ETV Bharat / sports

2016ರಲ್ಲಿ ಆ ತಂಡ ನನ್ನನ್ನು ಖರೀದಿಸದಿದ್ದಾಗ ತುಂಬಾ ನಿರಾಶೆಯಾಗಿತ್ತು: ಪೂಜಾರ

33 ವರ್ಷದ ಪೂಜಾರ 30 ಐಪಿಎಲ್ ಪಂದ್ಯಗಳನ್ನಾಡಿದ್ದು, 20 ಸರಾಸರಿ, 99.7ರ ಸ್ಟ್ರೈಕ್​ರೇಟ್​ನಲ್ಲಿ ಕೇವಲ 390 ರನ್​ಗಳಿಸಿದ್ದಾರೆ. 2010ರಲ್ಲಿ ಕೆಕೆಆರ್​, ನಂತರ 3 ವರ್ಷಗಳ ಕಾಲ 2011ರಿಂದ 2013ರವರೆಗೆ ಆರ್​ಸಿಬಿ ಮತ್ತು 2014ರಲ್ಲಿ ಕೊನೆಯ ಬಾರಿ ಪಂಜಾಬ್ ತಂಡದಲ್ಲಿ ಆಡಿದ್ದರು. ನಂತರ ಸತತ 6 ವರ್ಷಗಳ ಹರಾಜಿನಲ್ಲಿ ಯಾವ ಫ್ರಾಂಚೈಸಿಗಳು ಪೂಜಾರ ಅವರನ್ನು ಖರೀದಿಸಿರಲಿಲ್ಲ.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ
author img

By

Published : Mar 30, 2021, 10:36 PM IST

ಮುಂಬೈ: ಭಾರತ ಟೆಸ್ಟ್​ ತಂಡದ ಖಾಯಂ ಸದಸ್ಯನಾಗಿರುವ ಚೇತೇಶ್ವರ್ ಪೂಜಾರ 2016ರಲ್ಲಿ ತಮ್ಮದೇ ರಾಜ್ಯದ ಗುಜರಾತ್​ ಲಯನ್ಸ್​ ತಮ್ಮನ್ನು ಖರೀದಿಸದಿದ್ದಾಗ ತುಂಬಾ ಬೇಸರವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್​ ತಂಡದ ಪರ ಕೊನೆಯ ಬಾರಿ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದ ಪೂಜಾರ ಇದೀಗ 7 ವರ್ಷಗಳ ಕಾಯುವಿಕೆಯ ನಂತರ ಎಂಎಸ್​ ಧೋನಿ ನಾಯಕತ್ವದ ಸಿಎಸ್​ಕೆ ತಂಡ ಅವರನ್ನು 50 ಲಕ್ಷ ರೂ ಮೂಲಬೆಲೆಗೆ ಖರೀದಿಸಿದೆ. ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿರುವ ಅವರು ಮಾಧ್ಯಮದೊಂದಿಗೆ ಮಾತನಾಡುವ ವೇಳೆ 2016ರಲ್ಲಿ ಐಪಿಎಲ್​ಗೆ ಸೇರ್ಪಡೆಗೊಂಡಿದ್ದ ಗುಜರಾತ್ ಲಯನ್ಸ್ ಫ್ರಾಂಚೈಸಿ ನನ್ನನ್ನು ಆಯ್ಕೆ ಮಾಡದಿದ್ದಕ್ಕೆ ತುಂಬಾ ಬೇಸರಗೊಂಡಿದ್ದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: IPL 2021: ಡೆಲ್ಲಿ ಕ್ಯಾಪಿಟಲ್ಸ್​ ನಾಯಕನಾಗಿ ಬಡ್ತಿ ಪಡೆದ ರಿಷಭ್‌ ಪಂತ್

