ETV Bharat / sports

ಅವನೂ ಮನುಷ್ಯನೇ, ಯಂತ್ರವಲ್ಲ.. ಕೊಹ್ಲಿ ಸಾಮರ್ಥ್ಯದ ಟೀಕಿಗಳಿಗೆ ಬಾಲ್ಯದ ಕೋಚ್​ ಖಡಕ್ ಉತ್ತರ

ಜಾಂಟಿ ರೋಡ್ಸ್ ಅವರಂತಹವರು ಕೂಡ ಕೆಲವೊಮ್ಮೆ ಕ್ಯಾಚ್‌ ಬಿಟ್ಟಿದ್ದಾರೆ. ಅತ್ಯುತ್ತಮ ಫೀಲ್ಡರ್​ ಎಂದೇ ಕರಿಸಿಕೊಳ್ಳುತ್ತಿದ್ದ ಪಾಕಿಸ್ತಾನದ ಜಾವೇದ್​ ಮಿಯಾಂದಾದ್​ ಕೂಡ ಒಂದೆರಡು ಬಾರಿ ಕ್ಯಾಚ್ ಬಿಟ್ಟಿರುತ್ತಾರೆ..

author img

By

Published : Sep 27, 2020, 5:43 PM IST

ಐಪಿಎಲ್ 2020
ವಿರಾಟ್​ ಕೊಹ್ಲಿ

ದುಬೈ: ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ಧದ ಪಂದ್ಯದ ವೇಳೆ 2 ಕ್ಯಾಚ್​ ಕೈಚೆಲ್ಲಿದ ವಿರಾಟ್​ ಕೊಹ್ಲಿ ಕ್ರಿಕೆಟ್ ಲೋಕಕ್ಕೆ ಅಚ್ಚರಿಯನ್ನುಂಟು ಮಾಡಿದ್ದರು. ಜೊತೆಗೆ 200ಕ್ಕೂ ಹೆಚ್ಚು ರನ್​ ಚೇಸ್ ಮಾಡುವ ವೇಳೆ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದ ನಂತರ ಕೊಹ್ಲಿಯ ವೈಫಲ್ಯವನ್ನು ಹಲವಾರು ಕ್ರಿಕೆಟ್ ತಜ್ಞರು ವಿಮರ್ಶೆ ಮಾಡಿದ್ದರು.

ಆದರೆ, ಅವರ ಬಾಲ್ಯದ ಕೋಚ್​ ರಾಜ್‌ಕುಮಾರ್​ ಶರ್ಮಾ, ಕೇವಲ ಎರಡೇ ಕ್ಯಾಚ್​ ಕೈಬಿಟ್ಟಿದ್ದಕ್ಕೆ ಕೊಹ್ಲಿ ಸಾಮರ್ಥ್ಯ ವಿಮರ್ಶೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ಕೊಹ್ಲಿ ಈಗಾಗಲೇ ಸಾಕಷ್ಟು ಅತ್ಯುತ್ತಮ ಪ್ರದರ್ಶನ ತೋರಿರುವುದನ್ನ ಕೋಟ್ಯಂತರ ಅಭಿಮಾನಿಗಳು ಕಂಡಿದ್ದಾರೆ.

ಈ ಮಾನದಂಡವೇ ಆತನ ವಿರುದ್ಧ ಬೇಗ ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತಿದೆ. ಅವರು ಪ್ರತಿ ಪಂದ್ಯದಲ್ಲೂ ತಮ್ಮ ನೆಚ್ಚಿನ ಬ್ಯಾಟ್ಸ್​ಮನ್​ ರನ್​ಗಳಿಸಬೇಕು, ಪಂದ್ಯ ಗೆಲ್ಲಿಸಬೇಕು ಎಂದು ಬಯಸುತ್ತಿರುತ್ತಾರೆ ಎಂದು ರಾಜ್​ಕುಮಾರ್​ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

'ಇದು(ವೈಫಲ್ಯ) ಪ್ರತಿಯೊಬ್ಬ ಕ್ರಿಕೆಟಿಗನೊಬ್ಬನ ಜೀವನದ ಒಂದು ಭಾಗ, ನೀವು ಮೈದಾನದಲ್ಲಿ ಕೆಲವು ಉತ್ತಮ ದಿನಗಳನ್ನು ಕಂಡಹಾಗೆ, ಕೆಲವು ಕೆಟ್ಟ​ ದಿನಗಳನ್ನು ನೋಡಬೇಕಾಗುತ್ತದೆ. ಕೊಹ್ಲಿ ಈಗಾಗಲೇ ಅಂತಹ ಮಾನದಂಡವನ್ನು ನಿರ್ಮಿಸಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಆತ ಯಂತ್ರವಲ್ಲ ಮತ್ತು ಒಬ್ಬ ಮನುಷ್ಯ ಎಂಬುದನ್ನು ಮರೆಯುತ್ತಿದ್ದಾರೆ'.

