ETV Bharat / sports

ತ್ರಿಶತಕ ಸಿಡಿಸಿದ ನಂತರ ಸೆಹ್ವಾಗ್​ ನೀಡಿದ ಸಲಹೆಗಳನ್ನು ಸ್ಮರಿಸಿದ ವಾರ್ನರ್​ - ವಾರ್ನರ್​​ ಐಪಿಎಲ್

ಐಪಿಎಲ್​ ಮೂಲಕವೇ ಕ್ರಿಕೆಟ್ ಜಗತ್ತಿಗೆ ಪರಿಚಿತರಾದ ಡೇವಿಡ್​ ವಾರ್ನರ್​ ಆರಂಭದ ಆವೃತ್ತಿಗಳಲ್ಲಿ ಡೆಲ್ಲಿ ಡೇರ್ ಡೆವಿಲ್ಸ್​ ಪರ ಸೆಹ್ವಾಗ್​ ನಾಯಕತ್ವದಲ್ಲಿ ಆಡಿದ್ದರು. ಆ ಸಂದರ್ಭದಲ್ಲಿ ಸೆಹ್ವಾಗ್ ಟೆಸ್ಟ್​ ಕ್ರಿಕೆಟ್​ನಲ್ಲಿ ಯಶಸ್ವಿ ಬ್ಯಾಟ್ಸ್​ಮನ್​ ಆಗಲು ನೀಡಿದ್ದ ಸಲಹೆಗಳನ್ನು ನೆನೆಪಿಸಿಕೊಳ್ಳುವ ಮೂಲಕ ಭಾರತೀಯ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

WARNER  historic triple ton
WARNER historic triple ton
author img

By

Published : Dec 1, 2019, 5:49 PM IST

ಅಡಿಲೇಡ್​: ಟೆಸ್ಟ್​ ಕ್ರಿಕೆಟ್​ ಎಂದರೆ ಕೇವಲ ತಾಳ್ಮೆಯ ಆಟವಲ್ಲ, ಅಲ್ಲೂ ಸರಾಗವಾಗಿ ರನ್ ​ಗಳಿಸಬಹುದು ಎಂದು ಕ್ರಿಕೆಟ್​ ಜಗತ್ತಿಗೆ ತೋರಿಸಿಕೊಟ್ಟ ವೀರೇಂದ್ರ ಸೆಹ್ವಾಗ್​ ಎಂದೋ ನೀಡಿದ್ದ ಕೆಲವು ಸಲಹೆಗಳನ್ನು ತ್ರಿಶತಕ ವೀರ ಡೇವಿಡ್​ ವಾರ್ನರ್​ ಸ್ಮರಿಸಿದ್ದಾರೆ.

ತ್ರಿಶತಕ ಸಿಡಿಸಿದ ನಂತರ ಮಾತನಾಡಿದ ವಾರ್ನರ್,​ ತಮ್ಮ ಟೆಸ್ಟ್​ ವೃತ್ತಿ ಜೀವನಕ್ಕೂ ಆರಂಭದಲ್ಲೇ ಭವಿಷ್ಯದಲ್ಲಿ ಟಿ20ಗಿಂತಲೂ ಅತ್ಯುತ್ತಮ ಬ್ಯಾಟ್ಸ್​ಮನ್​ ಆಗುತ್ತೀರಿ ಎಂದು ಹೇಳಿದ್ದರು. ಅದಕ್ಕೆ ಅವರು ಕೆಲವು ಟಿಪ್ಸ್​ಗಳನ್ನೂ ನೀಡಿದ್ದರು. ಅವುಗಳನ್ನು ನಾನು ಅನುಸರಿಸಿಕೊಂಡಿದ್ದೇನೆ ಎಂದು ವಾರ್ನರ್​ ನೆನಪಿಸಿಕೊಂಡರು.

ವಾರ್ನರ್ ಪಾಕ್​ ಬೌಲರ್​ಗಳನ್ನು ಎರಡು ದಿನಗಳ ಕಾಲ ಕಾಡಿದ್ದಲ್ಲದೆ, 335 ರನ್​ಗಳನ್ನು ಬಾರಿಸಿ 88 ವರ್ಷಗಳ ಹಿಂದಿನ ಬ್ರಾಡ್ಮನ್ ​(334) ದಾಖಲೆಯನ್ನು ಹಿಂದಿಕ್ಕಿದರು. ಇದ್ರ ಜೊತೆಗೆ ಅತಿ ಹೆಚ್ಚು ವೈಯಕ್ತಿಕ ರನ್​ ಗಳಿಸಿದ ಆಸ್ಟ್ರೇಲಿಯಾದ 2ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು.

335 ರನ್ ​ಗಳಿಸಿದ್ದ ವಾರ್ನರ್​ ಬ್ರಯಾನ್​ ಲಾರಾ(400) ದಾಖಲೆ ಮುರಿಯುವ ಅವಕಾಶವಿತ್ತು. ಆದರೆ, ಟಿಮ್​ ಪೇನ್​ ಡಿಕ್ಲೇರ್​ ಘೋಷಿಸಿದ್ದರಿಂದ ಬಹುಕಾಲದ ಲಾರಾ ದಾಖಲೆ ಆಗಿಯೇ ಉಳಿಯಿತು. ಆದರೆ ವಾರ್ನರ್​ ಹೇಳಿಕೆಯಂತೆ ನಾವು ಯಾವಾಗ ಡಿಕ್ಲೇರ್​ ಘೋಷಿಸಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದೆವು. ಆ ಪ್ರಕಾರವೇ ಪೇನ್​ ಕೂಡ ನಡೆದುಕೊಂಡರು. ವೈಯಕ್ತಿಕ ದಾಖಲೆಗಳಿಗಿಂತ ತಂಡದ ಹಿತಾಸಕ್ತಿಯೇ ಮುಖ್ಯ ಎಂದು ವಾರ್ನರ್​ ತಮ್ಮ ನಾಯಕನ ನಿರ್ಧಾರವನ್ನು ಎತ್ತಿ ಹಿಡಿದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.