ETV Bharat / sports

ಶಾರ್ಟ್​ ಬೌಲಿಂಗ್​ಗೆ​ ಹೆದರುವುದಿಲ್ಲ, ಭಾರತೀಯ ವೇಗಿಗಳ ಸವಾಲಿಗೆ ಸಿದ್ಧ: ಸ್ಮಿತ್​ - ಜಸ್ಪ್ರೀತ್ ಬುಮ್ರಾ

ಭಾರತದ ಬೌಲರ್​ಗಳು ಶಾರ್ಟ್ ​ಪಿಚ್​ ಬೌಲಿಂಗ್ ಪ್ರಯೋಗ ಮಾಡಿದರೆ ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲವಾಗಲಿದೆ ಎಂದು ಸ್ಟೀವ್​ ಸ್ಮಿತ್​ ಹೇಳಿದ್ದಾರೆ.

ಸ್ಟಿವ್ ಸ್ಮಿತ್​
ಸ್ಟಿವ್ ಸ್ಮಿತ್​
author img

By

Published : Nov 14, 2020, 10:01 PM IST

ಸಿಡ್ನಿ: ಮುಂಬರುವ ಟೆಸ್ಟ್​ ಸರಣಿಯಲ್ಲಿ ಭಾತೀಯ ವೇಗಿಗಳ ಶಾರ್ಟ್​ ಬೌಲಿಂಗ್ ಎದುರಿಸಲು ಯಾವುದೇ ಸಮಸ್ಯೆಯಿಲ್ಲ, ತಮ್ಮ ಜೀವನದಲ್ಲಿ ಈಗಾಗಲೇ ಸಾಕಷ್ಟನ್ನು ಎದುರಿಸಿದ್ದೇನೆ ಎಂದು ಆಸೀಸ್ ಸ್ಟಾರ್​ ಬ್ಯಾಟ್ಸ್​ಮನ್​ ಸ್ಟಿವ್ ಸ್ಮಿತ್​ ಹೇಳಿದ್ದಾರೆ.

ಭಾರತದ ಬೌಲರ್​ಗಳು ಶಾರ್ಟ್ ​ಪಿಚ್​ ಬೌಲಿಂಗ್ ಪ್ರಯೋಗ ಮಾಡಿದರೆ ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲವಾಗಲಿದೆ ಎಂದು ಸ್ಮಿತ್​ ಹೇಳಿದ್ದಾರೆ.

ಭಾರತ ತಂಡ ಶಾರ್ಟ್​ ಪಿಚ್​ ಬೌಲಿಂಗ್ ಮಾಡಿ ಔಟ್​ ಮಾಡಬೇಕೆಂದು ಬಯಸಿದರೆ, ಅದು ನಮ್ಮ ತಂಡಕ್ಕೆ ಅನುಕೂಲವಾಗಲಿದೆ. ಏಕೆಂದರೆ ನಾನು ನನ್ನ ಜೀವನದಲ್ಲಿ ಸಾಕಷ್ಟು ಶಾರ್ಟ್​ ಬೌಲಿಂಗ್​ ಎದುರಿಸಿದ್ದೇನೆ. ಹಾಗೂ ಭಾರತದ ಬೌಲರ್​ಗಳಿಂದ ಹೆಚ್ಚೇನು ತೊಂದರೆಗೆ ಒಳಗಾಗುವುದಿಲ್ಲ. ಬೇಕಿದ್ದರೆ ಕಾದು ನೋಡಿ ಎಂದು ಸ್ಮಿತ್​ ಹೇಳಿದ್ದಾರೆ.

ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿಯನ್ನು ಈಗಾಗಲೇ ಐಪಿಎಲ್​ನಲ್ಲಿ ಎದುರಿಸಿದ್ದೇನೆ. ಹಾಗಾಗಿ ಭಾರತೀಯ ವೇಗಿಗಳಿಗೆ ನಾನು ಹೆದರುವುದಿಲ್ಲ ಎಂದು ಸ್ಮಿತ್ ತಿಳಿಸಿದ್ದಾರೆ.

ಕಳೆದ ವರ್ಷ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿಯನ್ನ 2-1ರಲ್ಲಿ ಗೆದ್ದು ಬೀಗಿತ್ತು. ಆದರೆ ಆ ಟೆಸ್ಟ್​ ಸರಣಿಯಲ್ಲಿ ಸ್ಟಿವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್​ ಬಾಲ್​ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧದಲ್ಲಿದ್ದರಿಂದ ಭಾರತದ ಗೆಲುವು ಸುಲಭವಾಗಿತ್ತು. ಆದರೆ ಈಗ ಆಸ್ಟ್ರೇಲಿಯಾ ತಂಡದಲ್ಲಿ ವಾರ್ನರ್ ಮತ್ತು ಸ್ಮಿತ್ ಕಮ್​ಬ್ಯಾಕ್ ಮಾಡಿರುವುದರಿಂದ ಆಸ್ಟ್ರೇಲಿಯಾ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.