ಆ್ಯಂಟಿಗುವಾ: ಭಾರತ ತಂಡದ ಏಕದಿನ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ರಹಾನೆ ವೈಯಕ್ತಿಕ ಕೋಚ್ ಪ್ರವೀಣ್ ಆಮ್ರೆ ತಮ್ಮ ಶಿಷ್ಯ ರಹಾನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ತಂಡದ ಉಪನಾಯಕನಾಗಿರುವ ರಹಾನೆ ಹಾಗೂ ರೋಹಿತ್ ಶರ್ಮಾ ನಡುವೆ 5ನೇ ಕ್ರಮಾಂಕಕ್ಕೆ ತೀವ್ರವಾದ ಪೈಪೋಟಿ ಇತ್ತು. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ರನ್ನು ತಂಡದಿಂದ ಕೈಬಿಟ್ಟು ರಹಾನೆಗೆ ಟೀಮ್ ಇಂಡಿಯಾ ಮಣೆ ಹಾಕಿತ್ತು. ಇದರಿಂದ ಹಲವಾರು ಕ್ರಿಕೆಟಿಗರು ಶಾಸ್ತ್ರಿ ಹಾಗೂ ಕೊಹ್ಲಿಯನ್ನು ಟೀಕಿಸಿದ್ದರು. ಆದರೆ, ರಹಾನೆ ಆಕರ್ಷಕ ಶತಕ ಹಾಗೂ ಅರ್ಧಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ರಹಾನೆ ವೈಯಕ್ತಿಕ ಕೋಚ್ ಪ್ರವೀಣ್ ಆಮ್ರೆ ರೋಹಿತ್ ಪ್ರತಿಭಾವಂತ ಕ್ರಿಕೆಟಿಗ, ಆತನ ಟೆಸ್ಟ್ನಲ್ಲಿ 5 ಶತಕ ಸಿಡಿಸಿದ ಮೇಲೂ ಹೆಚ್ಚಿನ ಅವಕಾಶ ನೀಡದಿರುವುದಕ್ಕೆ ನನಗೆ ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ರೋಹಿತ್ಗೆ ಕ್ಷಮೆಯಾಚಿಸಿದ್ದಾರೆ.
ಆದರೆ, ತಮ್ಮ ಶಿಷ್ಯನಾದ ರಹಾನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಆಮ್ರೆ, ರಹಾನೆ ಕಳೆದು ವರ್ಷದಿಂದ ತುಂಬಾ ಹಿನ್ನಡೆ ಅನುಭವಿಸಿದ್ದರು. ಅವರಿಂದ ಉತ್ತಮ ಇನ್ನಿಂಗ್ಸ್ ಹೊರಬರದಿದ್ದರೂ ಅವರಿಗೆ ತಂಡದಲ್ಲಿ ಅವಕಾಶ ನೀಡಿ ರಹಾನೆಗೆ ಬೆಂಬಲ ನೀಡಿದ್ದರು. ಇದೀಗ ರಹಾನೆ ತಮಗೆ ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಂಡದ ನಂಬಿಕೆ ಉಳಿಸಿಕೊಂಡಿದ್ದಾರೆ.
ರಹಾನೆ ಮೊದಲ ಇನ್ನಿಂಗ್ಸ್ನಲ್ಲಿ 81 ರನ್ಗಳಿಸಿದ್ದರೂ, ಅವರ ಆ ಇನ್ನಿಂಗ್ಸ್ ಮತ್ತೆ ಎರಡನೇ ಇನ್ನಿಂಗ್ಸ್ನಲ್ಲಿ ಶತಕ(102)ಗಳಿಸಲು ಅವರಲ್ಲಿ ವಿಶ್ವಾಸ ತಂದಿತ್ತು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಯಶಸ್ಸು ಅವನು ಎರಡು ವರ್ಷ ಪಟ್ಟ ಕಠಿಣಶ್ರಮದ ಪ್ರತಿಫಲ ಎಂದು ತಿಳಿಸಿದರು.
ರಹಾನೆ ಅವರ ಶತಕ ಬಲದಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯವನ್ನು 318 ರನ್ಗಳಿಂದ ಮಣಿಸಿತ್ತು.