ಲಂಡನ್: ಕೋವಿಡ್ 19 ಸಾಂಕ್ರಾಮಿಕ ವೈರಸ್ ಭೀತಿಯಿಂದ ಚೆಂಡಿಗೆ ಲಾಲಾರಸ ಹಚ್ಚುವುದನ್ನು ನಿಷೇಧ ಮಾಡಬೇಕು ಎಂದು ಅನಿಲ್ ಕುಂಬ್ಳೆ ನೇತೃತ್ವದ ಸಲಹಾ ಸಮಿತಿ ನೀಡಿದ್ದ ಶಿಫಾರಸಿಗೆ ಐಸಿಸಿ ಒಪ್ಪಿಗೆ ಸೂಚಿಸಿದೆ.
ಚೆಂಡು ಹೊಳೆಯುವುದಕ್ಕಾಗಿ ಲಾಲಾರಸ ಬಳಕೆ ನಿಷೇಧಿಸಿ ಮಂಗಳವಾರ ಆದೇಶ ಹೊರಡಿಸಿದೆ. ಇದರ ಜೊತೆಗೆ ಕಾರ್ಯ ನಿರ್ವಾಹಕ ಸಮಿತಿ ಅನುಮೋದಿಸಿದ ಹೊಸ 5 ನಿಯಮಗಳಿಗೂ ಐಸಿಸಿ ಒಪ್ಪಿಗೆ ಸೂಚಿಸಿದೆ.
ಕೋವಿಡ್ -19 ವೈರಸ್‌ನಿಂದ ಉಂಟಾಗುವ ಅಪಾಯಗಳನ್ನು ತಗ್ಗಿಸುವುದು ಮತ್ತು ಕ್ರಿಕೆಟ್ ಪುನಾರಂಭಿಸಿದಾಗ ಆಟಗಾರರ ಮತ್ತು ಮ್ಯಾಚ್ ಅಧಿಕಾರಿಗಳ ಸುರಕ್ಷತೆಯನ್ನ ಕಾಪಾಡುವ ಉದ್ದೇಶದಿಂದ ಕಾರ್ಯನಿರ್ವಾಹಕ ಸಮಿತಿ ಹಾಗೂ ಸಲಹಾ ಸಮಿತಿ ಮಾಡಿದ ಶಿಫಾರಸುಗಳನ್ನ ಅಂಗೀಕರಿಸುತ್ತಿದೆ ಎಂದು ಐಸಿಸಿ ತನ್ನ ಪ್ರಕಟಣೆ ಹೊರಡಿಸಿದೆ.
ಐಸಿಸಿ ಬಿಡುಗಡೆ ಮಾಡಿರುವ ಹೊಸ ನಿಯಮಗಳು
- ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚುವರಿ ಡಿಆರ್ಎಸ್ಗೆ ಅನುಮತಿ ಮತ್ತು ಟೆಸ್ಟ್ ಸರಣಿ ವೇಳೆ ತವರಿನ ಅಂಪೈರ್ಗಳಿಗೆ ಹೆಚ್ಚು ಅವಕಾಶ
- ಟೆಸ್ಟ್ ಪಂದ್ಯದ ವೇಳೆ ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದರೆ ಬದಲಿ ಆಟಗಾರರಿಗೆ ಅವಕಾಶ. ಈ ಪಂದ್ಯದ ರೆಫ್ರಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
- ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಲು ಜರ್ಸಿಯಲ್ಲಿ 32 ಇಂಚಿನ ಲಾಂಔನ ಹಾಕಲು ಅನುಮತಿ ನೀಡಲಾಗಿದೆ.
- ಐಸಿಸಿ ಬಿಡುಗಡೆ ಮಾಡಿರುವ ಈ ಎಲ್ಲ ನಿಯಮಗಳು ಟೆಸ್ಟ್ ಕ್ರಿಕೆಟ್ ಮಾತ್ರ ಸೀಮಿತವಾಗಿವೆ.