ETV Bharat / sports

ಬೌನ್ಸರ್​​ ತಲೆಗೆ ಅಪ್ಪಳಿಸಿ ಗಾಯಗೊಂಡಿದ್ದರೂ ಬ್ಯಾಟ್​ ಮಾಡಿದ್ದ ಹಸ್ಮತುಲ್ಲಾ... ಹೇಳಿದ್ದೇನು ಗೊತ್ತಾ!? - ಹಸ್ಮತುಲ್ಲಾ ಶಾಹಿದಿ

ಕ್ರಿಕೆಟ್​ ಇತಿಹಾಸದಲ್ಲಿ ಬೌಲರ್​ ಎಸೆದ ಚೆಂಡು ಬ್ಯಾಟ್ಸ್​​ಮನ್​ಗಳ ತಲೆಗೆ ಬಿದ್ದು, ಗಾಯಗೊಂಡಿರುವ ಘಟನೆ ಈಗಾಗಲೇ ವರದಿಯಾಗಿದ್ದು ಕೇಳಿಯೇ ಇರ್ತೇವಿ. ಅಂತಹ ಮತ್ತೊಂದು ಘಟನೆ ವಿಶ್ವಕಪ್​​ನಲ್ಲಿ ನಡೆದಿದೆ. ಇಷ್ಟಾದರೂ ಬ್ಯಾಟ್ಸ್​​ಮನ್​ ಮೈದಾನದಲ್ಲಿ ಬ್ಯಾಟ್​ ಬೀಸಿದ್ದಾರೆ.

ಹಸ್ಮತುಲ್ಲಾ ತಲೆಗೆ ಅಪ್ಪಳಿಸಿದ ಬೌನ್ಸರ್​​​
author img

By

Published : Jun 19, 2019, 9:41 PM IST

ಲಂಡನ್​​: ವಿಶ್ವಕಪ್​​ನಲ್ಲಿ ನಿನ್ನೆ ಇಂಗ್ಲೆಂಡ್​​ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆಂಗ್ಲರ ತಂಡ ನೀಡಿದ್ದ 397ರನ್​ಗಳ ಗುರಿ ಬೆನ್ನಟ್ಟಿದ್ದ ಕ್ರಿಕೆಟ್​ ಶಿಶು 150ರನ್​ಗಳ ಸೋಲು ಕಂಡಿದ್ದು, ಎಲ್ಲರಿಗೂ ತಿಳಿದ ವಿಚಾರ.

ಆಫ್ಘಾನಿಸ್ತಾನದ ಹಸ್ಮತುಲ್ಲಾ ಶಾಹಿದಿ 24ರನ್​ಗಳಿಕೆ ಮಾಡಿ, ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಇಂಗ್ಲೆಂಡ್​ ಬೌಲರ್​ ಮಾರ್ಕ್​ ವುಡ್​ ಎಸೆದ ಬೌನ್ಸರ್​​ವೊಂದು ಬ್ಯಾಟ್ಸ್​​ಮನ್​ ಹೆಲ್ಮೆಟ್​ಗೆ ಅಪ್ಪಳಿಸಿದ್ದರಿಂದ ಆತ ಮೈದಾನದಲ್ಲೇ ಕುಸಿದು ಬಿದಿದ್ದಾರೆ. ಈ ವೇಳೆ ಕೆಲ ನಿಮಿಷಗಳ ಕಾಲ ಕ್ರಿಕೆಟರ್ಸ್​​ ಆಘಾತಕ್ಕೊಳಗಾಗಿದ್ದರು. ತಕ್ಷಣ ಐಸಿಸಿ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಕೆಲ ಪಿಜಿಯೋಗಳು ಮೈದಾನಕ್ಕೆ ದಾವಿಸಿದ್ದು, ಪರೀಕ್ಷೆ ನಡೆಸಿದ್ದರು. ಹೆಲ್ಮೆಟ್​ ಒಡೆದು, ನಿಮ್ಮ ತಲೆಗೆ ಗಾಯವಾಗಿದ್ದು, ತಕ್ಷಣ ಮೈದಾನದಿಂದ ಹೊರನಡೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Hashmatullah
ಹಸ್ಮತುಲ್ಲಾ ತಲೆಗೆ ಅಪ್ಪಳಿಸಿದ ಬೌನ್ಸರ್​​​

