ಚೆನ್ನೈ : ಇಂದು ಆರಂಭವಾದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಭಾರತದ ಆಲ್‌ರೌಂಡರ್ ಅಕ್ಷರ್ ಪಟೇಲ್ ತಂಡದಿಂದ ಹೊರ ನಡೆದಿದ್ದಾರೆ.
ಗುರುವಾರ ನಡೆದ ಅಭ್ಯಾಸದ ವೇಳೆ ಎಡ ಮೊಣಕಾಲಿನಲ್ಲಿ ನೋವು ಕಾಣಿಸಿತ್ತು. ಮೊಣಕಾಲಿನ ಗಾಯದ ಸಮಸ್ಯೆ ಎದುರುಸುತ್ತಿರುವ ಅಕ್ಷರ್ ಪಟೇಲ್, ತಂಡದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು.
ಅಕ್ಷರ್ ಪಟೇಲ್ ಗಾಯದ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡವು ಪರೀಕ್ಷೆ ನಡೆಸಿದೆ. "ಅವರ ವಿವರವಾದ ವರದಿಗೆ ಕಾಯುತ್ತಿದ್ದೇವೆ. ಹಾಗಾಗಿ, ಆರಂಭಿಕ ಪಂದ್ಯದ ಆಯ್ಕೆಗೆ ಅವರು ಲಭ್ಯವಿರುವುದಿಲ್ಲ" ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ : ಭಾರತ - ಇಂಗ್ಲೆಂಡ್ ಮೊದಲ ಟೆಸ್ಟ್: ಲಂಚ್ ಬ್ರೇಕ್ ವೇಳೆಗೆ ಕುಸಿತ ಕಂಡ ಆಂಗ್ಲ ಪಡೆ
ಇಂದು ಆರಂಭವಾದ ಮೊದಲ ಟೆಸ್ಟ್ ಪಂದ್ಯಕ್ಕೆ ಸ್ಪಿನ್ನರ್‌ಗಳಾದ ಶಹಬಾಜ್ ನದೀಮ್ ಮತ್ತು ರಾಹುಲ್ ಚಹರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಅದರಲ್ಲಿ ಶಹಬಾಜ್ ನದೀಮ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.