ಹೈದರಾಬಾದ್: ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿರದ ಇಬ್ಬರು ಬೌಲರ್ಗಳನ್ನ ಗುರುತಿಸಿರುವ ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗಿ ಇಯಾನ್ ಬಿಷಪ್, ಅವರಿಬ್ಬರು ಮುಂದೊಂದು ದಿನ ಟೀಂ ಇಂಡಿಯಾದ ಬಲಿಷ್ಠ ವೇಗಿಗಳಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಬಿಷಪ್, ಉತ್ತರಪ್ರದೇಶ ಮೂಲದ 21ವರ್ಷ ವಯಸ್ಸಿನ ಶಿವಮ್ ಮಾವಿ ಮತ್ತು ರಾಜಸ್ಥಾನ ಮೂಲದ 18 ವರ್ಷ ವಯಸ್ಸಿನ ಕಮಲೇಶ್ ನಾಗರಕೋಟಿ ಟೀಂ ಇಂಡಿಯಾದ ಸ್ಟಾರ್ಗಳು ಎಂದಿದ್ದಾರೆ.
ಈ ಇಬ್ಬರು ಆಟಗಾರರು ಇನ್ನೂ ಉತ್ತಮ ಪ್ರದರ್ಶನ ನೀಡುತ್ತಾ ಹೀಗೆ ಮುಂದುವರಿಯಬೇಕು. ಅದರಲ್ಲೂ ನಾಗರಕೋಟಿ ಉತ್ತಮ ಪ್ರದರ್ಶನ ನೀಡಬೇಕು ಎಂದಿದ್ದಾರೆ. ನಾಗರಕೋಟಿ ಕಳೆದ ಕೆಳ ತಿಂಗಳಿನಿಂದ ಗಾಯದ ಸಮಮಸ್ಯೆಯಿಂದ ಬಳಲುತಿದ್ದಾರೆ. ಇತ್ತ ಕಮಲೇಶ್ ಮಾವಿ ದೇಶಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಶೇಷ ಎಂದರೆ ಈ ಇಬ್ಬರು ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ.