ETV Bharat / sports

ಪಾಕ್‌ನ ಈ ಸ್ಟಾರ್​ ಆಟಗಾರನಿಗೆ ಕೊಹ್ಲಿ-ವಿಲಿಯಮ್ಸನ್‌ ನಾಯಕತ್ವ ಪ್ರೇರಣೆ.. - ಪಾಕಿಸ್ತಾನ ಕ್ರಿಕೆಟ್​ ಮಂಡಳಿ

ಮೂರು ಮಾದರಿಯ ಕ್ರಿಕೆಟ್​ನಲ್ಲಿ ಪಾಕಿಸ್ತಾನದ ನಂಬರ್​ ಒನ್​ ಬ್ಯಾಟ್ಸ್​ಮನ್​ ಆಗಿರುವ ಬಾಬರ್​ ಅಜಮ್​ ಪ್ರಥಮ ಬಾರಿಗೆ ನಾಯಕನಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ವೇಳೆ ತಮ್ಮ ವೈಫಲ್ಯತೆಗಳನ್ನು ಸರಿಪಡಿಸಿಕೊಂಡು ತಂಡವನ್ನು ಮುನ್ನಡೆಸುವ ಜೊತೆಗೆ ಉತ್ತಮ ಬ್ಯಾಟಿಂಗ್​ ಲಯವನ್ನು ಉಳಿಸಿಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ.

Babar Azam
author img

By

Published : Oct 27, 2019, 6:58 PM IST

ಲಾಹೋರ್​: ಪಾಕಿಸ್ತಾನ ತವರಿನಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಕ್ಲೀನ್​ಸ್ವೀಪ್​ಗೆ ಗುರಿಯಾಗಿದ್ದರಿಂದ ಪಿಸಿಬಿ ಸರ್ಫರಾಜ್​ ಅಹಮ್ಮದ್​​ರನ್ನು ನಾಯಕತ್ವದಿಂದ ಕಿತ್ತೆಸೆದು ಯುವ ಬ್ಯಾಟ್ಸ್​ಮನ್​ ಬಾಬರ್ ಅಜಮ್​ಗೆ ಟಿ20 ನಾಯಕತ್ವ ನೀಡಿದೆ.

ಮೂರು ಮಾದರಿಯ ಕ್ರಿಕೆಟ್​ನಲ್ಲಿ ಪಾಕಿಸ್ತಾನದ ನಂಬರ್​ ಒನ್​ ಬ್ಯಾಟ್ಸ್​ಮನ್​ ಆಗಿರುವ ಬಾಬರ್​ ಅಜಮ್​ ಪ್ರಥಮ ಬಾರಿಗೆ ನಾಯಕನಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ವೇಳೆ ತಮ್ಮ ವೈಫಲ್ಯತೆಗಳನ್ನು ಸರಿಪಡಿಸಿಕೊಂಡು ತಂಡವನ್ನು ಮುನ್ನಡೆಸುವ ಜೊತೆಗೆ ಉತ್ತಮ ಬ್ಯಾಟಿಂಗ್​ ಲಯವನ್ನು ಉಳಿಸಿಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ.

ಜನರು ಕೇವಲ 3 ಪಂದ್ಯಗಳಲ್ಲಿ ವಿಫಲನಾಗಿದ್ದಕ್ಕೆ ಟೀಕಿಸುತ್ತಿದ್ದಾರೆ. ಆದರೆ, ಆಟದಲ್ಲಿ ಯಾವಾಗಲೂ ಒಂದೇ ಸಮವಿರುವುದಿಲ್ಲ. ಅಪ್​ ಅಂಡ್​ ಡೌನ್​ ಆಗಲೇಬೇಕು. ಅದು ಶ್ರೀಲಂಕಾ ಸರಣಿಯಲ್ಲಿ ನಮ್ಮ ಪ್ರದರ್ಶನ ತುಂಬಾ ಕಳೆಪೆಯಾಗಿತ್ತು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ನಾಯಕನಾದರೆ ನಾನು ಒತ್ತಡಕ್ಕೊಳಗಾಗುತ್ತೇನೆ ಎಂದು ನನಗನ್ನಿಸುತ್ತಿಲ್ಲ. ನಾನು ನನ್ನ ನೈಜ ಆಟವನ್ನು ಮುಂದುವರಿಸುತ್ತೇನೆ, ಇದರಲ್ಲಿ ನನಗೆ ನಂಬಿಕೆ ಇದೆ ಎಂದಿದ್ದಾರೆ.

ಇನ್ನು, ಬ್ಯಾಟ್ಸ್​ಮನ್​ ಹಾಗೂ ನಾಯಕನಾಗಿ ಕೊಹ್ಲಿ ಹಾಗೂ ಕೇನ್​ ವಿಲಿಯಮ್ಸನ್​ ತಮ್ಮ ತಂಡವನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ನಾನು ಕೂಡ ಅವರನ್ನು ಹಿಂಬಾಲಿಸಲು ಪ್ರಯತ್ನಿಸುತ್ತೇನೆ ಎಂದು ಕ್ರಿಕ್​ಬಜ್​ಗೆ ನೀಡಿದ ಸಂದರ್ಶನದಲ್ಲಿ ಬಾಬರ್​ ಹೇಳಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.