ETV Bharat / sports

'ರಾಹುಲ್​ ನಾಯಕತ್ವ, ಕುಂಬ್ಳೆ ಕೋಚಿಂಗ್​ ನೆರವಿನಿಂದ ಪಂಜಾಬ್​ ಐಪಿಎಲ್​ ಟ್ರೋಫಿ ಗೆಲ್ಲಬಲ್ಲದು'

ಕೆ ಎಲ್​ ರಾಹುಲ್​ ಜತೆ ಕಳೆದ ಆವೃತ್ತಿಯಲ್ಲಿ ಆಡಿದ್ದೇನೆ. ಅವರು ತುಂಬಾ ಶಾಂತ ಸ್ವಭಾವದವರು. ಮತ್ತು ಆಟಗಾರರಿಂದ ಸದಾ ಉತ್ತಮ ಪ್ರದರ್ಶನ ಪಡೆಯಲು ಬಯಸುತ್ತಾರೆ. ತಂಡದ ಯಶಸ್ಸಿಗೆ ಅದು ಅಗತ್ಯವಾಗಿ ಬೇಕಾದ ಅಂಶ. ನೀವು ನಿಮ್ಮ ಆಟಗಾರರಿಂದ ಉತ್ತಮವಾದುದನ್ನು ಪಡೆಯಲು ಏನು ಮಾಡಬೇಕೆಂದು ಆಲೋಚಿಸಬೇಕು..

ಕಿಂಗ್ಸ್​  ಇಲೆವೆನ್ ಪಂಜಾಬ್
ಕಿಂಗ್ಸ್​ ಇಲೆವೆನ್ ಪಂಜಾಬ್
author img

By

Published : Sep 2, 2020, 7:15 PM IST

ದುಬೈ : 13ನೇ ಆವೃತ್ತಿಯ ಐಪಿಎಲ್​ ಗೆಲ್ಲಲು ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಕ್ಕೆ ಇರಬೇಕಾದ ಎಲ್ಲಾ ಅರ್ಹತೆಗಳು ಇವೆ ಎಂದು ದಕ್ಷಿಣ ಆಫ್ರಿಕಾದ ಹಾರ್ಡಸ್ ವಿಲ್ಜೋಯೆನ್​ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ರಾಹುಲ್​ರಂತಹ ನಾಯಕ ಹಾಗೂ ಕುಂಬ್ಳೆಯಂತಹ ಉತ್ತಮ ಕೋಚ್​ ಹೊಂದಿರುವುದು ತಂಡದ ಪ್ಲಸ್​ ಪಾಯಿಂಟ್​ ಎಂದಿದ್ದಾರೆ.

ಯುಎಇನಲ್ಲಿ ಒಂದೂ ಪಂದ್ಯ ಸೋಲದ ತಂಡವಾಗಿರುವ ಕಿಂಗ್ಸ್​ ಇಲೆವೆನ್​ ಪಂಜಾಬ್​ಗೆ ಅದು ಧನಾತ್ಮಕ ಅಂಶ ಎಂದಿದ್ದಾರೆ. 2014ರಲ್ಲಿ ಭಾರತದಲ್ಲಿ ಚುನಾವಣೆ ಇದ್ದಿದ್ದರಿಂದ ಯುಎಇನಲ್ಲಿ ಕೆಲವು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಪಂಜಾಬ್ ಪ್ರಾಬಲ್ಯ ಸಾಧಿಸಿತ್ತು. "ಯುಎಇನಲ್ಲಿ ಸೋಲದ ತಂಡವೆಂದರೆ ಅದು ಕಿಂಗ್ಸ್​ ಇಲೆವೆನ್​ ಮಾತ್ರ. ಮಾನಸಿಕವಾಗಿ ಇದೊಂದು ಉತ್ತಮ ಅಂಶ.

