ETV Bharat / sports

ವಿಂಡೀಸ್​ ವಿರುದ್ಧ 50 ರನ್​ಗಳ ಟಾರ್ಗೆಟ್​ ನೀಡಿ 5 ರನ್​ಗಳಿಂದ ಗೆದ್ದ ಭಾರತದ ನಾರಿಯರು - ಭಾರತ - ವೆಸ್ಟ್​ ಇಂಡೀಸ್​ ಟಿ20 ಸರಣಿ

ವಿಂಡೀಸ್​ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಹರ್ಮನ್​ ಪ್ರೀತ್​ ಕೌರ್​ ಪಡೆ 5 ರನ್​ಗಳ ರೋಚಕ ಜಯ ಸಾಧಿಸಿದೆ.

IND VS WI Fourth T20
author img

By

Published : Nov 18, 2019, 12:36 PM IST

ಗಯಾನ: ಭಾರತದ ಮಹಿಳಾ ತಂಡ ವಿಂಡೀಸ್​ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ 5 ರನ್​ಗಳ ರೋಚಕ ಜಯ ಸಾಧಿಸಿ, ಟಿ20 ಸರಣಿಯಲ್ಲಿ 4-0ಯಲ್ಲಿ ಮುನ್ನಡೆ ಸಾಧಿಸಿದೆ.

ಮಳೆಯ ಕಾರಣ ಓವರ್​ ಮಿತಿಯನ್ನು 9 ಓವರ್​ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ ತಂಡವು ವಿಂಡೀಸ್​ ಬೌಲಿಂಗ್​ ದಾಳಿಗೆ ನಲುಗಿ ಕೇವಲ 50 ರನ್ ​ಗಳಿಸಿತ್ತು. ಪೂಜಾ ವಸ್ತ್ರಾಕರ್​ ಮಾತ್ರ 10 ರನ್ ​ಗಳಿಸಿ ಎರಡಂಕಿ ಮೊತ್ತ ದಾಖಲಿಸಿದ್ದರು.

  • What a finish we have witnessed. West Indies Women needed 13 off the final over and Anuja Patil kept it really tight giving away just 7 runs. 👏#TeamIndia win by 5 runs & make it 4-0! pic.twitter.com/9Jg0Hfek2a

    — BCCI Women (@BCCIWomen) November 17, 2019 " class="align-text-top noRightClick twitterSection" data=" ">

ವಿಂಡೀಸ್​ ತಂಡದ ಹೇಲಿ ಮ್ಯಾಥ್ಯೂಸ್​ 3 ವಿಕೆಟ್​, ಅಫಿ ಫ್ಲೆಚೆರ್​ 2 ವಿಕೆಟ್​, ಶೆನೆಟ ಗ್ರಿಮಂಡ್​ 2 ವಿಕೆಟ್​ ಪಡೆದಿದ್ದರು.

51 ರನ್​ಗಳ ಸಾಧಾರಣ ಗುರಿ ಪಡೆದ ವಿಂಡೀಸ್​ ಮಹಿಳೆಯರು ಕೂಡ ರನ್ ​ಗಳಿಸಲು ಪರದಾಡಿ 9 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 45 ರನ್ ​ಗಳಿಸಿ 5 ರನ್​ಗಳಿಂದ ಸೋಲೊಪ್ಪಿಕೊಂಡರು. ಮ್ಯಾಥ್ಯೂಸ್​ 11, ಚಿನಲ್ಲೆ ಹೆನ್ರಿ 11, ನಟಾಶ ಮೆಕ್ಲೆನ್​ 10 ರನ್ ​ಗಳಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.

ಭಾರತದ ಪರ ಅನುಜಾ ಪಾಟೀಲ್​ 2 ವಿಕೆಟ್​, ದೀಪ್ತಿ ಶರ್ಮಾ ಹಾಗೂ ರಾಧ ಯಾದವ್​ ತಲಾ ಒಂದು ವಿಕೆಟ್​ ಪಡೆದರು. ಈ ಗೆಲುವಿನ ಮೂಲಕ ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ 4-0ಯಲ್ಲಿ ಮುನ್ನಡೆ ಸಾಧಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.