ETV Bharat / sports

ಇಂಗ್ಲೆಂಡ್‌ನ ಅಸ್ಥಿರ ಟಾಪ್​ 3 ಬ್ಯಾಟಿಂಗ್ ಕ್ರಮಾಂಕ.. ಆಂಗ್ಲರ ವಿರುದ್ಧ ಭಾರತವೇ ಬೆಸ್ಟ್ - ಚಾಪೆಲ್ - ian chappel news

ಇಂಗ್ಲೆಂಡ್​ ತಂಡಕ್ಕೆ ಬೆನ್​ಸ್ಟೋಕ್ಸ್​ ಸೇರ್ಪಡೆಯಿಂದ ಆಲ್​ರೌಂಡ್ ವಿಭಾಗ ಬಲಿಷ್ಠವಾಗಲಿದೆ. ಜೊತೆಗೆ ಈಗಾಗಲೇ ಇರುವ ಶ್ರೇಷ್ಠ ವೇಗಿಗಳ ಜೊತೆಗೆ ಜೋಫ್ರಾ ಆರ್ಚರ್​ ಸೇರಿರುವುದು ಬೌಲಿಂಗ್ ಗುಣಮಟ್ಟ ಹೆಚ್ಚಿಸಲಿದೆ. ಆದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳಲ್ಲಿ ಸ್ಥಿರತೆ ಕಾಣುತ್ತಿಲ್ಲ. ಸಿಬ್ಲೆ ಹಾಗೂ ಜಾಕ್​ ಕ್ರಾಲೆ ಶ್ರೀಲಂಕಾದಲ್ಲಿ ವಿಫಲರಾಗಿದ್ದಾರೆ..

ಇಂಗ್ಲೆಂಡ್ vs ಭಾರತ ಟೆಸ್ಟ್​ ಸರಣಿ
ಇಯಾನ್ ಚಾಪೆಲ್
author img

By

Published : Jan 31, 2021, 3:29 PM IST

ನವದೆಹಲಿ : ಇಂಗ್ಲೆಂಡ್ ವಿರುದ್ಧ ಮುಂದಿನ ಟೆಸ್ಟ್​ ಸರಣಿಯಲ್ಲಿ ಅತಿಥೇಯ ಭಾರತ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ. ತಂಡದಲ್ಲಿ ಅತ್ಯುತ್ತಮ ಗುಣಮಟ್ಟವುಳ್ಳ ವೇಗಿಗಳು, ಆಳವಾದ ಬ್ಯಾಟಿಂಗ್ ಲೈನ್​ಅಪ್​ ಮತ್ತು ಪ್ರವಾಸಿ ತಂಡಕ್ಕಿಂತ ಭಾರತದ ಆರಂಭಿಕ ಕ್ರಮಾಂಕ ಬಲಿಷ್ಠವಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ವೇಳೆ ಪಿತೃತ್ವ ರಜೆಯಲ್ಲಿದ್ದ ವಿರಾಟ್​ ಕೊಹ್ಲಿ ಕೂಡ ಭಾರತ ತಂಡಕ್ಕೆ ಸೇರಿರುವುದರಿಂದ ತಂಡದ ಬ್ಯಾಟಿಂಗ್ ಲೈನ್‌ಅಪ್​ ಕೂಡ ಬಲಿಷ್ಠವಾಗಿದೆ ಎಂಬುದು ಚಾಪೆಲ್ ಅಭಿಪ್ರಾಯವಾಗಿದೆ.

"ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಸರಣಿ ಜಯಸಿರುವ ಭಾರತವು ಇಂಗ್ಲೆಂಡ್​ ವಿರುದ್ಧ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಲ್ಲದೆ ನೀವು ವಿರಾಟ್ ಕೊಹ್ಲಿ ಎಂಬ ಹೆಸರನ್ನು ಬ್ಯಾಟಿಂಗ್ ಕ್ರಮಾಂಕಕ್ಕೆ ಸೇರಿಸಿದಾಗ ಮತ್ತಷ್ಟು ಬಲಿಷ್ಠವಾಗಿದೆ" ಎಂದು ಚಾಪೆಲ್ ಇಎಸ್ಪಿಎನ್​ ಕ್ರಿಕ್​ ಇನ್ಫೋಗೆ ಬರೆದ ತಮ್ಮ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.

