ETV Bharat / sports

ವೃದ್ಧಿಮಾನ್​ ಸಹಾ ವಿಶ್ವದ ಅತ್ಯುತ್ತಮ ವಿಕೆಟ್​ ಕೀಪರ್​! ಈ ಪಟ್ಟಿಯಲ್ಲಿ ಪಂತ್​ಗೆ ಎಷ್ಟನೇ ಸ್ಥಾನ ಗೊತ್ತಾ?

ಸದ್ಯದ ಮಟ್ಟಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಕೆಟ್​ ಕೀಪಿಂಗ್​ ಮಾಡುತ್ತಿರುವವರ ಪೈಕಿ ಬಂಗಾಳ ವೃಧ್ಧಿಮಾನ್​ ಸಹಾ ಅತ್ಯುತ್ತಮ ವಿಕೆಟ್​ ಕೀಪರ್​ ಆಗಿದ್ದಾರೆ. ಇವರು ವಿಕೆಟ್​ ಹಿಂದೆ ಬರುವ ಕ್ಯಾಚ್​ಗಳನ್ನು ಶೇ.96.9 ರಷ್ಟನ್ನು ಪಡೆಯುವಲ್ಲಿ ಯಶಸ್ವಿಯಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

Wriddhiman Saha
author img

By

Published : Oct 13, 2019, 1:34 PM IST

ಪುಣೆ: ಭಾರತ ತಂಡಕ್ಕೆ 22 ತಿಂಗಳ ನಂತರ ಮರು ಸೇರ್ಪಡೆ ಗೊಂಡಿರುವ ವೃದ್ಧಿಮಾನ್​ ಸಹಾ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಕ್ಯಾಚ್​ ಪಡೆಯುವ ಮೂಲಕ ತಾವು ವಿಶ್ವದ ಅತ್ಯುತ್ತಮ ವಿಕೆಟ್​ ಕೀಪರ್​ ಎಂಬುದನ್ನು ಸಾಕ್ಷಿ ಸಮೇತ ತೋರಿಸಿಕೊಟ್ಟಿದ್ದಾರೆ.

ಹೌದು, ಸದ್ಯದ ಮಟ್ಟಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಕೆಟ್​ ಕೀಪಿಂಗ್​ ಮಾಡುತ್ತಿರುವವರ ಪೈಕಿ ಬಂಗಾಳ ವೃಧ್ಧಿಮಾನ್​ ಸಹಾ ಅತ್ಯುತ್ತಮ ವಿಕೆಟ್​ ಕೀಪರ್​ ಆಗಿದ್ದಾರೆ. ಇವರು ವಿಕೆಟ್​ ಹಿಂದೆ ಬರುವ ಕ್ಯಾಚ್​ಗಳನ್ನು ಶೇ.96.9 ರಷ್ಟನ್ನು ಪಡೆಯುವಲ್ಲಿ ಯಶಸ್ವಿಯಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ವಿಶ್ವ ಟೆಸ್ಟ್​ ಕ್ರಿಕೆಟ್​ನಲ್ಲಿ ಪಸ್ತುತ ಚಾಲ್ತಿಯಲ್ಲಿರುವ ವಿಕೆಟ್​ ಕೀಪರ್​ಗಳ ಪೈಕಿ ಸಹಾ ಅತ್ಯತ್ತಮ ವಿಕೆಟ್​ ಕೀಪರ್​ ಎನಿಸಿಕೊಂಡಿದ್ದಾರೆ. ಇವರು 33 ಟೆಸ್ಟ್​ ಪಂದ್ಯಗಳಲ್ಲಿ 77 ಕ್ಯಾಚ್​ ಹಾಗೂ 10 ಸ್ಟಂಪ್​ ಮಾಡಿದ್ದಾರೆ.

ಇವರನ್ನು ಬಿಟ್ಟರೆ ಶ್ರೀಲಂಕಾದ ನಿರೋಶನ್​ ಡಿಕ್ವೆಲ್ಲಾ ತಮ್ಮ ಬಳಿ ಬರುವ ಕ್ಯಾ​ಚ್​ಗಳಲ್ಲಿ ಶೇಕಡಾ 95.5 ರಷ್ಟನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಭಾರತ ತಂಡದ ಮತ್ತೊಬ್ಬ ವಿಕೆಟ್​ ಕೀಪರ್​ ರಿಷಭ್ ಪಂತ್
ಶೇ 91.6 ಕ್ಯಾಚ್​ ಪಡೆದು ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.

ಸಹಾ ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಬ್ಯಾಟಿಂಗ್​ಗೆ ಹೆಚ್ಚು ಅವಕಾಶ ಸಿಕ್ಕಿಲ್ಲವಾದರೂ ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ 16 ಎಸೆತಗಳಲ್ಲಿ 21 ರನ್​ಗಳಿಸಿದ್ದರು. ಮೊದಲ ಟೆಸ್ಟ್​ನಲ್ಲಿ 2 ಕ್ಯಾಚ್​ ಹಾಗೂ ಎರಡನೇ ಟೆಸ್ಟ್​ನಲ್ಲಿ 4 ಕ್ಯಾಚ್​ ಪಡೆದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.