ಹೈದರಾಬಾದ್: 41 ವರ್ಷದ ವಿರೇಂದ್ರ ನಾಯ್ಕ್ ಎಂಬ ಹೈದರಾಬಾದ್ ಕ್ರಿಕೆಟಿಗ ಮೈದಾನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೂಲತಃ ಮಹಾರಾಷ್ಟ್ರದವರಾದ ವಿರೇಂದ್ರ ಹೈದರಾಬಾದಿನ ಮರ್ರೆಡ್ಪಲ್ಲಿ ಕ್ರೀಡಾ ಕ್ಲಬ್ ಪರ ಆಡುತ್ತಿದ್ದರು. ಭಾನುವಾರ ಮರ್ರೆಡ್ಪಲ್ಲಿ ಬ್ಲೂಸ್ ತಂಡದ ವಿರುದ್ಧ 1-3 ವಿಭಾಗದ ಏಕದಿನ ಪಂದ್ಯವಾಡುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
![Hyderabad cricketer died](https://etvbharatimages.akamaized.net/etvbharat/prod-images/virendra-naik-twitter_1811newsroom_1574059480_889_1811newsroom_1574063391_919.jpg)
ಮೃತ ಕ್ರಿಕೆಟಿಗನ ಪತ್ನಿ ಗೃಹಿಣಿಯಾಗಿದ್ದು, ಈತನಿಗೆ 8 ವರ್ಷದ ಮಗ ಹಾಗೂ 5 ವರ್ಷದ ಒಂದಿ ಹೆಣ್ಣು ಮಗುವಿದೆ ಎಂದು ತಿಳಿದುಬಂದಿದೆ.
ವಿರೇಂದ್ರನಿಗೆ ಹೃದಯ ಸಂಬಂಧಿ ಖಾಯಿಲೆ ಇರುವುದರಿಂದ ವೈದ್ಯರು ಕ್ರಿಕೆಟ್ ಆಡದಂತೆ ಸಲಹೆ ನೀಡಿದ್ದರು. ಆದ್ರೆ ಕ್ರಿಕೆಟ್ ಮೇಲಿನ ಪ್ರೀತಿಯಿಂದ ಇದೀಗ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆಂದು ಅವರ ಸಹೋದರ ಅವಿನಾಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.