ETV Bharat / sports

ಐಸಿಸಿ ಟೆಸ್ಟ್ ರ‍್ಯಾಂಕಿಂಗ್ : ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆದ ರೋಹಿತ್ ಶರ್ಮಾ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಭಾರತವು ನಿರ್ಣಾಯಕ ಗೆಲುವು ಸಾಧಿಸಲು ನೆರವಾದ, ಟೀಂ ಇಂಡಿಯಾ ಆಟಗಾರ ಅಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಪ್ರಗತಿ ಸಾಧಿಸಿದ್ದಾರೆ.

Rohit Sharma breaks into top-10 for the first time
ಮೊದಲ ಬಾರಿಗೆ ಟಾಪ್ 10 ರಲ್ಲಿ ಸ್ಥಾನ ಪಡೆದ ರೋಹಿತ್ ಶರ್ಮಾ
author img

By

Published : Feb 28, 2021, 9:21 PM IST

ದುಬೈ : ಎರಡನೇ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಮತ್ತು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ನಂತರ, ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದ ಅಗ್ರ -10 ರಲ್ಲಿ ಸ್ಥಾನ ಪಡೆದಿದ್ದಾರೆ. ರೋಹಿತ್ ಆರು ಸ್ಥಾನ ನೆಗೆದಿದ್ದು, ಟೇಬಲ್‌ನಲ್ಲಿ 8ನೇ ಸ್ಥಾನಕ್ಕೇರಿದ್ದಾರೆ.

ಅಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ್ದು, ಇಂಗ್ಲೆಂಡ್‌ನ ಜೋ ರೂಟ್ ಮತ್ತು ಜ್ಯಾಕ್ ಲೀಚ್ ಕೂಡ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಮಿಂಚಿದ ಬಳಿಕ ಮೇಲಕ್ಕೇರಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್‌ಗಳೊಂದಿಗೆ ರೋಹಿತ್ ಅಗ್ರ ಸ್ಕೋರ್ ಮಾಡಿದ್ದರು ಮತ್ತು ಎರಡನೆಯದರಲ್ಲಿ 25 ರನ್‌ಗಳಲ್ಲಿ ಅಜೇಯರಾಗಿ ಉಳಿದುಕೊಂಡರು. ಅವರ ರೇಟಿಂಗ್ ಪಾಯಿಂಟ್‌ಗಳ ಒಟ್ಟು ಮೊತ್ತವು 742 ಆಗಿದ್ದು, 2019ರ ಅಕ್ಟೋಬರ್‌ನಲ್ಲಿ 10ನೇ ಸ್ಥಾನದಲ್ಲಿದ್ದಾಗ ಗಳಿಸಿದ್ದ 722ರ ಅತ್ಯುತ್ತಮ ಮೊತ್ತಕ್ಕಿಂತ 20 ಹೆಚ್ಚಾಗಿದೆ.

ಓದಿ : ಪಡಿಕಲ್, ಸಮರ್ಥ್ ಶತಕದಾಟ: ರೈಲ್ವೇಸ್ ವಿರುದ್ದ ಕರ್ನಾಟಕಕ್ಕೆ 10 ವಿಕೆಟ್​ಗಳ ಭರ್ಜರಿ ಜಯ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಭಾರತವು ನಿರ್ಣಾಯಕ ಗೆಲುವು ಸಾಧಿಸಲು ನೆರವಾದ, ಟೀಂ ಇಂಡಿಯಾ ಆಟಗಾರ ಅಕ್ಸರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಅಶ್ವಿನ್ ನಾಲ್ಕು ಸ್ಥಾನಗಳನ್ನು ಗಳಿಸಿದ್ದು, ಸದ್ಯ ಟೆಸ್ಟ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಎಡಗೈ ಸ್ಪಿನ್ನರ್ ಪಟೇಲ್ ಅವರ 11 ವಿಕೆಟ್​ಗಳ ಪಂದ್ಯವು 38ನೇ ಸ್ಥಾನವನ್ನು ತಲುಪಲು ಮತ್ತು 30 ಸ್ಲಾಟ್ ಗಳಿಸಲು ಸಹಾಯ ಮಾಡಿದೆ ಮತ್ತು ಆಫ್-ಸ್ಪಿನ್ನರ್ ಅಶ್ವಿನ್ ಅವರ ಏಳು ವಿಕೆಟ್​ಗಳು ನಾಲ್ಕು ಸ್ಥಾನಗಳನ್ನು ಹೆಚ್ಚಿಸಿ ಮೂರಕ್ಕೇರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.