ETV Bharat / sports

ಐಪಿಎಲ್​ನಲ್ಲಿ ಆರ್​ಸಿಬಿ ಗಳಿಸಿದ್ದಕ್ಕಿಂತಲೂ ಕಡಿಮೆಯಿದೆ ಪಿಎಸ್​ಎಲ್​ನ ಒಟ್ಟು ಬಹುಮಾನ ಮೊತ್ತ!

ಪಿಎಸ್​ಎಲ್ ಆರಂಭವಾದ ದಿನದಿಂದಲೂ ಕೆಲವರು ಐಪಿಎಲ್​ನೊಂದಿಗೆ ಹೋಲಿಕೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಲೀಗ್​ನಲ್ಲಿ ವಿಜೇತ ತಂಡ ಪಡೆದ ಹಣ, ಆಟಗಾರರು ಗಳಿಸುವ ವೇತನ ಹಾಗೂ ಕ್ರಿಕೆಟ್​ ಬೋರ್ಡ್​ ಗಳಿಸಿಕೊಳ್ಳುವ ಹಣದಲ್ಲಿ ಭಾರಿ ವ್ಯತ್ಯಾಸವಿದೆ.

ಐಪಿಎಲ್ vs ಪಿಎಸ್​ಎಲ್​
ಐಪಿಎಲ್ vs ಪಿಎಸ್​ಎಲ್​
author img

By

Published : Nov 18, 2020, 5:08 PM IST

ಮುಂಬೈ: ಮಂಗಳವಾರ ಪಾಕಿಸ್ತಾನ ಪ್ರೀಮಿಯರ್​ ಲೀಗ್​ನ 5ನೇ ಆವೃತ್ತಿ ಮುಗಿದಿದ್ದು, ಕರಾಚಿ ಕಿಂಗ್ಸ್​ 5 ವಿಕೆಟ್​ಗಳಿಂದ ಲಾಹೋರ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಾರ್ಚ್​ನಲ್ಲಿ ಮುಗಿಯಬೇಕಿದ್ದ ಈ ಟೂರ್ನಿ ಕೋವಿಡ್​ ಕಾರಣದಿಂದ ಆರಂಭವಾದ 8 ತಿಂಗಳ ಬಳಿಕ ಮುಗಿದಿದೆ.

ಪಿಎಸ್​ಎಲ್ ಆರಂಭವಾದ ದಿನದಿಂದಲೂ ಕೆಲವರು ಐಪಿಎಲ್​ನೊಂದಿಗೆ ಹೋಲಿಕೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಲೀಗ್​ನಲ್ಲಿ ವಿಜೇತ ತಂಡ ಪಡೆದ ಹಣ, ಆಟಗಾರರ ಗಳಿಸುವ ವೇತನ ಹಾಗೂ ಕ್ರಿಕೆಟ್​ ಬೋರ್ಡ್​ ಗಳಿಸಿಕೊಳ್ಳುವ ಹಣದಲ್ಲಿ ಭಾರಿ ವ್ಯತ್ಯಾಸವಿದೆ.

ಎರಡು ಲೀಗ್​ಗಳ ವಿಜೇತ ತಂಡಗಳು ಗಳಿಸಿಕೊಂಡ ಬಹುಮಾನ ಮೊತ್ತಕ್ಕೆ ಹೋಲಿಕೆ ಮಾಡಿ ನೋಡುವುದಾದರೆ, ಐಪಿಎಲ್ ವಿನ್ನರ್ ಮುಂಬೈ ಇಂಡಿಯನ್ಸ್​ 20 ಕೋಟಿ ರೂ. ಪಡೆದರೆ, ಪಿಎಸ್​ಎಲ್ ವಿನ್ನರ್ ಕರಾಚಿ ಕಿಂಗ್ಸ್ ಪಡೆದಿದ್ದು ಕೇವಲ ​​ 3.75 ಕೋಟಿ ರೂ. ಇನ್ನು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್​ 12.5 ಕೋಟಿ ರೂ. ಪಡೆದರೆ, ಪಿಎಸ್​ಎಲ್ ರನ್ನರ್​ ಅಪ್​ ಲಾಹೋರ್ ಕಲಂದರ್ಸ್ ಪಡೆದಿದ್ದು ಜಸ್ಟ್​​ 1.5 ಕೋಟಿ ರೂ. ಅಷ್ಟೇ.

ಆದರೆ ವೈಯಕ್ತಿಕ ಪ್ರಶಸ್ತಿಗಳ ವಿಭಾಗದಲ್ಲಿ ಮಾತ್ರ ಎರಡು ಲೀಗ್​ಗಳಲ್ಲೂ ವಿಜೇತರಿಗೆ ಸಮಾನ ಮೊತ್ತವನ್ನು ನೀಡಲಾಗಿದೆ. ಅತ್ಯುತ್ತಮ ಬ್ಯಾಟ್ಸ್​ಮನ್, ಅತ್ಯುತ್ತಮ ಬೌಲರ್​, ಅತ್ಯುತ್ತಮ ಫೀಲ್ಡರ್​, ಅತ್ಯುತ್ತಮ ವಿಕೆಟ್ ಕೀಪರ್​, ಉದಯೋನ್ಮುಖ ಆಟಗಾರ ಪ್ರಶಸ್ತಿಗಳಿಗೆ ಐಪಿಎಲ್​ನಂತೆ ತಲಾ 10 ಲಕ್ಷ ನೀಡಲಾಗಿದೆ.

ಆದರೆ, ಐಪಿಎಲ್​ನಲ್ಲಿ 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳೂ ಕೂಡ 8.75 ಕೋಟಿ ರೂ ಪಡೆಯಲಿವೆ. ಆದರೆ, ಪಿಎಸ್​ಎಲ್​ನಲ್ಲಿ 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳಿಗೆ ಯಾವುದೇ ಬಹುಮಾನ ಮೊತ್ತ ನೀಡುತ್ತಿಲ್ಲ. ಇನ್ನು ವಿಶೇಷವೆಂದರೆ ಐಪಿಎಲ್​ನಲ್ಲಿ 4ನೇ ಸ್ಥಾನ ಪಡೆಯುವ ತಂಡದ ಮೊತ್ತ ಪಿಎಸ್​ಎಲ್​ನ ಒಟ್ಟಾರೆ ಬಹುಮಾನ ಮೊತ್ತಕ್ಕಿಂತ (7.5)ಕಡಿಮೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.