ಆದರೆ, ಅದನ್ನ ನಂಬಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಇದು ಸವಾಲಿನ ಸಂಗತಿಯಾದರೂ ನಾವು ಟ್ರೋಫಿ ಗೆಲ್ಲುವ ತಂಡ ಹೊಂದಿದ್ದು, ಟ್ರೋಫಿಯನ್ನು ಗೆಲ್ಲಲು ಸಮರ್ಥರಿದ್ದೇವೆ ಎಂದು ಭಾವಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡಿಗ ಕೆಎಲ್​ ರಾಹುಲ್​ ಹಾಗೂ ಕೋಚ್​ ಅನಿಲ್​ ಕುಂಬ್ಳೆಯ ಬಗ್ಗೆಯೂ ಹಾರ್ಡಸ್ ವಿಲ್ಜೋಯೆನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾರ್ಡಸ್ ವಿಲ್ಜೋಯೆನ್​
ಹಾರ್ಡಸ್ ವಿಲ್ಜೋಯೆನ್​

"ಕೆ ಎಲ್​ ರಾಹುಲ್​ ಜೊತೆ ಕಳೆದ ಆವೃತ್ತಿಯಲ್ಲಿ ಆಡಿದ್ದೇನೆ. ಅವರು ತುಂಬಾ ಶಾಂತ ಸ್ವಭಾವದವರು. ಮತ್ತು ಆಟಗಾರರಿಂದ ಸದಾ ಉತ್ತಮ ಪ್ರದರ್ಶನ ಪಡೆಯಲು ಬಯಸುತ್ತಾರೆ. ತಂಡದ ಯಶಸ್ಸಿಗೆ ಅದು ಅಗತ್ಯವಾಗಿ ಬೇಕಾದ ಅಂಶ. ನೀವು ನಿಮ್ಮ ಆಟಗಾರರಿಂದ ಉತ್ತಮವಾದುದನ್ನು ಪಡೆಯಲು ಏನು ಮಾಡಬೇಕೆಂದು ಆಲೋಚಿಸಬೇಕು. ಆಗ ತಂಡದಲ್ಲಿ ಉತ್ತಮ ಪರಿಸರ ನಿರ್ಮಾಣವಾಗುತ್ತದೆ" ಎಂದಿದ್ದಾರೆ.

ಕೆ ಎಲ್​ ನಂಬಲಸಾಧ್ಯವಾದ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ. ನಾನು ಅವರನ್ನು ಒಬ್ಬ ಆಟಗಾರನಾಗಿ ತುಂಬಾ ಗೌರವಿಸುತ್ತೇನೆ. ಕಳೆದ ಆವೃತ್ತಿಯಿಂದಲೂ ಅವರ ಬಗ್ಗೆ ತಿಳಿದುಕೊಂಡಿದ್ದೇನೆ. ಅವರೊಂದಿಗೆ ಉತ್ತಮ ಮಾತುಕತೆ ಸಹ ನಡೆಸಿದಿದ್ದೇನೆ. ಅವರು ಸದಾ ಆಟಗಾರರಿಗೆ ಯಾವುದೇ ಸಂದರ್ಭದಲ್ಲಾದರೂ ನರೆವಾಗುತ್ತಾರೆ. ಹೊಸಬರಾಗಿರಬಹುದು, ಯಾವ ತಂಡದಿಂದ ಬಂದಿರುವವರಾಗಿದ್ದರೂ ಅವರನ್ನು ಆರಾಮದಾಯಕವಾಗಿರುವಂತೆ ನೋಡಿಕೊಳ್ಳುತ್ತಾರೆ ಎಂದು 31 ವರ್ಷದ ವೇಗಿ ತಿಳಿಸಿದ್ದಾರೆ.

ಅನಿಲ್​ ಕುಂಬ್ಳೆ ಭಾಯ್​ ಜೊತೆಯೂ ಒಂದೆರಡು ಸೆಷನ್​ ಕಳೆದಿರುವೆ. ಅವರು ನಿಜಕ್ಕೂ ನನಗೆ ಅದ್ಭುತವೆನಿಸಿದ್ದಾರೆ. ತಂಡದಲ್ಲಿ ಅವರು ಮತ್ತು ಇತರೆ ಕೋಚ್​ಗಳು ಆಟಗಾರರಿಗೆ ಉತ್ತಮ ವಾತಾವರಣ ನಿರ್ಮಿಸಿದ್ದು, ಎಲ್ಲಾ ಅವರವರ ಜವಾಬ್ದಾರಿಯನ್ನು ಅದ್ಭುತವಾಗಿ ವಿವರಿಸುತ್ತಾರೆ ಎಂದು ದಕ್ಷಿಣ ಆಫ್ರಿಕಾದ ವೇಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.