ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪವರ್ ಹಿಟ್ಟರ್ ಎಂಬ ಟ್ಯಾಗ್ಗೆ ಸಾಕಷ್ಟು ಬೇಡಿಕೆಯಿದೆ. ಆದರೆ ಈ ಟ್ಯಾಗ್ ಸರಿ ಹೊಂದುವುದಿಲ್ಲ ಎಂದು ಒಪ್ಪಿಕೊಳಲು ಹಿಂಜರಿಯುವುದಿಲ್ಲ ಮತ್ತು ಅದಕ್ಕಾಗಿ ನಾನು ಹಂಬಲಿಸುವುದಿಲ್ಲ ಎಂದು ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ ಹೇಳಿದ್ದಾರೆ.
ಕ್ಲಾಸಿಕ್ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ರಾಹುಲ್, 160ರಿಂದ 170ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ ಸ್ಕೋರ್ ಮಾಡಬೇಕಾಗಿದ್ದರೂ ಕೆಲ ನಿಮಿಷಗಳಲ್ಲೇ ಅಂತಹ ಆಟಕ್ಕೆ ಒಗ್ಗಿಕೊಳ್ಳುತ್ತಾರೆ.
"ನಾನು ನನ್ನ ಬ್ಯಾಟಿಂಗ್ ಶೈಲಿಯನ್ನು ಪವರ್ ಹಿಟ್ಟಿಂಗ್ ಎಂದು ಕರೆಯುವುದಿಲ್ಲ. ಆದರೆ ನಿಜಕ್ಕೂ ಕೆಲ ಕೌಶಲ್ಯಗಳ ಆಶೀರ್ವಾದ ಪಡೆದಿದ್ದೇನೆಂದು ಪ್ರಾಮಾಣಿಕವಾಗಿ ಭಾವಿಸುತ್ತೇನೆ" ಎಂದು ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಕ್ಕೂ ಮೊದಲು ಹೇಳಿದ್ದಾರೆ.
"ನಾನು ಕೆಲವು ಕೌಶಲ್ಯಗಳಿಂದ ಆಶೀರ್ವದಿಸಲ್ಪಟ್ಟಿದ್ದೇನೆ. 160-170 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸುಬೇಕಾದ ಸಂದರ್ಭ ಎದುರಾದರೆ ನಾನು ಅದನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮಾಡಲು ಪ್ರಯತ್ನಿಸುತ್ತೇನೆ. ತಂಡದ ಗೆಲುವಿಗೆ ಕೊಡುಗೆ ನೀಡಲು ನಾನು ಸಂತೋಷಪಡುತ್ತೇನೆ ಎಂದಿದ್ದಾರೆ.