ಕೊಹ್ಲಿ ಮತ್ತು ಕೋಚ್​ ರಾಜ್​ ಕುಮಾರ್​ ಶರ್ಮಾ
ಕೊಹ್ಲಿ ಮತ್ತು ಕೋಚ್​ ರಾಜ್‌ಕುಮಾರ್​ ಶರ್ಮಾ

'ಕೆಲವು ಕೆಟ್ಟ ದಿನಗಳನ್ನು ನೀವು ಹೊಂದಲೇಬೇಕು. ಆದರೆ, ಜನರು ಮಾತ್ರ ತಾಂತ್ರಿಕ ಸಮಸ್ಯೆ ಅಥವಾ ಮನಸ್ಥಿತಿ ಸಮಸ್ಯೆ ಇದೆಯೇ ಎಂದು ಕೇಳುತ್ತಾರೆ. ಆದರೆ, ನಾನು ಮತ್ತೊಮ್ಮೆ ಹೇಳುತ್ತೇನೆ ವೈಫಲ್ಯ ಆಟದ ಒಂದು ಭಾಗವಷ್ಟೇ.. ನೀವು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಯಶಸ್ವಿಯಾಗಲು ಸಾಧ್ಯವಿಲ್ಲ. ಆದರೆ, ಕೊಹ್ಲಿ ಅಭಿಮಾನಿಗಳು ಮಾತ್ರ ಆತ ಸದಾ ಉತ್ತಮವಾಗಿ ಆಡುವುದನ್ನು ನೋಡಲು ಬಯಸುತ್ತಾರೆ. ಒಂದು ಕೆಟ್ಟ ಪ್ರದರ್ಶನ ಅವರಿಗೆ ನೋವುಂಟು ಮಾಡುತ್ತದೆ' ಎಂದು ರಾಜ್​ಕುಮಾರ್​ ವಿವರಿಸಿದ್ದಾರೆ.

ಬಹಳ ದಿನಗಳಿಂದ ಕ್ರಿಕೆಟ್​ನಿಂದ ದೂರವಿದ್ದದ್ದು, ಕೊಹ್ಲಿ ಕ್ಯಾಚ್​ ಬಿಡಲು ಕಾರಣವಾಗಿರಬಹುದಾ ಎಂಬ ಮಾತನ್ನು ಕೊಹ್ಲಿ ಕೋಚ್​ ತಿಸ್ಕರಿಸಿದ್ದಾರೆ.'ನಾನು ಮೊದಲೇ ಹೇಳಿದ್ದೇನೆ, ಇದೆಲ್ಲ ಸಹಜ ಎಂದು. ಯಾರೂ ಬೇಕಾದ್ರೂ ಒಂದು ಅಥವಾ ಎರಡು ಕ್ಯಾಚ್​ ಬಿಡಬಹುದು. ಜಾಂಟಿ ರೋಡ್ಸ್ ಅವರಂತಹವರು ಕೂಡ ಕೆಲವೊಮ್ಮೆ ಕ್ಯಾಚ್‌ ಬಿಟ್ಟಿದ್ದಾರೆ. ಅತ್ಯುತ್ತಮ ಫೀಲ್ಡರ್​ ಎಂದೇ ಕರಿಸಿಕೊಳ್ಳುತ್ತಿದ್ದ ಪಾಕಿಸ್ತಾನದ ಜಾವೇದ್​ ಮಿಯಾಂದಾದ್​ ಕೂಡ ಒಂದೆರಡು ಬಾರಿ ಕ್ಯಾಚ್ ಬಿಟ್ಟಿರುತ್ತಾರೆ. ಆದರೆ, ಕೊಹ್ಲಿ ಕ್ರಿಕೆಟ್​ನಿಂದ ವಿಶ್ರಾಂತಿ ಪಡೆದಿದ್ದದ್ದೇ ಕಾರಣ ಎಂದು ಹೇಳಲಾಗದು' ಎಂದಿದ್ದಾರೆ.

ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 10 ರನ್​ಗಳ ಗೆಲುವು ಪಡೆದಿದ್ದ ಆರ್​ಸಿಬಿ ಎರಡನೇ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ಸಂಪೂರ್ಣ ವೈಫಲ್ಯ ಅನುಭವಿಸಿ 97 ರನ್​ಗಳಿಂದ ಹೀನಾಯ ಸೋಲು ಕಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.