ETV Bharat / sports

ಸೋಲಿನ ಮೇಲೆ ಮತ್ತೊಂದು ಬರೆ.. ಭಾರತ ತಂಡಕ್ಕೆ ಪಂದ್ಯದ ಸಂಭಾವನೆಯ ಶೇ.80ರಷ್ಟು ದಂಡ!

author img

By

Published : Feb 5, 2020, 7:34 PM IST

ಇಂದು ನಡೆದ ನ್ಯೂಜಿಲ್ಯಾಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನ ಗತಿಯ ಬೌಲಿಂಗ್‌ ಮಾಡಿರುವುದಕ್ಕೆ ಶೇ.80 ಪರ್ಸೆಂಟ್​ ಮೊತ್ತವನ್ನು ದಂಡವಾಗಿ ಕಟ್ಟಬೇಕಿದೆ.

ಭಾರತ- ನ್ಯೂಜಿಲ್ಯಾಂಡ್​
ಭಾರತ- ನ್ಯೂಜಿಲ್ಯಾಂಡ್​

ಹ್ಯಾಮಿಲ್ಟನ್​: ಭಾರತ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್​ಗಳ ಸೋಲು ಕಂಡಿದ್ದ ಭಾರತ ತಂಡಕ್ಕೆ ರೆಫ್ರಿ ಪಂದ್ಯ ಸಂಭಾವನೆಯ ಶೇ. 80ರಷ್ಟು ಮೊತ್ತದ ದಂಡ ವಿಧಿಸಿದ್ದಾರೆ. ಬುಧವಾರ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನ ಗತಿಯ ಬೌಲಿಂಗ್‌ ಮಾಡಿರುವುದಕ್ಕೆ ಭಾರತ ತಂಡ ಈ ದಂಡ ತೆರಬೇಕಿದೆ.

ಮೈದಾನದ ಅಂಪೈರ್​ಗಳಾದ ಶಾನ್‌ ಹೈಗ್, ಲಾಂಗ್ಟನ್​ ರಸೆರ್​, 3ನೇ ಅಂಪೈರ್​ ಬ್ರೂಶ್​ ಆಕ್ಸನ್​ಫೋರ್ಡ್​ ಹಾಗೂ 4ನೇ ಅಂಪೈರ್​ ಕ್ರಿಸ್​ ಬ್ರೌನ್​ ಕೊಹ್ಲಿಗೆ ದಂಡವಿಧಿಸಿ ಮ್ಯಾಚ್​ ರೆಫ್ರಿ ಕ್ರಿಸ್​ ಬ್ರಾಡ್​ಗೆ ವರದಿ ನೀಡಿದ್ದರು. ನಿಗದಿತ ಸಮಯಕ್ಕಿಂತ 4 ಓವರ್​ಗಳನ್ನು ಭಾರತ ತಂಡ ತಡವಾಗಿ ಮಾಡಿದ್ದರಿಂದ ಓವರ್​ಗೆ 20 ಪರ್ಸೆಂಟ್​ನಂತೆ ನಾಲ್ಕು ಓವರ್​ಗಳಿಗೆ ಶೇ. 80ರಷ್ಟನ್ನು ದಂಡವಾಗಿ ಕೊಹ್ಲಿ ಬಳಗ ಕಟ್ಟಬೇಕಿದೆ.

ಕೊಹ್ಲಿ ತಮ್ಮಿಂದಾದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಪ್ಪಿಗೆ ದಂಡಿ ವಿಧಿಸಿರುವುದಕ್ಕೆ ಕೊಹ್ಲಿಯಿಂದ ಯಾವುದೇ ಆಕ್ಷೇಪಣೆ ಇಲ್ಲವಾದ್ದರಿಂದ ಅವರಿಗೆ ಯಾವುದೇ ರೀತಿಯ ವಿಚಾರಣೆ ಇರುವುದಿಲ್ಲ ಎಂದು ರೆಫ್ರಿ ಬ್ರಾಡ್​ ತಿಳಿಸಿದ್ದಾರೆ.

ಭಾರತ ತಂಡ ಕಿವೀಸ್ ಪ್ರವಾಸದಲ್ಲಿ ದಂಡ ಕಟ್ಟುತ್ತಿರುವುದು ಇದೇ ಮೊದಲೇನಲ್ಲ. ಟಿ20 ಸರಣಿಯ 4ನೇ ಪಂದ್ಯದಲ್ಲಿ ಶೇ.40 ಹಾಗೂ ಕೊನೆಯ ಪಂದ್ಯದಲ್ಲಿ ಶೇ.20ರಷ್ಟು ಮೊತ್ತವನ್ನು ದಂಡವಾಗಿ ಕಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.