆತಿದೆ.

ಆಸ್ಟ್ರೇಲಿಯಾ ತಂಡ 1994/95ರಿಂದ 2000ದವರೆಗೆ ಹಾಗೂ 2004ರಿಂದ 2008/09ರವರೆಗೆ ತವರಿನಲ್ಲಿ ಸತತ 10 ಸರಣಿಗಳನ್ನು ಜಯಿಸಿತ್ತು. ಇದೀಗ ಭಾರತವೂ 2013 ರಿಂದ ಇಲ್ಲಿಯವರೆಗೆ ತವರಿನಲ್ಲಿ ಸತತ 10 ಟೆಸ್ಟ್​ ಸರಣಿ ಜಯಿಸಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಜಯಿಸಿದರೆ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲೇ ತವರಿನಲ್ಲಿ ಸತತ 11 ಸರಣಿ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ.

ಭಾರತದ 2013 ರಿಂದ ಗೆದ್ದಿರುವ ಟೆಸ್ಟ್​ ಸರಣಿಗಳು:

  • 2012-2013 ಆಸ್ಟ್ರೇಲಿಯಾ ವಿರುದ್ಧ 4-0
  • 2013-14 ವೆಸ್ಟ್ ​ಇಂಡೀಸ್​ ವಿರುದ್ಧ 2-0
  • 2015-16 ದಕ್ಷಿಣ ಆಫ್ರಿಕಾ ವಿರುದ್ಧ 3-0
  • 2016-17 ನ್ಯೂಜಿಲ್ಯಾಂಡ್​ ವಿರುದ್ಧ 3-0
  • 2016-17 ಇಂಗ್ಲೆಂಡ್​ ವಿರುದ್ಧ 4-0
  • 2016-17 ಬಾಂಗ್ಲಾದೇಶ ವಿರುದ್ಧ 1-0
  • 2016-17 ಆಸ್ಟ್ರೇಲಿಯಾ ವಿರುದ್ಧ 2-1
  • 2017-18 ಶ್ರೀಲಂಕಾ ವಿರುದ್ಧ 2-1
  • 2018 ಆಫ್ಘಾನಿಸ್ತಾನ ವಿರುದ್ಧ 1-0
  • 2018-2019 ವೆಸ್ಟ್​ ಇಂಡೀಸ್​ ವಿರುದ್ಧ 2-0

Intro:Body:Conclusion:
Last Updated : Oct 1, 2019, 11:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.