ಮುಂಬೈ: ವೃತ್ತಿ ಜೀವನದಂಚಿನಲ್ಲಿರುವ ಧೋನಿ ನಂತರ ಭಾರತದ ಎಲ್ಲ ವಿಭಾಗದ ಕ್ರಿಕೆಟ್ಗೆ ರಿಷಭ್ ಪಂತ್ ಉತ್ತರಾಧಿಕಾರಿ ಎಂದು ಆಯ್ಕೆ ಸಮಿತಿ ತಿಳಿಸಿದೆ. ಆದರೆ, ಪಂತ್ ಧೋನಿ ಉತ್ತರಾಧಿಕಾರಿಯಾಗಬೇಕೆ ಹೊರೆತೂ ಧೋನಿಯಂತಾಗಲೂ ಪ್ರಯತ್ನಿಸಬಾರದು ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ತಿಳಿಸಿದ್ದಾರೆ.
ರಿಷಭ್ ಪಂತ್ ಧೋನಿಯಂತಾಗಲೂ ಪ್ರಯತ್ನಿಸಿ ಸ್ವತಃ ತಾವೇ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದರೆ, ಅವರಲ್ಲಿರುವ ಕೌಶಲ್ಯಗಳನ್ನು ತೋರ್ಪಡಿಸುವಲ್ಲಿ ವಿಫಲರಾಗುತ್ತಿದ್ದಾರೆ. ಪಂತ್ ಬೇರೊಬ್ಬರನ್ನು ಅನುಕರಣೆ ಮಾಡುವುದನ್ನು ಬಿಟ್ಟರೆ ಅವರು ಎಲ್ಲ ವಿಭಾಗದಲ್ಲೂ ಭಾರತದ ನಂಬರ್ ಒನ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಪ್ರಸಾದ್ ಅಭಿಪ್ರಾಯಪಟ್ಟಿದ್ದರು.
ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಪಂತ್ ವೈಫಲ್ಯ ಅನುಭವಿಸಿದ್ದರು. ಆ ಸಂದರ್ಭದಲ್ಲಿ ರೋಹಿತ್ ಶರ್ಮಾ ಕೂಡ ಪಂತ್ರನ್ನು ಅವರ ಪಾಡಿಗೆ ಬಿಟ್ಟು ಬಿಡಿ ಎಂದು ಹೇಳಿ ಪಂತ್ ಬೆಂಬಲಕ್ಕೆ ನಿಂತಿದ್ದರು. ಲೆಜೆಂಡ್ ಗವಾಸ್ಕರ್ ಕೂಡ ಭಾರತದ ಪರ ಆಡುವಾಗ ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ, ಪಂತ್ಗೆ ಸ್ವಲ್ಪ ಸ್ವತಂತ್ರದ ಅಗತ್ಯವಿದೆ ಎಂದಿದ್ದರು.
ಇದೀಗ ಪ್ರಸಾದ್ ಕೂಡ ಪಂತ್ರ ಬೆನ್ನಿಗೆ ನಿಂತಿದ್ದು, ಧೋನಿ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಪಂತ್ ಆರಂಭದಲ್ಲೇ ಧೋನಿಯನ್ನು ಅನುಸರಿಸಲು ಹೋಗಿ ಒತ್ತಡವನ್ನು ಎಳೆದುಕೊಳ್ಳುತ್ತಿದ್ದಾರೆ. ಆದ್ರೆ ತಮ್ಮ ನಂಬಲಸಾಧ್ಯವಾದ ಸಾಮರ್ಥ್ಯ ಹೊಂದಿದ್ದೇನೆ ಎಂಬುದನ್ನು ಮರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸಾಮರ್ಥ್ಯವನ್ನು ನಂಬಿ ಮುನ್ನಡೆಯಲಿ ಎಂದು ಪ್ರಸಾದ್ ಪಂತ್ಗೆ ಕಿವಿಮಾತು ಹೇಳಿದ್ದಾರೆ.