33 ವರ್ಷದ ಪೂಜಾರ 30 ಐಪಿಎಲ್ ಪಂದ್ಯಗಳನ್ನಾಡಿದ್ದು, 20 ಸರಾಸರಿ, 99.7ರ ಸ್ಟ್ರೈಕ್​ರೇಟ್​ನಲ್ಲಿ ಕೇವಲ 390ರನ್​ಗಳಿಸಿದ್ದಾರೆ. 2010ರಲ್ಲಿ ಕೆಕೆಆರ್​, ನಂತರ 3 ವರ್ಷಗಳ ಕಾಲ 2011ರಿಂದ 2013ರವರೆಗೆ ಆರ್​ಸಿಬಿ ಮತ್ತು 2014ರಲ್ಲಿ ಕೊನೆಯ ಬಾರಿ ಪಂಜಾಬ್ ತಂಡದಲ್ಲಿ ಆಡಿದ್ದರು. ನಂತರ ಸತತ 6 ವರ್ಷಗಳ ಹರಾಜಿನಲ್ಲಿ ಯಾವ ಫ್ರಾಂಚೈಸಿಗಳು ಪೂಜಾರ ಅವರನ್ನು ಖರೀದಿಸಿರಲಿಲ್ಲ.

ಕ್ರೀಡಾ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಪೂಜಾರ 2016ರಲ್ಲಿ ಗುಜರಾತ್​ ಲಯನ್ಸ್​ ತಮ್ಮ ಆಯ್ಕೆ ಮಾಡಿಕೊಳ್ಳದ್ದಕ್ಕೆ ಬೇಸರವಿದೆ ಎಂದಿದ್ದಾರೆ.

ನನ್ನನ್ನು ಆಯ್ಕೆ ಮಾಡದಿರುವುದಕ್ಕೆ ತುಂಬಾ ನಿರಾಶೆಯಾಗಿತ್ತು. ಆದರೆ ಅದು ನನ್ನ ನಿಯಂತ್ರಣದಲ್ಲಿರಲಿಲ್ಲ. ಆದರೆ ಖಂಡಿತ ಆ ತಂಡದ(ಗುಜರಾತ್​ ಲಯನ್ಸ್) ಭಾಗವಾಗಿದ್ದರೆ ಚೆನ್ನಾಗಿರುತ್ತಿತ್ತು. ಅದೆಲ್ಲಾ ಈಗ ಮುಗಿದ ಕಥೆ. ನಾನು ಅದರಿಂದ ಮುಂದುವರೆದಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ಬೆಸ್ಟ್​ ಮ್ಯಾನ್​ ಫಾರ್​ ದಿ ಜಾಬ್​': ಕ್ಯಾಪ್ಟನ್​ ಆಗಿ ಆಯ್ಕೆಯಾದ ರಿಷಭ್​ ಬಗ್ಗೆ ಶ್ರೇಯಸ್ ಮಾತು..

ಇನ್ನು ಮತ್ತೆ ಧೋನಿ ನಾಯಕತ್ವದಲ್ಲಿ ಆಡುವುದಕ್ಕೆ ಖುಷಿಯಾಗುತ್ತಿದೆ. ಟಿ20 ಕ್ರಿಕೆಟ್​ನಲ್ಲಿ ಅವರಿಂದ ಕಲಿಯುವಂಥದ್ದು ಸಾಕಷ್ಟಿದೆ. ದಿಗ್ಗಜರಿರುವ ಈ ತಂಡದಲ್ಲಿ ಆಡಲು ಸಂತಸವಾಗುತ್ತಿದೆ. ಫ್ರಾಂಚೈಸಿ ನನ್ನ ಮೇಲೆ ನಂಬಿಕೆ ತೋರಿದ್ದಕ್ಕೆ ನಾನು ಋಣಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆ ತಂಡ ನನ್ನನ್ನು ಖರೀದಿಸದಿದ್ದಾಗೆ ತುಂಬಾ ಬೇಸರವಾಗಿತ್ತು: ಪೂಜಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.