ETV Bharat / sports

ಆ್ಯಶಸ್ ಅಂದ್ರೇನು, ಆ ಹೆಸರು ಹೇಗ್​ ಬಂತು ?... ಆ್ಯಶಸ್ ಸರಣಿ ಕುರಿತ ಕುತೂಹಲಕಾರಿ ಅಂಶಗಳು

ಎರಡು ದೇಶಗಳಲ್ಲಿ ತಲಾ 35 ಆ್ಯಶಸ್​ ಸರಣಿಗಳು ನಡೆದಿವೆ. ಆಸ್ಟ್ರೇಲಿಯಾದಲ್ಲಿ ನಡೆದಿರುವ 35 ಸರಣಿಯಲ್ಲಿ ಆಸೀಸ್​ 19 ಸರಣಿ ಹಾಗೂ ಇಂಗ್ಲೆಂಡ್​ 14 ಸರಣಿಗೆ ಗೆದ್ದಿದೆ.  2 ಸರಣಿ ಡ್ರಾನಲ್ಲಿ ಅಂತ್ಯಗೊಂಡಿವೆ. ಇಂಗ್ಲೆಂಡ್​ ನೆಲದಲ್ಲಿ ನಡೆದಿರುವ 35 ಸರಣಿಗಳಲ್ಲಿ ಇಂಗ್ಲೆಂಡ್​ 14 ಸರಣಿಗಳಲ್ಲಿ , ಆಸ್ಟ್ರೇಲಿಯಾ 18 ಸರಣಿ ಗೆದ್ದಿದ್ದರೆ,3 ಸರಣಿಗಳು ಡ್ರಾನಲ್ಲಿ ಅಂತ್ಯಗೊಂಡಿದೆ.

Ashes series
author img

By

Published : Aug 1, 2019, 11:32 AM IST

ಬರ್ಮಿಂಗ್​ಹ್ಯಾಮ್​: ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದರೆ ಹೇಗೆ ವಿಶ್ವದೆಲ್ಲೆಡೆ ಸಂಚಲನ ಮೂಡುವುದೋ ಹಾಗೆ ಇಂಗ್ಲೆಂಡ್​ ಹಾಗೂ ಆಸ್ಟ್ರೇಲಿಯಾ ತಂಡಗಳು ಎದುರು ಬದುರಾದಾಗ ಅದೇ ಸನ್ನಿವೇಶ ನಿರ್ಮಿತವಾಗಿರುತ್ತದೆ. ಇಂದಿನಿಂದ ಟೆಸ್ಟ್​ ಇತಿಹಾಸದ ಪ್ರಮುಖ ಸರಣಿಯಾದ ಆ್ಯಶಸ್​ ಶುರುವಾಗಲಿದ್ದು, ಆ ಸರಣಿ ಕುರಿತ ಕುತೂಹಲಕಾರಿ ಅಂಶಗಳು ಇಲ್ಲಿದೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಸರಣಿಗೆ ಆ್ಯಶಸ್​ ಹೆಸರು ಬರಲು ಕಾರಣ?

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಸರಣಿಗೆ ‘ಆ್ಯಶಸ್‌’ ಎಂದು ಹೆಸರು ಬಂದಿರುವುದರ ಹಿಂದೆ ಒಂದು ರೋಚಕ ಕಥೆ ಇದೆ. 1982 ರಲ್ಲಿ ಈ ಎರಡು ತಂಡಗಳ ನಡುವೆ ಒಂದು ಪಂದ್ಯದ ಟೆಸ್ಟ್​ ಸರಣಿ ನಡೆದಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತ್ತು. ಪಂದ್ಯದ ನಂತರ ಇಂಗ್ಲೆಂಡ್‌ನ 'ಸ್ಪೋರ್ಟಿಂಗ್‌ ಟೈಮ್ಸ್‌' ದಿನಪತ್ರಿಕೆ ಇಂಗ್ಲೆಂಡ್‌ ಕ್ರಿಕೆಟ್‌ ಈಗ ಸತ್ತುಹೋಗಿದೆ, ಅದರ ಅಂತ್ಯಕ್ರಿಯೆ ಮಾಡಿ ಆಸ್ಟ್ರೇಲಿಯಾ ಚಿತಾಭಸ್ಮವನ್ನು ಆಸ್ಟ್ರೇಲಿಯಾಕ್ಕೆ ಕೊಂಡೊಯ್ಯಲಾಗಿದೆ ಎಂದು ಪ್ರಕಟಿಸಿತ್ತಂತೆ. ಇದು ಇಂಗ್ಲೆಂಡ್​ನಲ್ಲಿ ಬಾರಿ ಸಂಚಲನ ಮೂಡಿಸಿತ್ತಂತೆ.

ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ ಇಂಗ್ಲೆಂಡ್​ ತಂಡ ಮರು ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಗ ಇಂಗ್ಲೆಂಡ್‌ ತಂಡದ ನಾಯಕ ಇವೊ ಬ್ಲಿಗ್‌ ಪ್ರವಾಸಕ್ಕೆ ತೆರಳುವ ಮುನ್ನ 'ಆಸ್ಟ್ರೇಲಿಯಾ ನಮ್ಮ ನೆಲದಿಂದ ತೆಗೆದುಕೊಂಡು ಹೋಗಿರುವ ಚಿತಾಭಸ್ಮವನ್ನು ಮರಳಿ ತರುತ್ತೇನೆ' ಎಂದು ಹೇಳಿದ್ದರು. ಹೇಳಿದಂತೆ 3 ಪಂದ್ಯಗಳ ಸರಣಿಯನ್ನು ಬ್ಲಿಗ್​ ಪಡೆ 2-1ರಲ್ಲಿ ಗೆದ್ದು ತಂದಿತ್ತು. ಆ ಸಂದರ್ಭದಲ್ಲಿ ಮೆಲ್ಬರ್ನ್‌ನ ಮಹಿಳೆಯರ ಗುಂಪೊಂದು ಮರದ ತುಂಡುಗಳನ್ನು ಸುಟ್ಟು ಅದರ ಬೂದಿಯನ್ನು ಸಂಗ್ರಹಿಸಿ ಮಾಡಿದ್ದ ಚಿಕ್ಕ ಟ್ರೋಫಿಯನ್ನು ಬ್ಲಿಗ್‌ ಅವರಿಗೆ ನೀಡಿತ್ತು.