ಕೊಹ್ಲಿ ಜೊತೆಗೆ ಆರ್​.ಆಶ್ವಿನ್, ಹಾರ್ದಿಕ್ ಪಾಂಡ್ಯ ಮತ್ತು ಇಶಾಂತ್ ಶರ್ಮಾ ಕೂಡ ಈ ಪಟ್ಟಿಯಲ್ಲಿರುವುದರಿಂದ ಭಾರತ ತಂಡ ಅಜೇಯವಾಗಿ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 2-0ಯಲ್ಲಿ ಟೆಸ್ಟ್​ ಸರಣಿ ಜಯಿಸಿದ್ದರೂ ಅಸಾಧಾರಣ ಟಾಪ್ ಆರ್ಡರ್ ಹೊಂದಿರುವ ತವರಿನ ತಂಡ ಮೇಲುಗೈ ಸಾಧಿಸಬಹುದು ಎಂದು ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್​ ತಂಡಕ್ಕೆ ಬೆನ್​ಸ್ಟೋಕ್ಸ್​ ಸೇರ್ಪಡೆಯಿಂದ ಆಲ್​ರೌಂಡ್ ವಿಭಾಗ ಬಲಿಷ್ಠವಾಗಲಿದೆ. ಜೊತೆಗೆ ಈಗಾಗಲೇ ಇರುವ ಶ್ರೇಷ್ಠ ವೇಗಿಗಳ ಜೊತೆಗೆ ಜೋಫ್ರಾ ಆರ್ಚರ್​ ಸೇರಿರುವುದು ಬೌಲಿಂಗ್ ಗುಣಮಟ್ಟ ಹೆಚ್ಚಿಸಲಿದೆ. ಆದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳಲ್ಲಿ ಸ್ಥಿರತೆ ಕಾಣುತ್ತಿಲ್ಲ. ಸಿಬ್ಲೆ ಹಾಗೂ ಜಾಕ್​ ಕ್ರಾಲೆ ಶ್ರೀಲಂಕಾದಲ್ಲಿ ವಿಫಲರಾಗಿದ್ದಾರೆ.

ಇದೀಗ ರೋರಿ ಬರ್ನ್ಸ್​ ಸೇರ್ಪಡೆಯಾದ್ರೂ ಭಾರತದ ರೋಹಿತ್ ಶರ್ಮಾ, ಗಿಲ್​ ಅಂತಹ ಆಟಗಾರರಿರುವ ಅಗ್ರ ಕ್ರಮಾಂಕದ ಮುಂದೆ ಅಷ್ಟೇನೂ ಪರಿಣಾಮಕಾರಿಯಾಗಿ ಕಾಣುವುದಿಲ್ಲ. ಈ ಆರಂಭಿಕ ಜೋಡಿ ಆಸ್ಟ್ರೇಲಿಯಾದ ವೇಗದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಚಾಪೆಲ್ ತಿಳಿಸಿದ್ದಾರೆ.

ಇನ್ನು, ಮಧ್ಯಮ ಕ್ರಮಾಂಕದಲ್ಲಿ ಎರಡು ತಂಡಗಳೂ ಸಮನಾಗಿ ಕಾಣುತ್ತವೆ. ಭಾರತ ತಂಡದಲ್ಲಿ ಪಾಂಡ್ಯ, ರಹಾನೆ ಮತ್ತು ಪಂತ್​ ಬಲವಾಗಿದ್ದರೆ, ಇಂಗ್ಲೆಂಡ್​ಗೆ ಬೆನ್​ಸ್ಟೋಕ್ಸ್​ ಮತ್ತು ಬಟ್ಲರ್​ ಪ್ರಮುಖ ಅಸ್ತ್ರವಾಗಿದ್ದಾರೆ. ಒಂದು ವೇಳೆ ಗಾಯಾಳು ಆಲಿ ಪೋಪ್​ ತಂಡ ಸೇರಿಕೊಂಡರೆ ತಂಡದ ಬಲ ಮತ್ತಷ್ಟು ಹೆಚ್ಚಾಗಲಿದೆ ಎಂದು ಚಾಪೆಲ್​ ತಮ್ಮ ಅಂಕಣದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

ಎರಡು ತಂಡಗಳ ನಡುವಿನ ಟೆಸ್ಟ್​ ಸರಣಿ ಫೆಬ್ರವರಿ 5ರಿಂದ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭವಾಗಲಿದೆ, ಎರಡನೇ ಟೆಸ್ಟ್​ ಕೂಡ ಇಲ್ಲೇ ಫೆಬ್ರವರಿ 13ರಂದು ನಡೆಯಲಿದೆ.

ಇದನ್ನು ಓದಿ: ವಿಶ್ವಶ್ರೇಷ್ಠ ವಿರಾಟನಿಗೆ ವೀಕ್​ನೆಸ್​ ಎಂಬುದೇ ಇಲ್ಲ, ಔಟ್ ಮಾಡುವುದೇಗೆ? : ಮೋಯಿನ್ ಅಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.