ETV Bharat / sports

ಭಾರತ ವಿರುದ್ಧ ಟೆಸ್ಟ್​ಸರಣಿಗಾಗಿ ಅಭ್ಯಾಸ ಆರಂಭಿಸಿದ ಆರ್ಚರ್, ಸ್ಟೋಕ್ಸ್​, ಬರ್ನ್ಸ್​

4 ಪಂದ್ಯಗಳ ಟೆಸ್ಟ್​ ಸರಣಿ ಫೆಬ್ರವರಿ 5ರಿಂದ ಆರಂಭವಾಗಲಿದೆ. ಮೊದಲೆರಡು ಪಂದ್ಯ ಚೆನ್ನೈನ ಚೆಪಾಕ್​ನಲ್ಲಿ ನಡೆದರೆ, ಕೊನೆಯ ಎರಡು ಟೆಸ್ಟ್​ ನೂತನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ
ಅಭ್ಯಾಸ ಆರಂಭಿಸಿದ ಆರ್ಚರ್,ಸ್ಟೋಕ್ಸ್​, ಬರ್ನ್ಸ್
author img

By

Published : Jan 30, 2021, 12:37 PM IST

ಚೆನ್ನೈ: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್​, ಬ್ಯಾಟ್ಸ್​ಮನ್​ ರೋರಿ ಬರ್ನ್ಸ್​ ಮತ್ತು ಆಲ್​ರೌಂಡರ್​ ಬೆನ್​ಸ್ಟೋಕ್ಸ್​ ಭಾರತ ತಂಡದ ವಿರುದ್ದ ಮುಂಬರುವ 4 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಶನಿವಾರದಿಂದ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ತರಬೇತಿ ಆರಂಭಿಸಿದ್ದಾರೆ.

ಬುಧವಾರ ಸಂಪೂರ್ಣ ಇಂಗ್ಲೆಂಡ್ ತಂಡ ಶ್ರೀಲಂಕಾ ಟೆಸ್ಟ್​ ಸರಣಿ ಮುಗಿಸಿ ಚೆನ್ನೈಗೆ ಬಂದು ಸೇರಿದ್ದು, 6 ದಿನಗಳ ಕ್ವಾರಂಟೈನ್​ಗೆ ಒಳಗಾಗಿದೆ. ಇನ್ನು ತಂಡಕ್ಕಿಂತ ಮೊದಲೇ ಭಾರತಕ್ಕೆ ಆಗಮಿಸಿರುವ ಸ್ಟೋಕ್ಸ್​, ಬರ್ನ್ಸ್​ ಹಾಗೂ ಆರ್ಚರ್​ ಕ್ವಾರಂಟೈನ್​ ಮುಗಿಸಿದ್ದಾರೆ. ಹಾಗಾಗಿ ಅಭ್ಯಾಸ ಶುರು ಮಾಡಿದ್ದಾರೆ.

4 ಪಂದ್ಯಗಳ ಟೆಸ್ಟ್​ ಸರಣಿ ಫೆಬ್ರವರಿ 5ರಿಂದ ಆರಂಭವಾಗಲಿದೆ. ಮೊದಲೆರಡು ಪಂದ್ಯ ಚೆನ್ನೈನ ಚೆಪಾಕ್​ನಲ್ಲಿ ನಡೆದರೆ, ಕೊನೆಯ ಎರಡು ಟೆಸ್ಟ್​ ನೂತನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದೆ.

" ಜೋಫ್ರಾ ಆರ್ಚರ್​, ಬೆನ್​ ಸ್ಟೋಕ್ಸ್​ ಮತ್ತು ರೋರಿ ಬರ್ನ್ಸ್​, ಇಂಗ್ಲೆಂಡ್ ಬಳಗದ ಈ ಮೂವರು ಆಟಗಾರರು ಇಂದು ಬೆಳಗ್ಗೆ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತರಬೇತಿ ಆರಂಭಿಸಿದ್ದಾರೆ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್​ ಮಂಡಳಿ ಶನಿವಾರ ತಿಳಿಸಿದೆ.

" ಆರ್ಚರ್​, ಬೆನ್​ ಸ್ಟೋಕ್ಸ್​ ಮತ್ತು ರೋರಿ ಬರ್ನ್ಸ್ ಮುಂದಿನ ಮೂರು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 2 ಗಂಟೆಗಳ ಕಾಲ​ ತರಬೇತಿಯನ್ನು ನಡೆಸಲಿದ್ದಾರೆ" ಎಂದು ಇಸಿಬಿ ತಿಳಿಸಿದೆ.

​ಇನ್ನು ಇಡೀ ಇಂಗ್ಲೆಂಡ್​ ತಂಡ ಶುಕ್ರವಾರ ಪಿಸಿಆರ್​ ಕೋವಿಡ್​ 19 ಟೆಸ್ಟ್​ಗೆ ಒಳಗಾಗಿದ್ದು, ಎಲ್ಲಾ ಆಟಗಾರರು ನೆಗೆಟಿವ್ ವರದಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:87 ವರ್ಷಗಳ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.