ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 400 ವಿಕೆಟ್​​​​​​: ಸ್ಟೈನ್​, ಹೆರಾತ್​, ಹ್ಯಾಡ್ಲಿ ದಾಖಲೆ ಮುರಿದ ಅಶ್ವಿನ್​​ - England tour of India

ಅಶ್ವಿನ್​ ವೃತ್ತಿ ಜೀವನದ 77ನೇ ಟೆಸ್ಟ್​ ಪಂದ್ಯದಲ್ಲಿ 400 ವಿಕೆಟ್​ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್​ ಕೇವಲ 72 ಟೆಸ್ಟ್​ ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ.

ಟೆಸ್ಟ್​ ಕ್ರಿಕೆಟ್ ವೇಗವಾಗಿ 400 ವಿಕೆಟ್
ರವಿಚಂದ್ರನ್ ಅಶ್ವಿನ್ ದಾಖಲೆ
author img

By

Published : Feb 25, 2021, 7:15 PM IST

ಅಹ್ಮದಾಬಾದ್​: ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಜೋಫ್ರಾ ಆರ್ಚರ್​ ವಿಕೆಟ್​ ಪಡಯುವ ಮೂಲಕ ಭಾರತದ ಅನುಭವಿ ಸ್ಪಿನ್​ ಬೌಲರ್​ ಅಶ್ವಿನ್,​ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 400 ವಿಕೆಟ್​ ಪಡೆದ 2ನೇ ಬೌಲರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಅಶ್ವಿನ್​ ವೃತ್ತಿ ಜೀವನದ 77ನೇ ಟೆಸ್ಟ್​ ಪಂದ್ಯದಲ್ಲಿ 400 ವಿಕೆಟ್​ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್​ ಕೇವಲ 72 ಟೆಸ್ಟ್​ ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ.

ನ್ಯೂಜಿಲ್ಯಾಂಡ್​ನ ರಿಚರ್ಡ್​ ಹ್ಯಾಡ್ಲಿ ಮತ್ತು ದಕ್ಷಿಣ ಆಫ್ರಿಕಾ ಡೇಲ್​ ಸ್ಟೈನ್​ 80 ಪಂದ್ಯಗಳಿಂದ 400 ವಿಕೆಟ್​ ಪಡೆದು 3ನೇ ಸ್ಥಾನದಲ್ಲಿದ್ದಾರೆ. ರಂಗನಾ ಹೆರಾತ್​ 84 ಹಾಗೂ ಅನಿಲ್ ಕುಂಬ್ಳೆ 85 ಪಂದ್ಯ ತೆಗೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 600 ವಿಕೆಟ್

ಟೆಸ್ಟ್​ ಪಂದ್ಯದಲ್ಲಿ 400 ವಿಕೆಟ್​ ಅಲ್ಲದೆ, ಒಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ(3 ಮಾದರಿ ಸೇರಿ) ವೇಗವಾಗಿ 600 ವಿಕೆಟ್​ ಪಡೆದ 4ನೇ ಬೌಲರ್​ ಎಂಬ ಖ್ಯಾತಿಗೂ ಅಶ್ವಿನ್ ಪಾತ್ರರಾಗಿದ್ದಾರೆ.

ವೇಗವಾಗಿ 600 ವಿಕೆಟ್​ ಪಡೆದ ಬೌಲರ್​ಗಳು

  • ಡೇಲ್​ ಸ್ಟೈನ್​ 211 ಪಂದ್ಯ
  • ಗ್ಲೇನ್ ಮೆಕ್​ಗ್ರಾತ್​ 226
  • ಅಲೆನ್​ ಡೊನಾಲ್ಡ್​ 232
  • ರವಿಚಂದ್ರನ್ ಅಶ್ವಿನ್ 236
  • ಮುತ್ತಯ್ಯ ಮುರುಳೀಧರನ್​ 240
  • ಬ್ರೆಟ್​ ಲೀ 251

ETV Bharat Logo

Copyright © 2024 Ushodaya Enterprises Pvt. Ltd., All Rights Reserved.