ಇದಕ್ಕೆ ನಿರಾಕರಿಸಿದ ಹಸ್ಮತುಲ್ಲಾ ಶಾಹಿದಿ, ಸದ್ಯದ ಪರಿಸ್ಥಿತಿಯಲ್ಲಿ ತಂಡಕ್ಕೆ ನನ್ನ ಅವಶ್ಯಕತೆ ತುಂಬಾ ಇದೆ. ತಾವು ಬ್ಯಾಟಿಂಗ್​ ಮುಂದುವರೆಸುವುದಾಗಿ ಹೇಳಿದ್ದಾರೆ. ಜತೆಗೆ ತಕ್ಷಣವೇ ಬ್ಯಾಟ್​ ಬೀಸಲು ಸಜ್ಜಾಗಿದ್ದಾರೆ. ಇದನ್ನ ನೋಡಿದ ಕ್ರೀಡಾಭಿಮಾನಿಗಳು ಚಪ್ಪಾಳೆ ತಟ್ಟಿದ್ದರು. ಇದೇ ವಿಷಯವನ್ನ ಮ್ಯಾಚ್​ ಮುಗಿದ ಬಳಿಕವೂ ಹಸ್ಮತುಲ್ಲಾ ಪುನರುಚ್ಚಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟ್​ ಬೀಸಿದ ಹಸ್ಮತುಲ್ಲಾ 76 ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದರು.

Intro:Body:

ಬೌನ್ಸರ್​​ ತಲೆಗೆ ಅಪ್ಪಳಿಸಿ ಗಾಯಗೊಂಡಿದ್ದರೂ ಬ್ಯಾಟ್​ ಮಾಡಿದ್ದ ಹಸ್ಮತುಲ್ಲಾ... ಹೇಳಿದ್ದೇನು ಗೊತ್ತಾ!? 

ಲಂಡನ್​​: ವಿಶ್ವಕಪ್​​ನಲ್ಲಿ ನಿನ್ನೆ ಇಂಗ್ಲೆಂಡ್​​ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆಂಗ್ಲರ ತಂಡ ನೀಡಿದ್ದ 397ರನ್​ಗಳ ಗುರಿ ಬೆನ್ನಟ್ಟಿದ್ದ ಕ್ರಿಕೆಟ್​ ಶಿಶು 150ರನ್​ಗಳ ಸೋಲು ಕಂಡಿದ್ದು, ಎಲ್ಲರಿಗೂ ತಿಳಿದ ವಿಚಾರ. 

ಆಫ್ಘಾನಿಸ್ತಾನದ ಹಸ್ಮತುಲ್ಲಾ ಶಾಹಿದಿ 24ರನ್​ಗಳಿಕೆ ಮಾಡಿ, ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಇಂಗ್ಲೆಂಡ್​ ಬೌಲರ್​ ಮಾರ್ಕ್​ ವುಡ್​ ಎಸೆದ ಬೌನ್ಸರ್​​ವೊಂದು ಬ್ಯಾಟ್ಸ್​​ಮನ್​ ಹೆಲ್ಮೆಟ್​ಗೆ ಅಪ್ಪಳಿಸಿದ್ದರಿಂದ ಆತ ಮೈದಾನದಲ್ಲೇ ಕುಸಿದು ಬಿದಿದ್ದಾರೆ. ಈ ವೇಳೆ ಕೆಲ ನಿಮಿಷಗಳ ಕಾಲ ಕ್ರಿಕೆಟರ್ಸ್​​ ಆಘಾತಕ್ಕೊಳಗಾಗಿದ್ದರು. ತಕ್ಷಣ ಐಸಿಸಿ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಕೆಲ ಪಿಜಿಯೋಗಳು ಮೈದಾನಕ್ಕೆ ದಾವಿಸಿದ್ದು, ಪರೀಕ್ಷೆ ನಡೆಸಿದ್ದರು.  ಹೆಲ್ಮೆಟ್​ ಒಡೆದು, ನಿಮ್ಮ ತಲೆಗೆ ಗಾಯವಾಗಿದ್ದು, ತಕ್ಷಣ ಮೈದಾನದಿಂದ ಹೊರನಡೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಇದಕ್ಕೆ ನಿರಾಕರಿಸಿದ ಹಸ್ಮತುಲ್ಲಾ ಶಾಹಿದಿ, ಸದ್ಯದ ಪರಿಸ್ಥಿತಿಯಲ್ಲಿ ತಂಡಕ್ಕೆ ನನ್ನ ಅವಶ್ಯಕತೆ ತುಂಬಾ ಇದೆ. ತಾವು ಬ್ಯಾಟಿಂಗ್​ ಮುಂದುವರೆಸುವುದಾಗಿ ಹೇಳಿದ್ದಾರೆ. ಜತೆಗೆ ತಕ್ಷಣವೇ ಬ್ಯಾಟ್​ ಬೀಸಲು ಸಜ್ಜಾಗಿದ್ದಾರೆ. ಇದನ್ನ ನೋಡಿದ ಕ್ರೀಡಾಭಿಮಾನಿಗಳು ಚಪ್ಪಾಳೆ ತಟ್ಟಿದ್ದರು. ಇದೇ ವಿಷಯವನ್ನ ಮ್ಯಾಚ್​ ಮುಗಿದ ಬಳಿಕವೂ ಹಸ್ಮತುಲ್ಲಾ ಪುನರುಚ್ಚಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟ್​ ಬೀಸಿದ ಹಸ್ಮತುಲ್ಲಾ 76ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.