ಅಂದು ಅದನ್ನು ಹಲವರು ಆಸ್ಟ್ರೇಲಿಯಾ ಕ್ರಿಕೆಟ್‌ನ ಚಿತಾಭಸ್ಮ ಎಂದು ಕರೆದಿದ್ದರಂತೆ. ಆದರೆ ಅದನ್ನು ಇವೋ ಬ್ಲಿಗ್‌ಗೆ ಆ ಮಹಿಳೆಯರ ಗುಂಪು ನೀಡಿದ್ದ ಉಡುಗೊರೆಯಾಗಿತ್ತು. 1927ರಲ್ಲಿ ಇವೋ ಬ್ಲಿಗ್‌ ನಿಧನರಾದ ಬಳಿಕ ಅದನ್ನು ಎಂಸಿಸಿಗೆ(Marylebone Cricket Club ಈಗಿನ ಲಾರ್ಡ್ಸ್​ ಕ್ರಿಕೆಟ್​ ಗ್ರೌಂಡ್​) ನೀಡಲಾಗಿತ್ತು. ಆ ನಂತರದ ದಿನಗಳಲ್ಲಿ ಇದೇ ಆ್ಯಶಸ್​ ಟ್ರೋಫಿಯಾಗಿ ಬದಲಾಗಿ, ಸರಣಿ ಗೆದ್ದ ತಂಡಕ್ಕೆ ನೀಡುವ ಪ್ರತೀತಿ ಬೆಳೆದುಬಂದಿದೆ.

Ashes series
ಜೋ ರೂಟ್​-ಟಿಮ್​ ಪೇನ್​

ಸರಣಿ ಬೆಳೆದು ಬಂದ ಬಗೆ ಹೇಗೆ?

1882-83ರಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ನಡುವೆ ಮೊದಲ ಬಾರಿಗೆ ಒಂದು ಪಂದ್ಯದ ಆ್ಯಶಸ್‌ ಸರಣಿ ನಡೆದಿತ್ತು. ನಂತರ ಕೆಲವು ಸರಣಿಗಳಲ್ಲಿ 3, 5 ಪಂದ್ಯಗಳು ನಡೆದಿದ್ದವು. 1938 ಮತ್ತು 1975ರಲ್ಲಿ 4 ಪಂದ್ಯಗಳ ಸರಣಿ ನಡೆದಿತ್ತು.1970-71, 1974–75, 1978-79, 1981, 1985, 1989, 1993 ಮತ್ತು 1997ರ ಸರಣಿಯಲ್ಲಿ 6 ಪಂದ್ಯಗಳ ಸರಣಿ ನಡೆದಿದೆ. ನಂತರ ಆ್ಯಶಸ್​ ಸರಣಿಯಲ್ಲಿ 5 ಪಂದ್ಯಗಳಿಗೆ ಸೀಮಿತವಾಗಿದೆ.

ಎರಡು ತಂಡಗಳ ಅಂಕಿ-ಅಂಶ

ಎರಡು ದೇಶಗಳಲ್ಲಿ ತಲಾ 35 ಸರಣಿಗಳು ನಡೆದಿವೆ. ಆಸ್ಟ್ರೇಲಿಯಾದಲ್ಲಿ ನಡೆದಿರುವ 35 ಸರರಣಿಯಲ್ಲಿ ಆಸೀಸ್​ 19 ಸರಣಿ ಹಾಗೂ ಇಂಗ್ಲೆಂಡ್​ 14 ಸರಣಿಗೆ ಗೆದ್ದಿದೆ. 2 ಸರಣಿ ಡ್ರಾನಲ್ಲಿ ಅಂತ್ಯಗೊಂಡಿವೆ. ಇಂಗ್ಲೆಂಡ್​ ನೆಲದಲ್ಲಿ ನಡೆದಿರುವ 35 ಸರಣಿಗಳಲ್ಲಿ ಇಂಗ್ಲೆಂಡ್​ 14 ಸರಣಿಗಳಲ್ಲಿ , ಆಸ್ಟ್ರೇಲಿಯಾ 18 ಸರಣಿ ಗೆದ್ದಿದ್ದರೆ,3 ಸರಣಿಗಳು ಡ್ರಾನಲ್ಲಿ ಅಂತ್ಯಗೊಂಡಿದೆ.

ಮುಖಾಮುಖಿ(ಪಂದ್ಯಗಳಲ್ಲಿ)

ಆಸ್ಟ್ರೇಲಿಯಾ- ಇಗ್ಲೆಂಡ್​ ತಂಡಗಳು 346 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಆಸ್ಟ್ರೇಲಿಯಾ 144 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್​ ತಂಡ 108 ಪಂದ್ಯಗಳಲ್ಲಿ ಜಯ ಸಾಧಿಸಿದೆ. 94 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.