ETV Bharat / sports

ವಿಶ್ವಕಪ್​ ಸೋತರು, ರನ್​, ವಿಕೆಟ್​ಗಳಿಕೆಯಲ್ಲಿ ಭಾರತೀಯರೇ ಟಾಪರ್ಸ್​ - ವಿಶ್ವಕಪ್​ನಲ್ಲಿ ಗರಿಷ್ಠ ರನ್​ ಬಾರಿಸಿದ ಜೈಸ್ವಾಲ್​

ಭಾರತದ ಯಶಸ್ವಿ ಜೈಸ್ವಾಲ್​ ಅಂಡರ್ 19 ವಿಶ್ವಕಪ್​ನಲ್ಲಿ 400 ರನ್​ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಲ್ಲದೇ, ಟೂರ್ನಿಶ್ರೇಷ್ಠ ಗೌರವವನ್ನು ಪಡೆದುಕೊಂಡಿದ್ದಾರೆ.

ICC U-19 WC
ಜೈಸ್ವಾಲ್​- ಬಿಷ್ನೋಯಿ
author img

By

Published : Feb 10, 2020, 1:09 PM IST

ಮುಂಬೈ: ಭಾರತ ತಂಡದ ಅಂಡರ್​ 19 ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಅನಿರೀಕ್ಷಿತ ಸೋಲುಕಂಡು ನಿರಾಶೆ ಅನುಭವಿಸಿದರೂ, ವೈಯಕ್ತಿಕ ರನ್​ಗಳಿಕೆ ಹಾಗೂ ವಿಕೆಟ್​ಗಳಿಕೆಯಲ್ಲಿ ಮೊದಲ ಸ್ಥಾನ ಪಡೆದಿರುವುದು ಸಮಾಧಾನಕರ ಸಂಗತಿಯಾಗಿದೆ.

ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಭಾರತ ತಂಡ 177 ರನ್​ಗಳಿಗೆ ಆಲೌಟ್​ ಆಯಿತು. ಯಶಸ್ವಿ ಜೈಸ್ವಾಲ್​ ಮಾತ್ರ 88 ರನ್​ಗಳಿಸಿ ಉತ್ತಮ ಪ್ರದರ್ಶನ ತೋರಿದರೆ, ಉಳಿದ ಬ್ಯಾಟ್ಸ್​ಮನ್​ಗಳು ರನ್​ಗಳಿಸಲು ವಿಫಲರಾದರು. 178 ರನ್​ಗಳ ಗುರಿ ಪಡೆದಿದ್ದ ಬಾಂಗ್ಲಾ ರವಿ ಬಿಷ್ನೋಯಿ​ ಅವರ ಮಾರಕ ದಾಳಿಯ ಹೊರತಾಗಿಯೂ 3 ವಿಕೆಟ್​ಗಳ ಸೋಲುಕಂಡಿತು.

ಆದರೆ, ಭಾರತ ತಂಡದ ಯಶಸ್ವಿ ಜೈಸ್ವಾಲ್​ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದರು. ಜೈಸ್ವಾಲ್​ ಟೂರ್ನಿಯಲ್ಲಿ 400 ರನ್​ಗಳಿಸಿದ್ದಾರೆ. ಪಂದ್ಯಗಳಿಂದ ಅವರು 4 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ.

ಇನ್ನು ಬೌಲಿಂಗ್​ನಲ್ಲಿ ಕಮಾಲ್​ ಮಾಡಿರುವ ಬಿಷ್ನೋಯಿ 6 ಪಂದ್ಯಗಳಿಂದ 17 ವಿಕೆಟ್​ ಪಡೆಯುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಯಾವುದೇ ಬೌಲರ್​ ಈ ಹಿಂದಿನ ಅಂಡರ್​ 19 ವಿಶ್ವಕಪ್​ನಲ್ಲಿ 14 ವಿಕೆಟ್​ಗಿಂತ ಹೆಚ್ಚು ವಿಕೆಟ್​ ಪಡೆದಿರಲಿಲ್ಲ. ಇದೀಗ 17 ವಿಕೆಟ್​ ಪಡೆದಿರುವ ಬಿಷ್ನೋಯಿ ಹೊಸ ದಾಖಲೆ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.