ETV Bharat / sports

ಕ್ರಿಕೆಟ್​​​​​ ಕಲಿಸಿಕೊಟ್ಟ ಚಿಕ್ಕಪ್ಪನ ಜೊತೆ ವಿಶ್ವಕಪ್​ನಲ್ಲಿ ಆಡುತ್ತಿದ್ದಾನೆ ಈ ಸ್ಪಿನ್​​​ ಮಾಂತ್ರಿಕ! - mujeeb ur rahaman

ಮುಜೀಬ್​ 21ನೇ ಶತಮಾನದ ಆರಂಭದಲ್ಲಿ ಜನಿಸಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮೊಟ್ಟ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಇದೀಗ ತನಗೆ ಕ್ರಿಕೆಟ್​ ಹೇಳಿಕೊಟ್ಟಿದ್ದ ತನ್ನ ಚಿಕ್ಕಪ್ಪನ ಜೊತೆಯಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುವ ಮೂಲಕ ಗಮನ ಸೆಳೆದಿದ್ದಾರೆ.

World Cup 2019
author img

By

Published : Jun 20, 2019, 1:12 PM IST

Updated : Jun 20, 2019, 1:20 PM IST

ಲಂಡನ್: ಕೇವಲ 16 ವರ್ಷಕ್ಕೆ ಅಂತಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ಬಹುಬೇಗನೆ ತನ್ನ ಸ್ಪಿನ್​ ಕೈಚಳಕದಿಂದ ವಿಶ್ವದ ನಾನಾ ಟಿ-20 ಲೀಗ್​ಗಳಲ್ಲಿ ಆಡುವ ಅವಕಾಶ ಪಡೆದಿರುವ ಮುಜೀಬ್​ ಉರ್​ ರೆಹಮಾನ್​ ತನ್ನ ಚಿಕ್ಕಪ್ಪನ ಜೊತೆಯಲ್ಲಿಯೇ ಅಂತಾರಾಷ್ಟ್ರಿಯ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಹುಟ್ಟಿದ ಮೂರು ತಿಂಗಳಿಗೆ ಅಪ್ಪನನ್ನು ಕಳೆದುಕೊಂಡು ಖಾಸ್ಟ್​ ಪಟ್ಟಣದಲ್ಲಿ ಜಾಡ್ರನ್​ ಕುಟುಂಬದಲ್ಲಿ ಬೆಳೆದ ಮುಜೀಬ್​, ತನ್ನು ಬಾಲ್ಯದಿಂದಲೇ ಕ್ರಿಕೆಟರ್​ ಆಗಿದ್ದ ನೂರ್​ ಅಲಿ ಜಾಡ್ರನ್​​ಗೆ ಬೌಲಿಂಗ್​ ಮಾಡುತ್ತಾ ಕ್ರಿಕೆಟ್​ ಪ್ರೇಮ ಬೆಳೆಸಿಕೊಂಡಿದ್ದರು.

ತುಂಬಾ ಚಿಕ್ಕ ವಯಸ್ಸನಿಂದ ನೂರ್​ ಅಲಿ ಜಾಡ್ರನ್​ಗೆ ನೆಟ್​ನಲ್ಲಿ ಬೌಲಿಂಗ್​ ಮಾಡುತ್ತಿದ್ದ ಮುಜೀಬ್​ ಕೇವಲ ಅಂಡರ್​ 19 ಕ್ರಿಕೆಟ್​ನಲ್ಲಿ ಪಾಲ್ಗೊಂಡು ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ದರು. ನಂತರ 19 ಏಷ್ಯಾ ಕಪ್​ನಲ್ಲಿ ತನ್ನ ಬೌಲಿಂಗ್​ ಕೈಚಳಕದಿಂದ ತಂಡ ಚಾಂಪಿಯನ್​ ಆಗಲು ನೆರವಾಗಿದ್ದರು.

Nephew-Uncle Zadran
ಮುಜೀಬ್​ ಮತ್ತು ನೂರ್​ ಅಲಿ ಜಾಡ್ರನ್​

ಇದಾದ ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ್ದರು. ಮುಜೀಬ್​ 21ನೇ ಶತಮಾನದಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮೊಟ್ಟ ಮೊದಲ ಕ್ರಿಕೆಟಿಗನಾಗಿದ್ದಾರೆ. ಇದೀಗ ತನಗೆ ಕ್ರಿಕೆಟ್​ ಹೇಳಿಕೊಟ್ಟಿದ್ದ ತನ್ನ ಚಿಕ್ಕಪ್ಪನ ಜೊತೆಯಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಸರಿಗೂ ಪಾತ್ರರಾಗಿದ್ದಾರೆ.

ನೂರ್​ ಅಲಿ ಜಾಡ್ರನ್​ 2009ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಜಾಡ್ರನ್​ ಹಾಗೂ ಮುಜೀಬ್ ಜೊತೆಯಾಗಿ ಒಟ್ಟು 4 ಪಂದ್ಯವಾಡಿದ್ದಾರೆ.

Intro:Body:Conclusion:
Last Updated : Jun 20, 2019, 1:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.