ಹೈದರಾಬಾದ್: ಕೆಲ ತಿಂಗಳ ಹಿಂದೆ ಖ್ಯಾತ ಟಿವಿ ಶೋ ಒಂದರಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಕ್ರಿಕೆಟ್ ವಲಯದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದ ಟೀಮ್ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ ಈ ವಿಚಾರದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ.
ಟಿವಿ ಶೋನಲ್ಲಿ ಮಾತನಾಡುವ ವೇಳೆ ಆಡಿದ್ದ ಕೆಲ ಮಾತುಗಳು ಸಖತ್ ವೈರಲ್ ಆಗಿತ್ತು. ಈ ವಿಚಾರವನ್ನು ಬಿಸಿಸಿಐ ಸಹ ಗಂಭೀರವಾಗಿ ಪರಿಗಣಿಸಿ ಕೆಲ ಪಂದ್ಯಗಳಿಂದ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯರನ್ನು ಬ್ಯಾನ್ ಮಾಡಿತ್ತು. ಸದ್ಯ ಆ ಘಟನೆ ಹಾಗೂ ನಂತರ ರಾಹುಲ್ ಅನುಭವಿಸಿದ ಮಾನಸಿಕ ತೊಳಲಾಟವನ್ನು ಹೇಳಿಕೊಂಡಿದ್ದಾರೆ.
" ಆ ದಿನಗಳು ನಿಜಕ್ಕೂ ಕಠಿಣವಾಗಿತ್ತು. ನನ್ನನ್ನು ದ್ವೇಷಿಸುವುದು ನನಗೆ ಹಿಡಿಸದ ವಿಚಾರ. ಮೊದಲ ಒಂದು ವಾರ ಹತ್ತು ದಿನ ನಿಜಕ್ಕೂ ಏನು ಮಾಡುವುದೆಂದು ತೋಚದಾಗಿತ್ತು. ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂಜರಿದಿದ್ದೆ."
" ನನ್ನ ನಡತೆಯ ಬಗ್ಗೆ ನನಗೇ ಅನುಮಾನ ಮೂಡಿತ್ತು. ನಿಮ್ಮ ಬಗ್ಗೆ ಎಲ್ಲೆಡೆ ಋಣಾತ್ಮಕವಾಗಿ ಬರೆದಿದ್ದಾಗ ನಡತೆ ಚರ್ಚೆಗೆ ಬರುತ್ತದೆ. ಇದು ನನ್ನನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು."
" ಮನೆಯಿಂದ ಹೊರಗಡೆ ಕಾಲಿಡಲು ಭಯಪಡುತ್ತಿದ್ದೆ. ಯಾರಾದರು ಪ್ರಶ್ನೆ ಮಾಡಿದರೆ ಏನು ಉತ್ತರಿಸುವುದು ಎನ್ನುವುದು ತಿಳಿಯದಾಗಿತ್ತು. ತರಬೇತಿ ತೆರಳುವುದು ಅಲ್ಲಿಂದ ಸೀದಾ ಮನೆಗೆ ಬರುವದನ್ನೇ ರೂಢಿಸಿಕೊಂಡೆ. ಯಾರನ್ನೂ ಎದುರಿಸಲೂ ಸಾಧ್ಯವಿರಲಿಲ್ಲ ಎಂದು ಕೆ.ಎಲ್.ರಾಹುಲ್ ಮನಬಿಚ್ಚಿ ಮಾತನಾಡಿದ್ದಾರೆ.