ಕ್ಯಾನ್ಬೆರಾ: 2020ರಲ್ಲಿ ಸತತ 5 ಏಕದಿನ ಪಂದ್ಯಗಳಲ್ಲಿ ಸೋಲು ಕಂಡಿದ್ದ ಕೊಹ್ಲಿ ಪಡೆ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಬುಧವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 13 ರನ್ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ವೈಟ್ವಾಶ್ ಮುಖಭಂಗದಿಂದ ಪಾರಾಗಿದೆ. ಆಸೀಸ್ 2-1ರಲ್ಲಿ ಸರಣಿ ವಶಪಡಿಸಿಕೊಂಡಿದೆ.
ಬುಧವಾರ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 302 ರನ್ಗಳಿಸಿತ್ತು. ವಿರಾಟ್ ಕೊಹ್ಲಿ 78 ಎಸೆತಗಳಲ್ಲಿ 63, ಹಾರ್ದಿಕ್ ಪಾಂಡ್ಯ 76 ಎಸೆತಗಳಲ್ಲಿ 92 ಹಾಗೂ ರವೀಂದ್ರ ಜಡೇಜಾ 50 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 66 ರನ್ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
303 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 289 ರನ್ಗಳಿಗೆ ಆಲೌಟ್ ಆಗುವ ಮೂಲಕ 13 ರನ್ಗಳ ಸೋಲುಕಂಡಿತು.
-
India beat Australia by 1️⃣3️⃣ runs!
— ICC (@ICC) December 2, 2020 " class="align-text-top noRightClick twitterSection" data="
They have grabbed their first points in the ICC Men's @cricketworldcup Super League table 📈 👏 #AUSvIND 👉 https://t.co/UpvjQhWPfW pic.twitter.com/uAhUt8fL5k
">India beat Australia by 1️⃣3️⃣ runs!
— ICC (@ICC) December 2, 2020
They have grabbed their first points in the ICC Men's @cricketworldcup Super League table 📈 👏 #AUSvIND 👉 https://t.co/UpvjQhWPfW pic.twitter.com/uAhUt8fL5kIndia beat Australia by 1️⃣3️⃣ runs!
— ICC (@ICC) December 2, 2020
They have grabbed their first points in the ICC Men's @cricketworldcup Super League table 📈 👏 #AUSvIND 👉 https://t.co/UpvjQhWPfW pic.twitter.com/uAhUt8fL5k
ಆಸ್ಟ್ರೇಲಿಯಾ ಪರ ನಾಯಕ ಫಿಂಚ್ 75, ಅಲೆಕ್ಸ್ ಕ್ಯಾರಿ 38, ಮ್ಯಾಕ್ಸ್ವೆಲ್ 38 ಎಸೆತಗಳಲ್ಲಿ 59 ರನ್ಗಳಿಸಿ ಪ್ರತಿರೋಧ ತೋರಿದರಾದರೂ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಆದರೆ ಲಾಬುಶೇನ್(7), ಸ್ಮಿತ್(7), ಹೆನ್ರಿಕ್ಸ್(22), ಗ್ರೀನ್(21) ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರಿಂದ ಸೋಲು ಕಾಣಬೇಕಾಯಿತು.
ಪದಾರ್ಪಣೆ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಎನ್ ನಟರಾಜನ್ 70 ರನ್ ಬಿಟ್ಟುಕೊಟ್ಟರೂ 2 ವಿಕೆಟ್ ಪಡೆದರು. ಶಾರ್ದುಲ್ ಠಾಕೂರ್ 51 ರನ್ ನೀಡಿ 3 ವಿಕೆಟ್ ಪಡೆದರೆ, ಬುಮ್ರಾ 43 ರನ್ ನೀಡಿ 2 ವಿಕೆಟ್ ಪಡೆದರು. ಕುಲ್ದೀಪ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಗೆಲುವಿಗೆ ಕಾರಣರಾದರು.