ಕೊಲಂಬೊ: ಮುಂಬೈನಲ್ಲಿ 2011ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು ಎಂದು ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಾಡಿರುವ ಆರೋಪವನ್ನು ಅಲ್ಲಗೆಳೆದಿರುವ ಅಂದಿನ ನಾಯಕ ಕುಮಾರ್ ಸಂಗಾಕ್ಕರ ಸಾಕ್ಷಿ ಇದ್ದರೆ ಸಾಬೀತು ಮಾಡಿ ಎಂದು ಸವಾಲು ಹಾಕಿದ್ದಾರೆ.
ಸ್ಥಳೀಯ ಟಿವಿ ಚಾನಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅಲುತ್‌ಗಮಗೆ, 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು. 'ನಾವು 2011ರ ವಿಶ್ವಕಪ್ಅನ್ನು ಮಾರಾಟ ಮಾಡಿದ್ದೇವೆ ಎಂದು ಆರೋಪಿಸಿದ್ದರು.
ತಮ್ಮ ದೇಶದ ಖ್ಯಾತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ವಿವರಗಳನ್ನು ನೀಡುವುದಿಲ್ಲ. ಆದರೆ ಅವರು ತಮ್ಮ ಕಾಮೆಂಟ್ಗೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ದ., ಈ ಬಗ್ಗೆ ಯಾವುದೇ ಚರ್ಚೆಗಾದರೂ ನಾನು ಸಿದ್ದನಿದ್ದೇನೆ ಎಂದಿದ್ದಾರೆ. ಆದರೆ ಅವರು ಈವರೆಗೆ ತಮ್ಮ ಆರೋಪಕ್ಕೆ ಯಾವುದೇ ಪುರಾವೆ ನೀಡಿಲ್ಲ.
ಈ ಆರೋಪವನ್ನು ತಳ್ಳಿಹಾಕಿದ್ದ ಅಂದಿನ ಶ್ರೀಲಂಕಾ ತಂಡದ ಹಿರಿಯ ಬ್ಯಾಟ್ಸ್,ಮನ್ ಹಾಗೂ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮಹೇಲಾ ಜಯವರ್ಧನೆ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಸರ್ಕಸ್ ಶುರುವಾಗಿದೆ. ಫಿಕ್ಸಿಂಗ್ ಮಾಡಿದವರ ಹೆಸರು ಮತ್ತು ಸಾಕ್ಷಿಗಳಿವೆಯಾ? ಎಂದು ಟ್ವೀಟ್ ಮಾಡಿದ್ದರು.
-
He needs to take his “evidence” to the ICC and the Anti corruption and Security Unit so the claims can be investigated throughly https://t.co/51w2J5Jtpc
— Kumar Sangakkara (@KumarSanga2) June 18, 2020 " class="align-text-top noRightClick twitterSection" data="
">He needs to take his “evidence” to the ICC and the Anti corruption and Security Unit so the claims can be investigated throughly https://t.co/51w2J5Jtpc
— Kumar Sangakkara (@KumarSanga2) June 18, 2020He needs to take his “evidence” to the ICC and the Anti corruption and Security Unit so the claims can be investigated throughly https://t.co/51w2J5Jtpc
— Kumar Sangakkara (@KumarSanga2) June 18, 2020
ಜಯವರ್ಧನೆ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಅಂದಿನ ಶ್ರೀಲಂಕಾ ತಂಡದ ನಾಯಕ ಹಾಗೂ ಪ್ರಸ್ತುತ ಎಂಸಿಸಿ ಕ್ರಿಕೆಟ್ ಕ್ಲಬ್ನ ಅಧ್ಯಕ್ಷರಾಗಿರುವ ಕುಮಾರ್ ಸಂಗಾಕ್ಕರ, ಮಾಜಿ ಸಚಿವರ ಬಳಿ ಯಾವುದಾದರೂ ಸಾಕ್ಷಿಗಳಿದ್ದರೆ ಐಸಿಸಿ ಬಳಿಗೆ ಹೋಗಲಿ ಎಂದು ಟ್ವಿಟರ್ನಲ್ಲಿ ಸವಾಲು ಹಾಕಿದ್ದಾರೆ.
ಅಂದು ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ 274 ರನ್ಗಳಿಸಿತ್ತು. 275 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ ಆರಂಭಿಕ ಗಂಭೀರ್(97), ನಾಯಕ ಧೋನಿ(91)ಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ಗಳ ಜಯ ಸಾಧಿಸಿತ್ತು. ಈ ಮೂಲಕ 28 ವರ್ಷಗಳ ಮೂಲಕ ವಿಶ್ವಕಪ್ ಎತ್ತಿ ಹಿಡಿದಿತ್ತು.