ಮ್ಯಾಂಚೆಸ್ಟರ್: ಕೊಹ್ಲಿ(72), ಧೋನಿ(56) ಅರ್ಧಶತಕದ ನೆರವಿನಿಂದ ಭಾರತ ತಂಡ ವಿಂಡೀಸ್ ವಿರುದ್ಧ 268 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೊಹ್ಲಿ ಬಳಗ ಆರಂಭದಲ್ಲಿ 18 ರನ್ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ನಾಯಕ ಕೊಹ್ಲಿ ಹಾಗೂ ರಾಹುಲ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿ ತಂಡವನ್ನು ಆಘಾತದಿಂದ ಪಾರು ಮಾಡಿದರು. 64 ಎಸೆತಗಳಲ್ಲಿ 6 ಬೌಂಡರಿ ಸಿಡಿಸಿದ್ದ ರಾಹುಲ್ ಹೋಲ್ಡರ್ ಬೌಲಿಂಗ್ನಲ್ಲಿ ಬೋಲ್ಡ್ ಆಗುವ ಮೂಲಕ ಮತ್ತೊಮ್ಮೆ ಅರ್ಧಶತಕಗಳಿಸುವಲ್ಲಿ ಎಡವಿದರು.
-
Innings Break#TeamIndia post a total of 268/7 on board. Over to the bowlers now 🤞#CWC19 pic.twitter.com/TIMYKSks7u
— BCCI (@BCCI) June 27, 2019 " class="align-text-top noRightClick twitterSection" data="
">Innings Break#TeamIndia post a total of 268/7 on board. Over to the bowlers now 🤞#CWC19 pic.twitter.com/TIMYKSks7u
— BCCI (@BCCI) June 27, 2019Innings Break#TeamIndia post a total of 268/7 on board. Over to the bowlers now 🤞#CWC19 pic.twitter.com/TIMYKSks7u
— BCCI (@BCCI) June 27, 2019
ರಾಹುಲ್ ನಂತರ ಬಂದ ವಿಜಯ್ ಶಂಕರ್ 14 ರನ್ಗಳಿಗೆ ಔಟಾದರೇ,ಜಾಧವ್ ಆಟ ಕೇವಲ 7 ರನ್ಗಳಿಗೆ ಸೀಮಿತವಾಯಿತು. ಈ ಇಬ್ಬರನ್ನು ಕೆಮರ್ ರೋಚ್ ಔಟ್ ಮಾಡಿದರು. ಈ ಹಂತದಲ್ಲಿ ಅರ್ಧಶತಕಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಕೊಹ್ಲಿ(72) ಹೋಲ್ಡರ್ ಬೌಲಿಂಗ್ನಲ್ಲಿ ಬ್ರಾವೋಗೆ ಕ್ಯಾಚ್ ನೀಡಿ ಔಟಾದರು.
-
Innings Break#TeamIndia post a total of 268/7 on board. Over to the bowlers now 🤞#CWC19 pic.twitter.com/TIMYKSks7u
— BCCI (@BCCI) June 27, 2019 " class="align-text-top noRightClick twitterSection" data="
">Innings Break#TeamIndia post a total of 268/7 on board. Over to the bowlers now 🤞#CWC19 pic.twitter.com/TIMYKSks7u
— BCCI (@BCCI) June 27, 2019Innings Break#TeamIndia post a total of 268/7 on board. Over to the bowlers now 🤞#CWC19 pic.twitter.com/TIMYKSks7u
— BCCI (@BCCI) June 27, 2019
ಧೋನಿ- ಪಾಂಡ್ಯ ಜುಗಲ್ಬಂದಿ:
ತಂಡದ ಮೊತ್ತ 180-5 ಆಗಿದ್ದಾಗ ಕ್ರೀಸ್ಗೆ ಆಗಮಿಸಿದ್ದಾಗ ಕ್ರೀಸ್ಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ 6ನೇ ವಿಕೆಟ್ ಜೊತೆಯಾಟದಲ್ಲಿ ರನ್ಗಳ ಜೊತೆಯಾಟದಲ್ಲಿ 70 ರನ್ ಸೇರಿಸಿದರು. 38 ಎಸೆತಗಳಲ್ಲಿ 5 ಬೌಂಡರಿ ಸಹಿತ 46 ರನ್ಗಳಿಸಿದ್ದ ಪಾಂಡ್ಯ ಕಾಟ್ರೆಲ್ಗೆ ಓವರ್ನಲ್ಲಿ ಫೆಬಿಯಾನ್ ಅಲೆನ್ಗೆ ಕ್ಯಾಚ್ ನೀಡಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಧೋನಿ ಥಾಮಸ್ ಎಸೆದ ಕೊನೆಯ ಓವರ್ನಲ್ಲಿ 1ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಒಟ್ಟಾರೆ 65 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 56 ರನ್ ಸಿಡಿಸಿ ತಂಡದ ಮೊತ್ತ 250 ರ ಗಡಿ ದಾಟಲು ನೆರವಾದರು.