ETV Bharat / sports

ಪಿಎಂ ಕೇರ್ಸ್​​ ನಿಧಿಗೆ 1 ಕೋಟಿ ರೂ ನೀಡಿದ ಹಾಕಿ ಇಂಡಿಯಾ - ಹಾಕಿ ಇಂಡಿಯಾ

ಪಿಎಂ ಕೇರ್ಸ್​ ನಿಧಿಗೆ ಎಲ್ಲೆಡೆಯಿಂದ ದೇಣಿಗೆ ಹರಿದು ಬರುತ್ತಿದ್ದು, ಈ ಹಿಂದೆ ಸಹಾಯ ಮಾಡಿದ್ದ ಹಾಕಿ ಇಂಡಿಯಾ ಇದೀಗ ಹೆಚ್ಚುವರಿ ಹಣ ಘೋಷಿಸಿದೆ.

Hockey India
Hockey India
author img

By

Published : Apr 4, 2020, 5:25 PM IST

ನವದೆಹಲಿ: ದೇಶಾದ್ಯಂತ ರೌದ್ರಾವತಾರ ತಾಳುತ್ತಿರುವ ಕೋವಿಡ್​-19 ಪಿಡುಗಿನ ವಿರುದ್ಧದ ಹೋರಾಟಕ್ಕಾಗಿ ಈ ಹಿಂದೆ ಕೈಜೋಡಿಸಿದ್ದ ಹಾಕಿ ಇಂಡಿಯಾ ಇದೀಗ ಮತ್ತಷ್ಟು ಆರ್ಥಿಕ ನೆರವು ನೀಡಿದೆ.

Hockey India
ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್​ ಮುಷ್ತಾಕ್ ಅಹ್ಮದ್

ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಹಾಕಿ ಇಂಡಿಯಾ ಪಿಎಂ-ಕೇರ್ಸ್​ ನಿಧಿಗೆ ಇದೀಗ ಹೆಚ್ಚುವರಿಯಾಗಿ 75 ಲಕ್ಷ ರೂ ದೇಣಿಗೆ ನೀಡಿದೆ. ಏಪ್ರಿಲ್​ 1ರಂದು 25 ಲಕ್ಷ ರೂ ನೀಡಿದ್ದು, ಇದೀಗ ಅದನ್ನು 1 ಕೋಟಿಗೆ ಹೆಚ್ಚಿಸಲು ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ.

Hockey India
ಮಹಿಳಾ ಹಾಕಿ ತಂಡದ ಸದಸ್ಯರು (ಸಂಗ್ರಹ ಚಿತ್ರ)

ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್​ ಮುಷ್ತಾಕ್ ಅಹ್ಮದ್ ಮಾತನಾಡಿ​, ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು, ಸರ್ಕಾರದೊಂದಿಗೆ ಕೈ ಜೋಡಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.