ಚೆನ್ನೈ: ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ 5 ವಿಕೆಟ್ ಪಡೆದು ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹರ್ಷಲ್ ಪಟೇಲ್ ತಾವು ಡೆಲ್ಲಿ ಕ್ಯಾಪಿಟಲ್ಸ್ನಿಂದ ವರ್ಗಾವಣೆಗೊಂಡಾಗಲೇ ತಂಡದಲ್ಲಿ ನನ್ನ ಪಾತ್ರವೇನು ಎಂದು ತಿಳಿಸಲಾಗಿದೆ ಎಂದು ಪಂದ್ಯ ಮುಗಿದ ನಂತರ ನಡೆದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆರಂಭಿಕ ಓವರ್‌ಗಳಲ್ಲಿ ರನ್ ಬಿಟ್ಟು ಕೊಟ್ಟ ಹರ್ಷಲ್, ಡೆತ್ ಓವರ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದರು. ಅದರಲ್ಲೂ ಕೊನೆಯ ಓವರ್ನಲ್ಲಿ ಕೇವಲ 1 ರನ್ ನೀಡಿ 4 ವಿಕೆಟ್ ಪಡೆದರು. ಒಟ್ಟಾರೆ 4 ಓವರ್‌ಗಳಲ್ಲಿ 27 ರನ್ ನೀಡಿ 5 ವಿಕೆಟ್ ಪಡೆದರು. ಇದು ಐಪಿಎಲ್ ಇತಿಹಾಸದಲ್ಲಿ ಬೌಲರ್ ಒಬ್ಬ 5 ವಿಕೆಟ್ ಪಡೆದ ಮೊದಲ ನಿದರ್ಶನವಾಯಿತು. ಜೊತೆಗೆ ಟಿ-20 ಕ್ರಿಕೆಟ್ನಲ್ಲಿ ಹರ್ಷಲ್ರ ಮೊದಲ 5 ವಿಕೆಟ್ ಗೊಂಚಲಾಗಿದೆ.
"ನಾನು ಯಾವಾಗ ಡೆಲ್ಲಿಯಿಂದ ವರ್ಗಾವಣೆಗೊಂಡು ಬಂದೆನೋ, ಅಂದೇ ಫ್ರಾಂಚೈಸಿಗಾಗಿ ನಾನು ಯಾವ ಜವಾಬ್ದಾರಿ(ಡೆತ್ ಓವರ್) ನಿರ್ವಹಿಸಬೇಕೆಂದು ತಿಳಿಸಿದೆ" ಎಂದು ಹರ್ಷಲ್ ಪಟೇಲ್ ತಿಳಿಸಿದ್ದಾರೆ.
"ಕೊನೆಯ ಎರಡು ಓವರ್‌ಗಳಲ್ಲಿ ನಾನು ಬೌಲಿಂಗ್ ಮಾಡಲಿದ್ದೇನೆ ಎಂಬ ಸ್ಪಷ್ಟ ಸೂಚನೆ ನನಗೆ ತಿಳಿದಿತ್ತು. ( 18 ಮತ್ತು 20 ). ಹಾಗಾಗಿ ನಿನ್ನೆಯ ಪಂದ್ಯದಲ್ಲಿ ನನಗೆ ಸಾಕಷ್ಟು ಸ್ಪಷ್ಟತೆಯಿದ್ದರಿಂದ ಬ್ಯಾಟ್ಸ್ಮನ್ಗಳ ವಿರುದ್ಧ ಕೆಲವು ಯೋಜನೆಗಳನ್ನು ಸಿದ್ಧಪಡಿಸಲು ನನಗೆ ನೆರವಾಯಿತು" ಎಂದು ಹರ್ಷಲ್ ಹೇಳಿದ್ದಾರೆ.
ಪೇಸ್ನಲ್ಲಿ ಬದಲಾವಣೆ ಮತ್ತು ನಿಧಾನಗತಿಯ ಯಾರ್ಕರ್ಗಳು ತಮ್ಮ ಬಲ. ಕಳೆದ 15-20 ದಿನಗಳಿಂದ ಸ್ಲೋ ಯಾರ್ಕರ್ಗಳ ಅಭ್ಯಾಸ ಮಾಡುತ್ತಿರುವುದಾಗಿ ಹರಿಯಾಣ ಬೌಲರ್ ತಿಳಿಸಿದ್ದಾರೆ.
ನಾನು ಸ್ಲೋ ಯಾರ್ಕರ್ ಯಾವಾಗಲೂ ಮಾಡುತ್ತಿದ್ದೆ. ಆದರೆ ವಿಕೆಟ್ ಪಡೆಯದಿದ್ದ ಕಾರಣ ಜನರಿಗೆ ಅದನ್ನು ಗಮನಿಸುವ ಪ್ರವೃತ್ತಿ ಇರುವುದಿಲ್ಲ. ನಾನು ಕೂಡ ಆಟದಲ್ಲಿ ಸರಿಯಾಗಿ ಅದನ್ನು ಪ್ರಯೋಗಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಮಾರ್ಕೋ ಜಾನ್ಸನ್ ವಿಕೆಟ್ ಪಡೆದಿದ್ದರು.
ಇದನ್ನು ಓದಿ: 'ಡಿವಿಲಿಯರ್ಸ್ ಒಬ್ಬನೇ RCBಯ ಚಾಣಾಕ್ಷ ಆಟಗಾರ'... ಗೆಳೆಯನ ಗುಣಗಾನ ಮಾಡಿದ ಕೊಹ್ಲಿ