ನವದೆಹಲಿ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾರತ ಕ್ರಿಕೆಟ್ನ ದಿಕ್ಕನ್ನೇ ಬದಲಿಸಿದವರು. ಯುವ ಕ್ರಿಕೆಟಿಗರನ್ನು ತಂಡಕ್ಕೆ ಸೇರಿಸಿ ಬಲಿಷ್ಠ ತಂಡವನ್ನು ಕಟ್ಟಿ ದೇಶದಲ್ಲೆಷ್ಟೇ ಅಲ್ಲ, ವಿದೇಶಗಳಲ್ಲೂ ಗೆಲ್ಲುವುದನ್ನು ತೋರಿಸಿಕೊಟ್ಟಿದ್ದರು.
ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ 2002ರಲ್ಲಿ ನಾಟ್ವೆಸ್ಟ್ ಸರಣಿ ಹಾಗೂ 2003ರ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಫೈನಲ್ಗೆ ಕೊಂಡೊಯ್ದ ಕೀರ್ತಿ ದಾದಾ ಖ್ಯಾತಿಯ ಗಂಗೂಲಿಗೆ ಸಲ್ಲುತ್ತದೆ. ಗಂಗೂಲಿ ವರ್ಚಸ್ಸು ಹೇಗಿತ್ತೆಂದರೆ ಎದುರಾಳಿ ತಂಡದ ಆಟಗಾರರು ಕೂಡ ಪ್ರೀತಿಸುತ್ತಿದ್ದರು. ನಾಟ್ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ನಾಯಕರಾಗಿದ್ದ ನಾಸಿರ್ ಹುಸೇನ್ ನಾನು ದಾದಾ ಅವರ ಬಹುದೊಡ್ಡ ಅಭಿಮಾನಿ, ಅವರು ಶರ್ಟ್ ಬಿಚ್ಚಿ ಸಂಭ್ರಮಿಸಿದ್ದ ಕ್ಷಣ ಟ್ರೆಡ್ ಮಾರ್ಕ್ ಎಂದು ಹೊಗಳಿದ್ದರು.
ಆದರೆ, ಅದೇ ನಾಸಿರ್ ಹುಸೇನ್ ಒಂದು ಕಾರಣಕ್ಕೆ ಗಂಗೂಲಿಯನ್ನು ದ್ವೇಷಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಹೌದು, ಎದುರಾಳಿ ನಾಯಕರು ಗಂಗೂಲಿಯನ್ನು ಕಂಡರೆ ದ್ವೇಷಿಸುತ್ತಿದ್ದರು. ಏಕೆಂದರೆ ಪ್ರತಿ ಪಂದ್ಯದಲ್ಲೂ ದಾದಾ ಟಾಸ್ಗೆ ತಡವಾಗಿ ಬಂದು, ಎದುರಾಳಿ ನಾಯಕರನ್ನು ಕಾಯಿಸುತ್ತಿದ್ದರಂತೆ. ಈ ವಿಚಾರಕ್ಕೆ ನಾನು ಅವರನ್ನು ದ್ವೇಷಿಸುತ್ತೇನೆ ಎಂದು ನಾಸಿರ್ ಹುಸೇನ್ ಐಸಿಸಿ ಲೈವ್ ಸಂವಾದದಲ್ಲಿ ಹೇಳಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟಿವ್ ವಾ ಕೂಡ ಇದನ್ನೇ ಹೇಳಿದ್ದರು.
ಗಂಗೂಲಿ ನಾಯಕನಾಗಿ ಆಡುತ್ತಿರುವಾಗ ಮಾತ್ರವಲ್ಲ, ಕಳೆದ ಒಂದು ದಶಕದಿಂದ ಇಬ್ಬರು ಒಟ್ಟಿಗೆ ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದೇವೆ. ಆ ಸಮಯದಲ್ಲೂ ಅವರು ತಡವಾಗಿಯೇ ಬರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.