ETV Bharat / sports

2 ಬಾರಿ ಗಂಭೀರ ಪೆಟ್ಟು ತಿಂದರೂ ಮತ್ತೆ ಬ್ಯಾಟ್​ ಹಿಡಿದು ಕ್ರೀಸ್​ಗೆ ಬಂದ ಸ್ಟಿವ್​ ಸ್ಮಿತ್​! - ಆ್ಯಶಸ್​ ಟೆಸ್ಟ್​ ಸರಣಿ

ಶನಿವಾರ ಆ್ಯಶಸ್​ ಟೆಸ್ಟ್​ ಸರಣಿಯ 2ನೇ ಪಂದ್ಯದಲ್ಲಿ ಜೋಫ್ರಾ ಆರ್ಚರ್​ ಬೌಲಿಂಗ್​ನಲ್ಲಿ ಸ್ಮಿತ್​ ಎರಡು ಬಾರಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಎರಡೂ ಬಾರಿಯೂ ಚಿಕಿತ್ಸೆ ಪಡೆದು ಮತ್ತೆ ಆಟ ಮುಂದುವರಿಸುವ ಮೂಲಕ ಕ್ರಿಕೆಟ್​ನ ಮೇಲೆ ಅವರಿಗಿರುವ ಬದ್ಧತೆಯನ್ನು ಕ್ರೀಡಾ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

Smith
author img

By

Published : Aug 18, 2019, 4:56 PM IST

ಲಂಡನ್​:ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟಿವ್​ ಸ್ಮಿತ್​ ಗಾಯಗೊಂಡರೂ ಮತ್ತೆ ಆಟ ಆರಂಭಿಸಿ ತಮಗೆ ಕ್ರಿಕೆಟ್ ಆಟದ ಮೇಲಿರುವ ಬದ್ಧತೆಯನ್ನು ಇಡೀ ಕ್ರಿಕೆಟ್​ ಜಗತ್ತಿಗೆ ತೋರಿಸಿಕೊಟ್ಟು ಶಹಬ್ಬಾಸ್​ಗಿರಿ ಪಡೆದುಕೊಂಡಿದ್ದಾರೆ.

ಶನಿವಾರ ಆ್ಯಶಸ್​ ಟೆಸ್ಟ್​ ಸರಣಿಯ 2ನೇ ಪಂದ್ಯದಲ್ಲಿ ಜೋಫ್ರಾ ಆರ್ಚರ್​ ಬೌಲಿಂಗ್​ನಲ್ಲಿ ಸ್ಮಿತ್​ ಎರಡು ಬಾರಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಎರಡೂ ಬಾರಿಯೂ ಚಿಕಿತ್ಸೆ ಪಡೆದು ಮತ್ತೆ ಆಟ ಮುಂದುವರಿಸುವ ಮೂಲಕ ಕ್ರಿಕೆಟ್​ನ ಮೇಲಿನ ತಮ್ಮ ಬದ್ಧತೆಯನ್ನು ಕ್ರೀಡಾ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಜೋಫ್ರಾ ಆರ್ಚರ್​ ಬೌಲಿಂಗ್​ನಲ್ಲಿ ಮೊಣಕೈಗೆ ಬಾಲ್​ ತಗುಲಿ ಮೊದಲು ಗಾಯಗೊಂಡಿದ್ದ ಸ್ಮಿತ್​ ಚಿಕಿತ್ಸೆ ಪಡೆದು ಮತ್ತೆ ಆಟ ಮುಂದುವರಿಸಿದ್ದರು. ಮತ್ತೊಂದು ಬಾರಿ ಆರ್ಚರ್​ ಬೌಲಿಂಗ್​ನಲ್ಲೇ ಕುತ್ತಿಗೆಗೆ ಪೆಟ್ಟು ಬಿದ್ದು ಗಂಭೀರ ಗಾಯಗೊಂಡಿದ್ದ ಸ್ಮಿತ್​ ಕೇವಲ 9 ಓವರ್​ಗಳ ನಂತರ ಮತ್ತೆ ಕ್ರೀಸ್‌ಗೆ​ ಆಗಮಿಸಿ ಬ್ಯಾಟಿಂಗ್​ ಮುಂದುವರಿಸಿದ್ದರು.

ಈ ಘಟನೆ ಕುರಿತು ಮಾತನಾಡಿರುವ ಕೋಚ್​ ಜಸ್ಟಿನ್​ ಲ್ಯಾಂಗರ್​, ಸ್ಮಿತ್​ಗಾಯದ ಘಟನೆ ನಮಗೆ ಫಿಲಿಪ್​ ಹ್ಯೂಸ್​ ಸಾವನ್ನು ನೆನೆಪಿಸಿತು. ಇಂತಹ ಸನ್ನಿವೇಶಗಳಲ್ಲಿ ತಮಾಷೆಯಾಗಿ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ನಾವು ಹಲವು ಬಾರಿ ಸ್ಮಿತ್​ರನ್ನು ಹೇಗಿದ್ದೀರಾ ಎಂದು ಕೇಳಿದೆ. ಆದರೆ ,ಅವರ ಉತ್ತರ ಒಂದೆ ಆಗಿತ್ತು, ಅದೇನೆಂದರೆ "ನಾನು ಚೆನ್ನಾಗಿದ್ದೇನೆ, ಮತ್ತೆ ಬ್ಯಾಟಿಂಗ್​ ನಡೆಸುತ್ತೇನೆ" ಎಂಬುದು ಅವರ ಪ್ರತಿಕ್ರಿಯೆಯಾಗಿತ್ತು ಎಂದು ಲ್ಯಾಂಗರ್​ ಸ್ಮಿತ್​ ಕುರಿತು ಮಾಧ್ಯಮಕ್ಕೆ ತಿಳಿಸಿದರು.

ಎರಡನೇ ಬಾರಿ ಗಾಯಗೊಂಡಾಗ ಸ್ಮಿತ್​ ಕುತ್ತಿಗೆಗೆ ಬಾಲ್​ ಬಿದ್ದಿದ್ದು ನಮಗೆಲ್ಲ ಆಘಾತ ತಂದಿತ್ತು. ಆದರೆ, ಸ್ಮಿತ್​ ಮಾತ್ರ ತಮ್ಮ ಮೊಣಕೈ ಗಾಯದ ಬಗ್ಗೆ ಚಿಂತೆ ಮಾಡುತ್ತಿದ್ದರು. ಅವರನ್ನು ಬ್ಯಾಟಿಂಗ್‌ಗೆ​ ಹೋಗುವುದು ಬೇಡ ಎಂದು ನಾನು ಹೇಳಿದ್ದೆ. ಆದರೆ, ಅವರು ಮೈದಾನದಲ್ಲಿ ಆಡದೆ ಗೌರವವಾಗಿ ಇಲ್ಲಿ ಕುಳಿತುಕೊಳ್ಳಲು ನಾನು ಬಯಸುವುದಿಲ್ಲ ಎಂದು ತಿಳಿಸಿದರು ಎಂದು ಸ್ಮಿತ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಕೋಚ್‌ ಲ್ಯಾಂಗರ್‌.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.