ETV Bharat / sports

ಶಮಿ, ಜಡ್ಡು ಮಾರಕ ದಾಳಿಗೆ ಹರಿಣಗಳು ತತ್ತರ..! ಮೊದಲ ಟೆಸ್ಟ್ ಗೆದ್ದು ಬೀಗಿದ ಕೊಹ್ಲಿ ಪಡೆ - cicket news

ವಿಶಾಖಪಟ್ಟಣಂನಲ್ಲಿ ನಡೆದ ದ.ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು 203 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಹರಿಣಗಳ ಮೇಲೆ ಟೀಂ ಇಂಡಿಯಾ ಸವಾರಿ
author img

By

Published : Oct 6, 2019, 1:55 PM IST

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್‌ ಪಂದ್ಯದ ಕೊನೆಯ ದಿನದಂದು ಭಾರತ 203 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ಆತಿಥೇಯ ಭಾರತ ನೀಡಿದ 395 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಪ್ರವಾಸಿಗರು ಉತ್ತಮ ಪ್ರತಿರೋಧ ತೋರಲೇ ಇಲ್ಲ. ನಾಲ್ಕನೇ ದಿನದಾಟ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡಿದ್ದ ಫ್ಲೆಸಿಸ್ ಪಡೆ ಇಂದು ಮುಂಜಾನೆ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲೇ ಸಾಗಿತು. ಕೊನೆಯಲ್ಲಿ ಡೀನ್ ಪೀಟ್ ಹಾಗೂ ಮುತ್ತುಸಾಮಿ ಉತ್ತಮ ಪ್ರತಿರೋಧ ತೋರಿದರಾದರೂ ಗೆಲುವು ಮಾತ್ರ ಸಾಧ್ಯವಾಗಲಿಲ್ಲ. ಕೊನೆಗೆ 63.5 ಓವರ್​ನಲ್ಲಿ ದ.ಆಫ್ರಿಕಾ 191 ರನ್ನಿಗೆ ಸರ್ವಪತನವಾಯಿತು.

ಇಂದಿನ ದಿನದಾಟದ ಮೊದಲ ಅವಧಿಯಲ್ಲೇ ತೆಯೂನಿಸ್‌ ಡೆ ಬ್ರೂಯ್ನ್‌ (10), ತೆಂಬಾ ಬವೂಮಾ (0), ನಾಯಕ ಫಾಫ್‌ ಡು ಪ್ಲೆಸಿಸ್‌ (13), ವಿಕೆಟ್‌ಕೀಪರ್‌-ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ'ಕಾಕ್‌ (0), ವೆರ್ನಾನ್​ ಫಿಲ್ಯಾಂಡರ್ (0), ಕೇಶವ ಮಹಾರಾಜ್ (0) ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಕೊನೆಯಲ್ಲಿ ಆಸರೆಯಾದ ಬಾಲಂಗೋಚಿಗಳು:

ಮೂರಂಕಿ ಗಡಿಯೂ ದಾಟುವುದು ಕಷ್ಟ ಎನ್ನುತ್ತಿರುವಾಗಲೇ ತಂಡಕ್ಕೆ ಆಸರೆಯಾ ಡೀನ್ ಪೀಟ್ ಹಾಗೂ ಸೆನುರಾನ್ ಮುತ್ತುಸ್ವಾಮಿ ಅರ್ಧಶತಕದ ಜೊತೆಯಾಟ ನಡೆಸಿ ಟೀಂ ಇಂಡಿಯಾ ಬೌಲರ್​ಗಳನ್ನು ಕಾಡಿದರು.

ಈ ಜೋಡಿ ಆಕರ್ಷಕ 91 ರನ್ ಜೊತೆಯಾಟ ನಡೆಸಿತು. ಈ ವೇಳೆ ಪೀಟ್ 56 ರನ್ ಗಳಿಸಿದರು. ಮುತ್ತುಸಾಮಿ 49 ರನ್ ಗಳಿಸಿ ಅಜೇಯರಾಗುಳಿದರು.

