ಅಬುದಾಬಿ: ಆಫ್ಘಾನಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಶ್ಮತುಲ್ಲಾ ಶಾಹಿದ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ದ್ವಿಶತಕ ಸಿಡಿಸಿದ್ದು, ಈ ಮೂಲಕ ಈ ದಾಖಲೆ ನಿರ್ಮಾಣ ಮಾಡಿರುವ ಅಲ್ಲಿನ ಮೊದಲ ಕ್ರಿಕೆಟ್ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.
-
First Afghanistan player to score a Test double ton!
— ICC (@ICC) March 11, 2021 " class="align-text-top noRightClick twitterSection" data="
Take a bow, @Hashmat_50 🔥#AFGvZIM pic.twitter.com/rJeKIYmmXS
">First Afghanistan player to score a Test double ton!
— ICC (@ICC) March 11, 2021
Take a bow, @Hashmat_50 🔥#AFGvZIM pic.twitter.com/rJeKIYmmXSFirst Afghanistan player to score a Test double ton!
— ICC (@ICC) March 11, 2021
Take a bow, @Hashmat_50 🔥#AFGvZIM pic.twitter.com/rJeKIYmmXS
ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣಗೊಂಡಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 443 ಎಸೆತ ಎದುರಿಸಿರುವ ಶಾಹಿದಿ 21 ಬೌಂಡರಿ, 1 ಸಿಕ್ಸರ್ ಸೇರಿ ಅಜೇಯ 200ರನ್ಗಳಿಕೆ ಮಾಡಿದ್ದಾರೆ. ಇವರಿಗೆ ಸಾಥ್ ನೀಡಿದ ಕ್ಯಾಪ್ಟನ್ ಆಸ್ಗರ್ ಆಫ್ಘಾನ್ 164ರನ್ ಬಾರಿಸಿದ್ದಾರೆ.
ಇದನ್ನೂ ಓದಿ: ಫೀಲ್ಡಿಂಗ್ಗೆ ಅಡಚಣೆ: ವಿಚಿತ್ರವಾಗಿ ವಿಕೆಟ್ ಒಪ್ಪಿಸಿದ ಶ್ರೀಲಂಕಾದ ಗುಣತಿಲಕ್
ಹಶ್ಮತುಲ್ಲಾ ಶಾಹಿದ್ ಆಫ್ಘಾನಿಸ್ತಾನದ ಪರ 5 ಟೆಸ್ಟ್, 42 ಏಕದಿನ ಪಂದ್ಯಗಳನ್ನಾಡಿದ್ದು, ಭಾರತದ ವಿರುದ್ಧ 2018ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇವರು ಡೆಬ್ಯು ಮಾಡಿದ್ದಾರೆ.
ಐದು ಟೆಸ್ಟ್ ಪಂದ್ಯಗಳಿಂದ 347ರನ್ಗಳಿಕೆ ಮಾಡಿದ್ದು, 42 ಏಕದಿನ ಪಂದ್ಯಗಳಿಂದ 1155 ರನ್ ಸಿಡಿಸಿದ್ದಾರೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಜಿಂಬಾಬ್ವೆ ಮೊದಲ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದೆ.