ETV Bharat / sports

ಮೊದಲ ಟೆಸ್ಟ್: ಐದು ವಿಕೆಟ್ ಕಳೆದುಕೊಂಡು ಕಿವೀಸ್ ಅಲ್ಪ ಮುನ್ನಡೆ

ಅಲ್ಪಮೊತ್ತಕ್ಕೆ ಟೀಂ ಇಂಡಿಯಾ ಪತನವಾದ ನಂತರ ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 216 ರನ್​ ಗಳಿಸುವ ಮೂಲಕ 51 ರನ್​ಗಳ ಮುನ್ನಡೆ ಸಾಧಿಸಿದೆ.

author img

By

Published : Feb 22, 2020, 1:09 PM IST

Updated : Feb 22, 2020, 1:29 PM IST

India vs New Zealand first test day 2,ನ್ಯೂಜಿಲ್ಯಾಂಡ್​ಗೆ ಅಲ್ಪ ಮುನ್ನಡೆ
ನ್ಯೂಜಿಲ್ಯಾಂಡ್​ಗೆ ಅಲ್ಪ ಮುನ್ನಡೆ

ವೆಲ್ಲಿಂಗ್ಟನ್​: ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ 165 ರನ್​ಗಳ ಅಲ್ಪ ಮೊತ್ತ ಪೇರಿಸಿ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್​ ಆರಂಭಿಸಿದ ಕಿವೀಸ್ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ ಪ್ರಮುಖ 5 ವಿಕೆಟ್​ ಕಳೆದುಕೊಂಡು 216 ರನ್​ ಗಳಿಸುವ ಮೂಲಕ 51 ರನ್​ಗಳ ಅಲ್ಪ ಮುನ್ನಡೆ ಸಾಧಿಸಿದೆ.

ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆಟಗಾರರು ಕಿವೀಸ್​ ದಾಳಿಗೆ ಪ್ರತಿರೋಧ ತೋರಲಿಲ್ಲ. ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಭಾರತ ತಂಡ 165 ರನ್​ಗಳಿಗ್ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇದಕ್ಕೆ ಮರುತ್ತರವಾಗಿ ಇನ್ನಿಂಗ್ಸ್​ ಆರಂಭಿಸಿದ ಕಿವೀಸ್​ ಪಡೆಗೆ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಆರಂಭಿಕ ಆಘಾತ ನೀಡಿದ್ರು. ಕೇವಲ 11 ರನ್​ ಗಳಿಸಿದ್ದ ಟಾಮ್ ಲಾಥಮ್, ಪಂತ್​ಗೆ ಕ್ಯಾಚಿತ್ತು ನಿರ್ಗಮಿಸಿದ್ರು.

ಮತ್ತೊಂದೆಡೆ ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದ ಟಾಮ್ ಬ್ಲುಂಡೆಲ್ ಕೂಡ ಇಶಾಂತ್​ ಬೌಲಿಂಗ್​ನಲ್ಲಿ ಬೌಲ್ಡ್​ ಆಗಿ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದ್ರು. ಈ ವೇಳೆ ತಂಡಕ್ಕೆ ಆಸರೆಯಾದ ಅನುಭವಿ ರಾಸ್​ ಟೇಲರ್ ಮತ್ತು ನಾಯಕ ಕೇನ್ ಭಾರತೀಯ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು. 25 ಓವರ್​ಗಳ ಕಾಲ ಜೊತೆಯಾಗಿ ಬ್ಯಾಟ್​ ಬೀಸಿದ್ರು.

  • Tea in Wellington!

    Ishant Sharma made a couple of breakthroughs, but New Zealand ate into the deficit and are looking good for a sizeable first-innings lead!

    Will India pull things back in the third session?#NZvIND pic.twitter.com/6eylE9Y4lj

    — ICC (@ICC) February 22, 2020 " class="align-text-top noRightClick twitterSection" data=" ">

ವಿಕೆಟ್ ನೀಡದೆ ಉತ್ತಮವಾಗಿ ಬ್ಯಾಟಿಂಗ್​ ನಡೆಸುತ್ತಿದ್ದ ಈ ಜೋಡಿಯನ್ನು ಇಶಾಂತ್​ ಶರ್ಮಾ ಬೇರ್ಪಡಿಸಿದ್ರು. 100ನೇ ಟೆಸ್ಟ್​ ಪಂದ್ಯ ಆಡುತ್ತಿರುವ ರಾಸ್ ಟೇಲರ್, ಇಶಾಂತ್​ ಬೌಲಿಂಗ್​ನಲ್ಲಿ ಪುಜಾರಗೆ ಕೈಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು. ಈ ವೇಳೆ ತಾಳ್ಮೆಯ ಆಟವಾಡಿದ ನಾಯಕ ಕೇನ್ ವಿಲಿಯಮ್ಸನ್​ ಅರ್ಧಶತಕ ಸಿಡಿಸಿದ್ರು.

  • Huge wicket!

    Kane Williamson (89) plays a crisp drive off Mohammed Shami but fails to keep it down. Sub fielder Ravindra Jadeja takes the catch a few inches off the ground. A fine effort!#NZvIND pic.twitter.com/R39BFSBPgK

ಕ್ರೀಸ್‌ ಕಟ್ಟಿಕೊಂಡು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ವಿಲಿಯಮ್ಸನ್(89)​​​ ಅವರನ್ನು ಮೊಹಮ್ಮದ್​ ಶಮಿ ಪೆವಿಲಿಯನ್​ ಸೇರಿಸಿದ್ರು. ಹೆನ್ರಿ ನಿಕೋಲಸ್​ ಕೂಡ 17 ರನ್‌ಗಳಿಸಿ ಔಟ್​ ಆದ್ರು. ಅಂತಿಮವಾಗಿ ಎರಡನೇ ದಿನದಾಟದ ಅಂತ್ಯಕ್ಕೆ ಕಿವೀಸ್ ತಂಡ 5 ವಿಕೆಟ್​ ಕಳೆದುಕೊಂಡು 216 ರನ್​ ಗಳಿಸುವ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 51 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಬಿ.ಜೆ.ವಾಟ್ಲಿಂಗ್ 14 ಮತ್ತು ಕಾಲಿನ್ ಡಿ ಗ್ರಾಂಡ್​ಹೋಮ್ 4 ರನ್​ ಗಳಿಸುವ ಮೂಲಕ ಮೂರನೆ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಪರ ಇಶಾಂತ್​ ಶರ್ಮ 3, ಮಹಮ್ಮದ್ ಶಮಿ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

Last Updated : Feb 22, 2020, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.