ETV Bharat / sports

ವಿಂಡೀಸ್​ ವಿರುದ್ಧದ ಏಕದಿನ ಸರಣಿಯಿಂದ ಭುವಿ ಔಟ್​: ಕೊಹ್ಲಿ ಬಳಗ ಸೇರಿದ ಮುಂಬೈನ 4ನೇ ಆಟಗಾರ - ಏಕದಿನ ಸರಣಿಯಿಂದ ಭುವಿ ಔಟ್​

ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಗೆ ಭುವನೇಶ್ವರ್​ ಕುಮಾರ್​ ಬದಲು ಮುಂಬೈನ ಶಾರ್ದುಲ್​ ಠಾಕೂರ್​ಗೆ ಅವಕಾಶ ನೀಡಲಾಗಿದೆ.

IND vs WI ODI
IND vs WI ODI
author img

By

Published : Dec 14, 2019, 12:45 PM IST

ಮುಂಬೈ: ಸ್ನಾಯು ಸೆಳೆತದಿಂದ ಚೇತರಿಸಿಕೊಂಡು ಟಿ20ಯಲ್ಲಿ ತಂಡ ಸೇರಿಕೊಂಡಿದ್ದ ವೇಗಿ ಭುವನೇಶ್ವರ್​ ಕುಮಾರ್​ ಮತ್ತೆ ತೊಡೆಸಂದು ನೋವಿಗೆ ತುತ್ತಾಗಿದ್ದು ವಿಂಡೀಸ್​ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಕೊನೆಯ ಪಂದ್ಯದಲ್ಲಿ ಪ್ರಮುಖ ಎರಡು ವಿಕೆಟ್​ ಪಡೆದಿದ್ದ ಭುವನೇಶ್ವರ್​ ಕುಮಾರ್​ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಅದೇ ಪಂದ್ಯದಲ್ಲಿ ತೊಡೆಸಂದು ನೋವು ಕಾಣಿಸಿಕೊಂಡಿತ್ತು. ಟೀಂ​ ಇಂಡಿಯಾದ ವೈದ್ಯಕೀಯ ಮಂಡಳಿ ಪರೀಕ್ಷೆ ನಡೆಸಿ, ಭುವನೇಶ್ವರ್​ ಅವರಲ್ಲಿ ಮತ್ತೆ ಅಂಡವಾಯು ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಭುವಿಗೆ ಏಕದಿನ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಮುಂಬರುವ ವಿಂಡೀಸ್​ ವಿರುದ್ಧದ ಏಕದಿನ ಸರಣಿಗೆ ಭುವನೇಶ್ವರ್​ ಕುಮಾರ್​ ಬದಲು ಮುಂಬೈನ ಶಾರ್ದುಲ್​ ಠಾಕೂರ್​ಗೆ ಅವಕಾಶ ನೀಡಲಾಗಿದೆ. ಈಗಾಗಲೇ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಕೂಡ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದು, ಕನ್ನಡಿಗ ಮಯಾಂಕ್​ ಅಗರ್‌​ವಾಲ್​ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ತಂಡ ಈಗಾಗಲೇ ಟಿ20 ಸರಣಿಯನ್ನು 2-1ರಲ್ಲಿ ವಶಪಡಿಸಿಕೊಂಡಿದೆ. ಏಕದಿನ ಸರಣಿ ಡಿಸೆಂಬರ್​ 15ರಿಂದ ಆರಂಭವಾಗಲಿದೆ.

ಏಕದಿನ ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್​ ಶರ್ಮಾ (ಉ.ನಾ), ಮಯಾಂಕ್​ ಅಗರ​ವಾಲ್​,ಕೆ.ಎಲ್. ರಾಹುಲ್​, ಶ್ರೇಯಸ್​ ಅಯ್ಯರ್​, ಮನೀಷ್​ ಪಾಂಡೆ, ರಿಷಭ್​ ಪಂತ್​, ಶಿವಂ ದುಬೆ, ಕೆದಾರ್​ ಜಾದವ್​,ರವೀಂದ್ರ ಜಡೇಜಾ, ಯಜುವೇಂದ್ರ ಚಹಾಲ್​, ಕುಲ್ದೀಪ್​ ಚಹಲ್​, ದೀಪಕ್​ ಚಹಾರ್​, ಮೊಹಮ್ಮದ್​ ಶಮಿ, ಶಾರ್ದುಲ್​ ಠಾಕೂರ್​

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.