ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ಆರ್.ಅಶ್ವಿನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ವೈಫಲ್ಯ ಅನುಭವಿಸುತ್ತಿದ್ದಂತೆ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಆರ್. ಆಶ್ವಿನ್ ತಾವು ಎದುರಿಸಿದ 135 ಎಸೆತಗಳಲ್ಲಿ 103ರನ್ಗಳಿಕೆ ಮಾಡಿದ್ರು. ಇದರಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸೇರಿಕೊಂಡಿತ್ತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಆರಂಭಿಕ ಕುಸಿತಕ್ಕೊಳಗಾದರೂ ಕೊಹ್ಲಿ- ಅಶ್ವಿನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. 62ರನ್ಗಳಿಕೆ ಮಾಡಿದ್ದ ವೇಳೆ ಕ್ಯಾಪ್ಟನ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಯಾವೊಬ್ಬ ಪ್ಲೇಯರ್ಸ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಅಶ್ವಿನ್ ಎದುರಾಳಿ ಬೌಲರ್ಗಳನ್ನ ಉತ್ತಮವಾಗಿ ಎದುರಿಸಿದರು. ಸದ್ಯ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ 9ವಿಕೆಟ್ನಷ್ಟಕ್ಕೆ 284ರನ್ಗಳಿಕೆ ಮಾಡಿದ್ದು, 479ರನ್ಗಳ ಮುನ್ನಡೆ ಪಡೆದುಕೊಂಡಿದೆ. ಜತೆಗೆ ಎರಡು ದಿನಗಳ ಆಟ ಬಾಕಿ ಉಳಿದಿದೆ.
-
A 5-wicket haul followed by an excellent 💯 for the 3rd time in a Test!
— BCCI (@BCCI) February 15, 2021 " class="align-text-top noRightClick twitterSection" data="
The magnificent @ashwinravi99 has brought up his 5th Test century and his first in Chennai. What a game is the local hero having. 🤩💪🏾 #TeamIndia #INDvENG @Paytm pic.twitter.com/dUni7KkLYc
">A 5-wicket haul followed by an excellent 💯 for the 3rd time in a Test!
— BCCI (@BCCI) February 15, 2021
The magnificent @ashwinravi99 has brought up his 5th Test century and his first in Chennai. What a game is the local hero having. 🤩💪🏾 #TeamIndia #INDvENG @Paytm pic.twitter.com/dUni7KkLYcA 5-wicket haul followed by an excellent 💯 for the 3rd time in a Test!
— BCCI (@BCCI) February 15, 2021
The magnificent @ashwinravi99 has brought up his 5th Test century and his first in Chennai. What a game is the local hero having. 🤩💪🏾 #TeamIndia #INDvENG @Paytm pic.twitter.com/dUni7KkLYc
ದಾಖಲೆ ಬರೆದ ಅಶ್ವಿನ್
ಒಂದೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 5 ವಿಕೆಟ್ ಪಡೆದುಕೊಳ್ಳುವುದರ ಜೊತೆಗೆ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೈದಾನದಲ್ಲಿ ಶತಕ ಸಿಡಿಸಿರುವ ಎರಡನೇ ತಮಿಳುನಾಡು ಪ್ಲೇಯರ್ ಎಂಬ ಕೀರ್ತಿಗೂ ಅಶ್ವಿನ್ ದಾಖಲಾಗಿದ್ದು, ಈ ಹಿಂದೆ 1986/87ರಲ್ಲಿ ಕೃಷ್ ಶ್ರೀಕಾಂತ್ನ ಈ ಸಾಧನೆ ಮಾಡಿದ್ದರು.