ವಿಶಾಖಪಟ್ಟಣಂ: ಅಭ್ಯಾಸ ಪಂದ್ಯದಲ್ಲಿ ಶೂನ್ಯ ಸುತ್ತಿ ಭಾರಿ ಟೀಕೆಗೆ ಒಳಗಾಗಿದ್ದ ರೋಹಿತ್ ಶರ್ಮಾ ಮೊದಲ ಟೆಸ್ಟ್ನಲ್ಲಿ ಆಕರ್ಷಕ ಶತಕ ಸಿಡಿಸಿ ಎಲ್ಲ ಟೀಕೆಗೂ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.
ಸತತ ವೈಫಲ್ಯ ಅನುಭವಿಸಿ ಟೆಸ್ಟ್ ತಂಡದಿಂದ ಹೊರಬಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಸ್ಥಾನಕ್ಕೆ ಬಂದಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ಅಭ್ಯಾಸ ಪಂದ್ಯದಲ್ಲಿ ಶೂನ್ಯ ಸುತ್ತಿ ಟೀಕೆಗೆ ಗುರಿಯಾಗಿದ್ದರು.
ಇಂದು ವಿಶಾಪಟ್ಟಣಂನ ವೈ.ಎಸ್.ರಾಜಶೇಖರ ರೆಡ್ಡಿ ಮೈದಾನದಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಹಿಟ್ಮ್ಯಾನ್ ನಿಧಾನವಾಗಿ ಬೌಂಡರಿ, ಸಿಕ್ಸರ್ ಮೂಲಕ ರನ್ ಕಲೆಹಾಕುತ್ತಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ರೋಹಿತ್ ಶರ್ಮಾ ನಾಲ್ಕು ಸಿಕ್ಸರ್ ಹಾಗೂ ಒಂಭತ್ತು ಬೌಂಡರಿ ಮೂಲಕ ಮೂರಂಕಿ ಗಡಿ(100) ದಾಟಿದ್ದಾರೆ. ರೋಹಿತ್ಗೆ ಕನ್ನಡಿಗ ಮಯಾಂಕ್ ಅಗರ್ವಾಲ್(80) ಉತ್ತಮ ಸಾಥ್ ನೀಡುತ್ತಿದ್ದು, ನೂರರ ಗಡಿಯತ್ತ ಸಾಗಿದ್ದಾರೆ. ಸದ್ಯ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 182 ರನ್ ಗಳಿಸಿದೆ.