ನವದೆಹಲಿ: ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಭಾರತ ತಂಡದ ವೇಗಿ ಶ್ರೀಶಾಂತ್ ಅವರ ನಿಷೇಧದ ಅವಧಿ ಭಾನುವಾರಕ್ಕೆ ಮುಕ್ತಾಯಗೊಂಡಿದೆ.
2013ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಬಿಸಿಸಿಐ 7 ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧಿಸಿತ್ತು. ಇದೀಗ ನಿಷೇಧ ಮುಕ್ತರಾಗಿರುವ ಅವರು ಕೇರಳ ತಂಡದ ಪರ ದೇಶಿ ಕ್ರಿಕೆಟ್ಗೆ ಮರಳುವ ಆಲೋಚನೆಯಲ್ಲಿದ್ದಾರೆ.

"ನಾನು ಈಗ ಎಲ್ಲ ಪ್ರಕರಣಗಳಿಂದ ಮುಕ್ತನಾಗಿದ್ದೇನೆ. ನಾನು ಅತ್ಯಂತ ಹೆಚ್ಚಾಗಿ ಪ್ರೀತಿಸುವ ಕ್ರೀಡೆಯಲ್ಲಿ ಮುಂದುವರಿಯಲು ಬಯಸಿರುವೆ. ನಾನು ಅಭ್ಯಾಸದ ಸಂದರ್ಭದಲ್ಲೂ ಸಹಾ ಪ್ರತಿಯೊಂದು ಬೌಲಿಂಗ್ಅನ್ನು ಅತ್ಯುತ್ತಮವಾಗಿ ಮಾಡಲು ಪ್ರಯತ್ನಿಸುತ್ತೇನೆ. ಆಟವಾಡಲು ನನಗೆ ಇನ್ನೂ 5-7 ವರ್ಷಗಳ ಸಮಯವಿದ್ದು, ಪ್ರತಿನಿಧಿಸುವ ಯಾವುದೇ ತಂಡಕ್ಕಾದರು ಅತ್ಯುತ್ತಮವಾದದ್ದನ್ನು ನೀಡುತ್ತೇನೆ" ಎಂದು ನಿಷೇಧ ಕೊನೆಗೊಳ್ಳುವ ಎರಡು ದಿನಗಳ ಹಿಂದೆ ಅವರು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದರು.
-
I’m completely free of any charges nd anything nd now gonna represent the sport I love the most.will give my very best to every ball I ball even it’s just practice.just have another 5 to 7 years max to give it all I’ve got nd I will give the very best to any team I play
— Sreesanth (@sreesanth36) September 10, 2020 " class="align-text-top noRightClick twitterSection" data="
">I’m completely free of any charges nd anything nd now gonna represent the sport I love the most.will give my very best to every ball I ball even it’s just practice.just have another 5 to 7 years max to give it all I’ve got nd I will give the very best to any team I play
— Sreesanth (@sreesanth36) September 10, 2020I’m completely free of any charges nd anything nd now gonna represent the sport I love the most.will give my very best to every ball I ball even it’s just practice.just have another 5 to 7 years max to give it all I’ve got nd I will give the very best to any team I play
— Sreesanth (@sreesanth36) September 10, 2020
ಈಗಾಗಲೇ ಶ್ರೀಶಾಂತ್ ಕೇರಳ ರಣಜಿ ಕ್ರಿಕೆಟ್ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿರುವ ಕೇರಳ ಕ್ರಿಕೆಟ್ ಮಂಡಳಿ ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದೆ.
ಭಾರತ ತಂಡದ ಪರ ಶ್ರೀಶಾಂತ್ ಅವರು 27 ಟೆಸ್ಟ್ ಹಾಗೂ 53 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 87 ಹಾಗೂ 75 ವಿಕೆಟ್‌ಗಳನ್ನು ಗಳಿಸಿದ್ದಾರೆ. 10 ಟ್ವೆಂಟಿ-20 ಪಂದ್ಯಗಳ ಮೂಲಕ ಏಳು ವಿಕೆಟ್ ಉರುಳಿಸಿದ್ದಾರೆ.
2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಅವರೊಂದಿಗೆ ರಾಜಸ್ಥಾನ ತಂಡದ ಸಹ ಆಟಗಾರರಾದ ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚೌಹಾಣ್ ಅವರನ್ನು ಬಿಸಿಸಿಐ ನಿಷೇಧಿಸಿತ್ತು.