ETV Bharat / sports

ಚೊಚ್ಚಲ ವಿಶ್ವಕಪ್​ ಕನಸಿನಲ್ಲಿದ್ದ ಈ ಆಟಗಾರನಿಗೆ ಧೋನಿ ಔಟಾದಾಗ ಕಣ್ಣಲ್ಲಿ ನೀರು ಬಂದಿತ್ತಂತೆ! - ಧೋನಿ ಸುದ್ದಿ

ಭಾರತ ತಂಡ ವಿಶ್ವಕಪ್​ ಲೀಗ್​ನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್​ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್​ನಲ್ಲಿ ಕೇವಲ 240 ರನ್​ ಚೇಸ್​ ಮಾಡಲಾಗದೆ 18 ರನ್​ಗಳ ಸೋಲನುಭವಿಸಿತ್ತು. ಆಗ ವಿಶ್ವಕಪ್​ ಕನಸು ನುಚ್ಚು ನೂರಾಗಿತ್ತು. ಆ ಪಂದ್ಯದಲ್ಲಿ ಧೋನಿ ಔಟ್​ ಆದಾಗ ಚಹಲ್​ಗೆ ಕಣ್ಣೀರು ಬಂದಿದ್ದತ್ತಂತೆ.

Chahal opens up on World Cup exit
author img

By

Published : Sep 29, 2019, 5:40 PM IST

ಲಂಡನ್​: ಭಾರತ ತಂಡದ ವಿಶ್ವಕಪ್​ ಪಯಣ ಅತ್ಯುತ್ತಮವಾಗಿ ಸಾಗಿತ್ತಾದರೂ ಸೆಮಿಫೈನಲ್​ನಲ್ಲಿ ಮಳೆ ಮಾಡಿದ ಅವಾಂತರಕ್ಕೆ ಶತಕೋಟಿ ಭಾರತೀಯರ ಆಸೆ ನುಚ್ಚುನೂರಾಗಿತ್ತು. ಇನ್ನು ಕೈಯಲ್ಲಿದ್ದ ಗೆಲುವನ್ನು ಬಿಟ್ಟುಕೊಟ್ಟ ಆಟಗಾರರ ಕಥೆ ಏನಾಗಿರಬೇಡ...

ಹೌದು.. ಭಾರತ ತಂಡ ವಿಶ್ವಕಪ್​ ಲೀಗ್​ನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್​ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್​ನಲ್ಲಿ ಕೇವಲ 240 ರನ್​ ಚೇಸ್​ ಮಾಡಲಾಗದೆ 18 ರನ್​ಗಳಿಂದ ಸೋಲನುಭವಿಸಿತ್ತು. ಈ ಸಂದರ್ಭದಲ್ಲಿ ಧೋನಿ ರನ್​ಔಟ್​ ಆಗಿದ್ದು, ಕೋಟ್ಯಂತರ ಭಾರತೀಯರಿಗೆ ಮರ್ಮಾಘಾತ ತಂದಿತ್ತು. ಹಾಗೆಯೇ ಧೋನಿ ಔಟ್​ ಅಗುತ್ತಿದ್ದಂತೆ ಬ್ಯಾಟಿಂಗ್​ ತೆರಳಬೇಕಿದ್ದ ಚಹಲ್​ ಕಣ್ಣೀರು ಬರುತ್ತಿದ್ದರೂ ಬ್ಯಾಟಿಂಗ್​ ನಡೆಸಲು ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡು ಮೈದಾನಕ್ಕೆ ಆಗಮಿಸಿದ್ದ ವಿಚಾರವನ್ನು ಅವರೇ ಬಹಿರಂಗ ಪಡಿಸಿದ್ದಾರೆ.

"ಅದು ನನಗೆ ಮೊದಲ ವಿಶ್ವಕಪ್​ ಆಗಿತ್ತು. ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರಿಂದ ಗೆಲುವಿನ ಫೈನಲ್​ ಪ್ರವೇಶಿಸುವ ವಿಶ್ವಾಸವಿತ್ತು. ಆದರೆ ಧೋನಿ ರನ್​ಔಟ್​ ಆಗುತ್ತಿದ್ದಂತೆ ನಾನು ಬ್ಯಾಟಿಂಗ್​ಗೆ ತೆರಳಬೇಕಿತ್ತು. ಆ ಸಮಯದಲ್ಲಿ ಕಣ್ಣೀರು ಬರುತ್ತಿದ್ದರೂ ತಡೆಯಲು ಪ್ರಯತ್ನಿಸಿದ್ದೆ. ಅಲ್ಲದೆ, ಆ ಘಟನೆ ತುಂಬಾ ಖಿನ್ನತೆಯನ್ನುಂಟು ಮಾಡಿತ್ತು" ಎಂದು ಚಹಲ್​ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಇನ್ನು ತಮ್ಮನ್ನು ದಕ್ಷಿಣ ಆಫ್ರಿಕ ವಿರುದ್ಧದ ಟಿ20 ಸರಣಿಯಿಂದ ಕೈಬಿಟ್ಟಿರುವುದರ ಕುರಿತು ಮಾತನಾಡಿರುವ ಚಹಲ್​, ಟೀಂ ಮ್ಯಾನೇಜ್​ಮೆಂಟ್​ ತಂಡವನ್ನು ಬಲಿಷ್ಠಗೊಳಿಸುವುದಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದೆ. ನಾವು ಉತ್ತಮ ಪ್ರದರ್ಶನ ನೀಡಿದರೆ ತಂಡದಲ್ಲಿ ಅವಕಾಶ ಖಂಡಿತ ಸಿಗುತ್ತದೆ. ನಾನು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದೇನೆ. ನನಗೆ ವಿಶ್ವಕಪ್​ ಗೆದ್ದ ತಂಡದಲ್ಲಿ ಇರಬೇಕೆಂಬುದು ದೊಡ್ಡ ಕನಸಾಗಿದೆ ಎಂದು ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.