ETV Bharat / sports

ಭಾರತ-ಪಾಕ್​​ ಸೆಣಸಾಟ ಇಲ್ಲದೇ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಅರ್ಥವಿಲ್ಲ: ವಕಾರ್​ - ವಕಾರ್​ ಯೂನಿಸ್​

ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಭಾರತ-ಪಾಕ್​ ಇಲ್ಲಿಯವರೆಗೂ ಮುಖಾಮುಖಿಯಾಗಿಲ್ಲ. ಇದೇ ವಿಷಯವನ್ನಿಟ್ಟುಕೊಂಡು ಪಾಕ್​​ ಮಾಜಿ ಕ್ಯಾಪ್ಟನ್​ ವಕಾರ್​ ಯೂನಿಸ್​ ಅಸಮಾಧಾನ ಹೊರಹಾಕಿದ್ದಾರೆ.

Waqar Younis
Waqar Younis
author img

By

Published : Mar 18, 2020, 12:56 AM IST

ಇಸ್ಲಾಮಾಬಾದ್​​: ಮುಂಬೈ ದಾಳಿ ನಡೆದ ಬಳಿಕ ದ್ವಿಪಕ್ಷೀಯ ಸರಣಿಯಲ್ಲಿ ಭಾರತ-ಪಾಕ್​ ಮುಖಾಮುಖಿಯಾಗಿಲ್ಲ. ಆದರೆ ಐಸಿಸಿ ಆಯೋಜನೆ ಮಾಡುತ್ತಿರುವ ಕ್ರಿಕೆಟ್​ ಸರಣಿಗಳಲ್ಲಿ ಮಾತ್ರ ಈ ತಂಡಗಳು ಫೈಟ್​ ನಡೆಸುತ್ತಿವೆ.

ಐಸಿಸಿಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಎಲ್ಲ ತಂಡಗಳು ಇತರೆ ಎಲ್ಲ ತಂಡಗಳೊಂದಿಗೆ ಸೆಣಸಾಟ ನಡೆಸುತ್ತಿದ್ದು, ಪಾಕ್​-ಭಾರತ ಮಾತ್ರ ಮುಖಾಮುಖಿಯಾಗಿಲ್ಲ. ಇದೇ ವಿಷಯವಾಗಿ ಮಾತನಾಡಿರುವ ಪಾಕ್ ತಂಡದ ಮಾಜಿ ವೇಗದ ಬೌಲರ್​ ವಕಾರ್​ ಯೂನಿಸ್, ಭಾರತ-ಪಾಕ್​ ನಡುವೆ ಟೆಸ್ಟ್​​ ಪಂದ್ಯ ನಡೆಯದ ಹೊರತಾಗಿ ಐಸಿಸಿಯ ವಿಶ್ವ ಚಾಂಪಿಯನ್​ ಶಿಪ್​​ ಪೂರ್ಣವಾಗುವುದಿಲ್ಲ. ಜತೆಗೆ ಅದಕ್ಕೆ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಟೆಸ್ಟ್​​ ಚಾಂಪಿಯನ್​ಶಿಪ್​​ನಲ್ಲಿ ಭಾರತ-ಪಾಕ್​ ಸೆಣಸಾಟ ನಡೆಸುವಂತೆ ಐಸಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿರುವ ವಕಾರ್​,ಭಾರತ-ಪಾಕ್​ ದ್ವಿಪಕ್ಷೀಯ ಸಂಬಂಧ ಸರಿಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಈ ವಿಷಯದಲ್ಲಿ ಐಸಿಸಿ ಮಹತ್ವದ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.

ಐಸಿಸಿ ಶ್ರೇಯಾಂಕದ ಟಾಪ್​ 9 ತಂಡಗಳು ದ್ವಿಪಕ್ಷೀಯ ಕ್ರಿಕೆಟ್​​ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗುತ್ತಿದ್ದು, ಇದರಲ್ಲಿ ಅತಿ ಹೆಚ್ಚು ಅಂಕ ಪಡೆದುಕೊಳ್ಳುವ ಟಾಪ್​ 2 ತಂಡಗಳು 2021ರ ಜೂನ್​ ತಿಂಗಳು ಇಂಗ್ಲೆಂಡ್​​ನಲ್ಲಿ ನಡೆಯುವ ಫೈನಲ್​​ ಟೆಸ್ಟ್​ ಟೂರ್ನಿಯಲ್ಲಿ ಭಾಗಿಯಾಗಿ, ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಎರಡನೇ ಸ್ಥಾನ ಹಾಗೂ ನ್ಯೂಜಿಲ್ಯಾಂಡ್​​ 3ನೇ ಸ್ಥಾನದಲ್ಲಿದೆ. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.