ETV Bharat / sports

ಕ್ರಿಕೆಟ್​ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ದಾಖಲೆ ಬರೆದ 2020ರ ಮಹಿಳಾ ಟಿ-20 ವಿಶ್ವಕಪ್​​​!

ಈ ವರ್ಷ ನಡೆದ ಐಸಿಸಿ ಮಹಿಳಾ ಟಿ-20 ವಿಶ್ವಕಪ್​ ಕ್ರಿಕೆಟ್​ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆಗೊಳಗಾಗುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದೆ.

ICC Women's T20 World Cup
ICC Women's T20 World Cup
author img

By

Published : Jun 22, 2020, 8:50 PM IST

ದುಬೈ: ಕ್ರಿಕೆಟ್​ ಇತಿಹಾಸದಲ್ಲೇ 2020ರ ಮಹಿಳಾ ಟಿ-20 ವಿಶ್ವಕಪ್​ ಅತಿ ಹೆಚ್ಚು ವೀಕ್ಷಣೆಗೊಳಗಾಗಿ ದಾಖಲೆ ಬರೆದಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

2020ರ ಮಹಿಳಾ ಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, 1.1 ಬಿಲಿಯನ್​​ ವಿಡಿಯೋ ವೀಕ್ಷಣೆಗೊಳಗಾಗಿದೆ. ಈ ಹಿಂದಿನ ಆವೃತ್ತಿಗಳಿಗೆ ಹೋಲಿಕೆ ಮಾಡಿದಾಗ ಸುಮಾರು 20 ಪಟ್ಟು ಹೆಚ್ಚಿದೆ. 2017ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ನಡೆದಿದ್ದ 2017ರ ಏಕದಿನ ಮಹಿಳಾ ವಿಶ್ವಕಪ್​​ ವಿಡಿಯೋ ವೀಕ್ಷಣೆಗಿಂತಲೂ 10 ಪಟ್ಟು ಹೆಚ್ಚಾಗಿದೆ ಎಂದು ಐಸಿಸಿ ತಿಳಿಸಿದೆ. ಈ ಎರಡು ಸರಣಿಯಲ್ಲಿ ಟೀಂ ಇಂಡಿಯಾ ಫೈನಲ್​ ಪ್ರವೇಶ ಪಡೆದುಕೊಂಡು ರನ್ನರ್​ ಆಪ್​​ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ICC Women's T20 World Cup
ಟಿ-20 ವಿಶ್ವಕಪ್​ ಗೆದ್ದ ಆಸ್ಟ್ರೇಲಿಯಾ

ಟೀಂ ಇಂಡಿಯಾ ಫೈನಲ್​ಗೆ ಲಗ್ಗೆ ಹಾಕಿದ್ದರಿಂದಲೇ ಅತಿ ಹೆಚ್ಚು ವೀಕ್ಷಣೆಗೊಳಪಟ್ಟಿದೆ ಎಂದು ತಿಳಿದು ಬಂದಿದೆ. 2020ರ ಟಿ-20 ವಿಶ್ವಕಪ್​ನಲ್ಲಿ ಐಸಿಸಿ ಆಯೋಜನೆ ಮಾಡಿರುವ ಎರಡನೇ ಯಶಸ್ವಿ ಟೂರ್ನಮೆಂಟ್​ ಇದಾಗಿದ್ದು, ಇದಕ್ಕೂ ಮೊದಲು 2019ರ ಏಕದಿನ ವಿಶ್ವಕಪ್​ ನಡೆದಿತ್ತು.

ಭಾರತದಲ್ಲೇ 86.15 ಮಿಲಿಯನ್​​ ವೀಕ್ಷಣೆಯಾಗಿದ್ದು, 2018ರ ಟೂರ್ನಮೆಂಟ್​ಗಿಂತಲೂ ಶೇ. 152ರಷ್ಟು ಜಾಸ್ತಿಯಾಗಿದೆ. ಈ ಟೂರ್ನಿಗಳ ಕಾಮೆಂಟರಿ ಇಂಗ್ಲಿಷ್​​, ಹಿಂದಿ, ತಮಿಳು, ತೆಲಗು ಹಾಗೂ ಕನ್ನಡದಲ್ಲಿ ಪ್ರಸಾರಗೊಂಡಿದ್ದವು. ಆಸ್ಟ್ರೇಲಿಯಾದಲ್ಲಿ ಇದರ ವೀಕ್ಷಣೆ 13.45 ಮಿಲಿಯನ್​ ಆಗಿದ್ದು, 2018ರ ವೀಕ್ಷಣೆಗಿಂತಲೂ 473 ಪ್ರತಿಶತ ಜಾಸ್ತಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಶೇ. 40ರಷ್ಟು ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.