ನವದೆಹಲಿ: ಮುಂಬರುವ 2020ರ ಜನವರಿಯಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಆತಿಥೇಯರ ವಿರುದ್ಧ 3 ಪಂದ್ಯಗಳ ಟಿ-20 ಸರಣಿ ಆಡಲಿದೆ.
-
JUST IN: Sri Lanka to play three-match T20I series against India in January.
— BCCI (@BCCI) September 25, 2019 " class="align-text-top noRightClick twitterSection" data="
More details here - https://t.co/2Dwcyvcrl5 #INDvSL pic.twitter.com/DMs5YL0fDu
">JUST IN: Sri Lanka to play three-match T20I series against India in January.
— BCCI (@BCCI) September 25, 2019
More details here - https://t.co/2Dwcyvcrl5 #INDvSL pic.twitter.com/DMs5YL0fDuJUST IN: Sri Lanka to play three-match T20I series against India in January.
— BCCI (@BCCI) September 25, 2019
More details here - https://t.co/2Dwcyvcrl5 #INDvSL pic.twitter.com/DMs5YL0fDu
ಮೊದಲ ಟಿ-20 ಪಂದ್ಯ ಜನವರಿ 5 ಗುವಾಹಟಿ
ಎರಡನೇ ಟಿ-20 ಪಂದ್ಯ ಜನವರಿ 7 ಇಂದೋರ್
ಮೂರನೇ ಟಿ-20 ಪಂದ್ಯ ಜನವರಿ 10 ಪುಣೆ
ಈ ಮೊದಲು ಭಾರತ 2020ರ ಜನವರಿ 5 ರಿಂದ ಜಿಂಬಾಂಬೆ ವಿರುದ್ಧ ಟಿ-20 ಸರಣಿ ಆಡಬೇಕಿತ್ತು. ಆದರೆ, ಜಿಂಬಾಬ್ವೆ ದೇಶದ ಕ್ರೀಡಾ ಚಟುವಟಿಕೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಗಟ್ಟುವಲ್ಲಿ ಕ್ರಿಕೆಟ್ ಮಂಡಳಿ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಐಸಿಸಿ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಅಮಾನತು ಮಾಡಿ ಆದೇಶ ಹೊರಡಿಸಿತ್ತು.
ಆದ್ದರಿಂದ ಜಿಂಬಾಬ್ವೆ ತಂಡ ಐಸಿಸಿ ಪ್ರಾಯೋಜಿತ ಯಾವುದೇ ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಭಾರತ ತಂಡ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನ ಟಿ-20 ಸರಣಿ ಆಡಲು ಆಹ್ವಾನ ನೀಡಿತ್ತು. ಬಿಸಿಸಿಐ ಮನವಿಗೆ ಲಂಕಾ ಕ್ರಿಕೆಟ್ ಬೋರ್ಡ್ ಒಪ್ಪಿಗೆ ನೀಡಿದ್ದು, ಜನವರಿ 5ರಿಂದ 3 ಪಂದ್ಯಗಳ ಟಿ-20 ಸರಣಿ ಪ್ರಾರಂಭವಾಗಲಿದೆ.