ETV Bharat / sports

ಕಿವೀಸ್ ವಿರುದ್ಧ ರೋಚಕ ಜಯ, ಸೆಮೀಸ್​ಗೆ ಲಗ್ಗೆಯಿಟ್ಟ ಭಾರತೀಯ ವನಿತೆಯರು - ಭಾರತ ನ್ಯೂಜಿಲ್ಯಾಂಡ್ ಪಂದ್ಯ

ವಿಶ್ವಕಪ್ ಟಿ-20 ಟೂರ್ನಿಯಲ್ಲಿ ಟೀಂ ಇಂಡಿಯಾ ವನಿತೆಯರು ಕಿವೀಸ್ ಮಣಿಸುವ ಮೂಲಕ ದಾಖಲೆಯ ಅಜೇಯ ಓಟ ಮುಂದುವರೆಸಿದ್ದಾರೆ.

ICC Womens T20 World Cup 2020,ಕಿವೀಸ್​ಗೆ ಆರಂಭಿಕ ಆಘಾತ
ಕಿವೀಸ್ ವಿರುದ್ಧ ರೋಚಕ ಜಯ
author img

By

Published : Feb 27, 2020, 11:38 AM IST

Updated : Feb 27, 2020, 12:40 PM IST

ಮೆಲ್ಬೋರ್ನ್: ವಿಶ್ವಕಪ್ ಟಿ-20 ಟೂರ್ನಿಯ ಮೂರನೇ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಕಿವೀಸ್ ವಿರುದ್ಧ 4 ರನ್​ಗಳ ಜಯ ದಾಖಲಿಸಿ ಸೆಮಿಫೈನಲ್ ಹಂತ ತಲುಪಿದೆ.

ಟೀಂ ಇಂಡಿಯಾ ವನಿತೆಯರು ನೀಡಿದ್ದ 134 ರನ್​ಗಳ ಗುರಿ ಬೆನ್ನತ್ತಿದ ಕಿವೀಸ್ ವನಿತೆಯರು ಆರಂಭಿಕ ಆಘಾತ ಅನುಭವಿಸಿದ್ರು. 34 ರನ್ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ತಂಡಕ್ಕೆ ಆಸರೆಯಾದ ಮ್ಯಾಡಿ ಗ್ರೀನ್(24) ಮತ್ತು ಕೇಟಿ ಮಾರ್ಟಿನ್(25) ತಂಡಕ್ಕೆ ಆಸರೆಯಾದ್ರು. ಉತ್ತಮ ಬೌಲಿಂಗ್ ದಾಳಿ ನಡೆಸಿದ ರಾಜೇಶ್ವರಿ ಗಾಯಕ್ವಾಡ್ ಮತ್ತು ರಾಧಾ ಯಾದವ್ ಈ ಇಬ್ಬರು ಆಟಗಾರ್ತಿಯರನ್ನು ಪೆವಿಲಿಯನ್ ಸೇರಿಸಿದ್ರು.

ಕೊನೇಯ ಕ್ಷಣದಲ್ಲಿ ಅಮೆಲಿಯಾ ಕೆರ್(34) 19ನೇ ಓವರ್​ನಲ್ಲಿ 18 ರನ್​ ಗಳಿಸುವ ಮೂಲಕ ಕಿವೀಸ್​ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ರು. ಆದ್ರೆ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಟೀಂ ಇಂಡಿಯಾ ವನಿತೆಯರು 130 ರನ್​ಗಳಿಗೆ ಕಿವೀಸ್ ತಂಡವನ್ನು ಕಟ್ಟಿಹಾಕಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ರು.

ಭಾರತ ತಂಡದ ಪರ ದೀಪ್ತಿ ಶರ್ಮಾ, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಟೀಂ ಇಂಡಿಯಾ ವನಿತೆಯರ ತಂಡಕ್ಕೆ ಶೆಫಾಲಿ ಉತ್ತಮ ಕೊಡುಗೆ ನೀಡಿದ್ದರು. ಸ್ಫೋಟಕ ಆಟವಾಡಿದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 46 ರನ್​ ಗಳಿಸಿದ್ರು. ನಿಧಾನಗತಿಯ ಬ್ಯಾಟಿಂಗ್ ನಡೆಸಿದ ತಾನಿಯಾ ಭಾಟಿಯಾ 23 ರನ್​ಗಳಿಸಿದ್ರು.

ಈ ಇಬ್ಬರು ಆಟಗಾರ್ತಿಯರನ್ನು ಹೊರತುಪಡಿಸಿ ಯಾರೊಬ್ಬರೂ ಕೂಡ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ ವನಿತೆಯರು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್​ಗಳಿಸಿದ್ದರು.

Last Updated : Feb 27, 2020, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.