ಆಫ್ರಿಕನ್ನರು ಕಾಡಿದ ಶಮಿ, ಜಡ್ಡು:

ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಹಂತ ಹಂತವಾಗಿ ವಿಕೆಟ್ ಕೀಳುತ್ತಾ ಆಫ್ರಿಕನ್ನರನ್ನು ಬಹುವಾಗಿ ಕಾಡಿದರು.

ಮೊಹಮ್ಮದ್ ಶಮಿ 5 ವಿಕೆಟ್ ಪಡೆದರೆ ಸ್ಪಿನ್ನರ್ ಜಡೇಜಾ 4 ವಿಕೆಟ್ ತಮ್ಮದಾಗಿಸಿಕೊಂಡರು. ಒಂದು ವಿಕೆಟ್ ಅಶ್ವಿನ್ ಪಾಲಾಯಿತು.

Intro:Body:

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್‌ ಪಂದ್ಯದ ಕೊನೆಯ ದಿನದಂದು ಭಾರತ ಭರ್ಜರಿ ಗೆಲುವು ಸಾಧಿಸಿದೆ.

ಆತಿಥೇಯ ಭಾರತ ನೀಡಿದ 395 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಪ್ರವಾಸಿಗರು ಉತ್ತಮ ಪ್ರತಿರೋಧ ತೋರಲೇ ಇಲ್ಲ. ನಾಲ್ಕನೇ ದಿನದಾಟ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡಿದ್ದ ಫ್ಲೆಸಿಸ್ ಪಡೆ ಇಂದು ಮುಂಜಾನೆ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲೇ ಸಾಗಿತು.

ಇಂದಿನ  ದಿನದಾಟದ ಮೊದಲ ಅವಧಿಯಲ್ಲೇ ತೆಯೂನಿಸ್‌ ಡೆ ಬ್ರೂಯ್ನ್‌ (10), ತೆಂಬಾ ಬವೂಮಾ (0), ನಾಯಕ ಫಾಫ್‌ ಡು ಪ್ಲೆಸಿಸ್‌ (13), ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ'ಕಾಕ್‌ (0), ವೆರ್ನಾನ್​ ಫಿಲ್ಯಾಂಡರ್ (0), ಕೇಶವ ಮಹಾರಾಜ್ (0) ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಕೊನೆಯಲ್ಲಿ ಆಸರೆಯಾದ ಬಾಲಂಗೋಚಿಗಳು:

ಮೂರಂಕಿ ಗಡಿಯೂ ದಾಟುವುದು ಕಷ್ಟ ಎನ್ನುತ್ತಿರುವಾಗಲೇ ತಂಡಕ್ಕೆ ಆಸರೆಯಾ ಡೀನ್ ಪೀಟ್ ಹಾಗೂ ಸೆನುರಾನ್ ಮುತ್ತುಸ್ವಾಮಿ ಅರ್ಧಶತಕದ ಜೊತೆಯಾಟ ನಡೆಸಿ ಟೀಂ ಇಂಡಿಯಾ ಬೌಲರ್​ಗಳನ್ನು ಕಾಡಿದರು.

ಈ ಜೋಡಿ ಆಕರ್ಷಕ 91 ರನ್ ಜೊತೆಯಾಟ ನಡೆಸಿತು. ಈ ವೇಳೆ ಪೀಟ್ 56 ರನ್ ಗಳಿಸಿದರು. ಮುತ್ತುಸಾಮಿ  ರನ್ ಕಲೆ ಹಾಕಿದರು.

ಆಫ್ರಿಕನ್ನರು ಕಾಡಿದ ಶಮಿ, ಜಡ್ಡು:

ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಹಂತ ಹಂತವಾಗಿ ವಿಕೆಟ್ ಕೀಳುತ್ತಾ ಆಫ್ರಿಕನ್ನರನ್ನು ಬಹುವಾಗಿ ಕಾಡಿದರು.

ಜಡೇಜಾ ಹಾಗೂ ಶಮಿ ತಲಾ 4 ವಿಕೆಟ್ ಹಂಚಿಕೊಂಡರು. ಒಂದು ವಿಕೆಟ್ ಅಶ್ವಿನ್ ಪಾಲಾಯಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.